8 ಪೊಲೀಸರ ಕೊಂದ ಪಾತಕಿ ಮನೆ ಸಂಪೂರ್ಣ ನಾಶ| ಪೊಲೀಸರ ರಸ್ತೆಗೆ ತಡೆಯೊಡ್ಡಲು ಪಾತಕಿ ಹಾಗೂ ಆತನ ಗ್ಯಾಂಗ್‌ ಬಳಸಿದ್ದ ಅರ್ಥ್ ಮೂವರ್‌ ಅನ್ನೇ ಬಳಸಿ ನಾಶ

ಕಾನ್ಪುರ(ಜು.05): ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಮಂದಿ ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕುಖ್ಯಾತ ರೌಡಿ ವಿಕಾಸ್‌ ದುಬೆಗೆ ಸೇರಿದ ಮನೆಯನ್ನು ಜಿಲ್ಲಾಡಳಿತ ಶನಿವಾರ ಕೆಡವಿಹಾಕಿದೆ.

ಪೊಲೀಸರ ರಸ್ತೆಗೆ ತಡೆಯೊಡ್ಡಲು ಪಾತಕಿ ಹಾಗೂ ಆತನ ಗ್ಯಾಂಗ್‌ ಬಳಸಿದ್ದ ಅಥ್‌ರ್‍ ಮೂವರ್‌ ಅನ್ನೇ ಬಳಸಿ ಆತನ ಮನೆಯನ್ನು ಕೆಡವಲಾಗಿದೆ. ಸುತ್ತಮುತ್ತಲ ಜನರನ್ನು ಹೆದರಿಸಿ, ಜಾಗ ಕಬಳಿಸಿ ಮನೆಯನ್ನು ದುಬೆ ಕಟ್ಟಿಸಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

Scroll to load tweet…

12 ಅಡಿ ಗೋಡೆ, ಆತನ ಎರಡು ಐಷಾರಾಮಿ ವಾಹನಗಳನ್ನೂ ಈ ವೇಳೆ ನಾಶಪಡಿಸಲಾಗಿದೆ. ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲೆ ನಡೆದ ಭೀಕರ ದಾಳಿಯ ಬಳಿಕ ವಿಕಾಸ್‌ ದುಬೆ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ 25ಕ್ಕೂ ಹೆಚ್ಚು ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ಆತನ ಇರುವಿಕೆಯನ್ನು ಪತ್ತೆ ಮಾಡಲು 500ಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೇ ಆತನ ಬಗ್ಗೆ ಮಾಹಿತಿ ಕೊಟ್ಟವರಿಗೆ 50 ಸಾವಿರ ರು. ನಗದು ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.