Asianet Suvarna News Asianet Suvarna News

ರಾಜ್ಯಗಳಲ್ಲಿ ನೌಕರರ ಕರ್ತವ್ಯ ಅವಧಿ 8ರಿಂದ 12 ತಾಸಿಗೆ ವಿಸ್ತರಣೆ!

6 ರಾಜ್ಯಗಳಲ್ಲಿ ನೌಕರರ ಕರ್ತವ್ರ್ಯಾವಧಿ 8ರಿಂದ 12 ತಾಸಿಗೆ ವಿಸ್ತರಣೆ| ಗುಜರಾತ್‌, ರಾಜಸ್ಥಾನ, ಹರ್ಯಾಣ, ಮಧ್ಯಪ್ರದೇಶ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶಗಳು ಈ ಸಂಬಂಧ ಇದ್ದ ಕೆಲಸದ ನಿಯಮಗಳಿಗೆ ತಿದ್ದುಪಡಿ ತಂದಿವೆ.

6 states increases the working hours of its employees from 8 to 12 hours
Author
Bangalore, First Published May 2, 2020, 3:25 PM IST

ನವದೆಹಲಿ(ಮೇ.02): ಎಲ್ಲೆಲ್ಲಿ ಕೊರೋನಾ ತೀವ್ರವಾಗಿಲ್ಲವೋ ಅಲ್ಲಲ್ಲಿ ಉದ್ದಿಮೆಗಳು ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಬಾಕಿ ಉಳಿದಿರುವ ಕೆಲಸ ಸರಿದೂಗಿಸಿಕೊಳ್ಳಲು 6 ರಾಜ್ಯಗಳಲ್ಲಿ ನೌಕರರ ಕೆಲಸದ ಅವಧಿಯನ್ನು ದಿನಕ್ಕೆ 8 ತಾಸಿನಿಂದ 12 ತಾಸಿಗೆ ಹೆಚ್ಚಿಸಲಾಗಿದೆ.

ಗುಜರಾತ್‌, ರಾಜಸ್ಥಾನ, ಹರ್ಯಾಣ, ಮಧ್ಯಪ್ರದೇಶ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶಗಳು ಈ ಸಂಬಂಧ ಇದ್ದ ಕೆಲಸದ ನಿಯಮಗಳಿಗೆ ತಿದ್ದುಪಡಿ ತಂದಿವೆ. ಲಾಕ್‌ಡೌನ್‌ ಮುಗಿದ ನಂತರವೂ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ಉತ್ಪಾದನೆಯ ಟಾರ್ಗೆಟ್‌ ತಲುಪುವ ಉದ್ದೇಶದಿಂದ ಇದ್ದ ನೌಕರರಿಗೇ 4 ತಾಸು ಹೆಚ್ಚು ಕೆಲಸ ಮಾಡಿಸಿಕೊಳ್ಳಲು ಉದ್ದಿಮೆಗಳಿಗೆ ಅನುಮತಿ ನೀಡಲಾಗಿದೆ.

ದೆಹಲಿ ಮರ್ಕಝ್‌ನಲ್ಲಿ ಪಾಲ್ಗೊಂಡ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್!

ಆದರೆ ರಾಜಸ್ಥಾನ ಹೊರತುಪಡಿಸಿ 4 ಗಂಟೆ ಹೆಚ್ಚು ಕೆಲಸ ಮಾಡಿಸಿಕೊಂಡರೆ ಅದನ್ನು ‘ಔವರ್‌ಟೈಂ ಡ್ಯೂಟಿ’ (ಒ.ಟಿ.) ಎಂದು ಪರಿಗಣಿಸಲಾಗುತ್ತಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಾಜಸ್ಥಾನದಲ್ಲಿ ಅದನ್ನು ‘ಒ.ಟಿ.’ ಪರಿಗಣಿಸುವಂತೆ ಆದೇಶಿಸಿ 3 ತಿಂಗಳ ಮಟ್ಟಿಗೆ ಒ.ಟಿ.ಗೆ ಅನುಮತಿಸಲಾಗಿದೆ.

ಆದರೆ ಗುಜರಾತ್‌ನಲ್ಲಿ ಇದನ್ನು ‘ಒ.ಟಿ.’ ಎಂದು ಪರಿಗಣಿಸಲಾಗದು. 6 ತಾಸಿಗೊಮ್ಮೆ ಕಾರ್ಮಿಕರಿಗೆ ವಿಶ್ರಾಂತಿ ನೀಡಬೇಕು ಎಂದು ಸೂಚಿಸಲಾಗಿದೆ.

ಇನ್ನು ಅನೇಕ ಉದ್ದಿಮೆಗಳು ‘ಒ.ಟಿ.’ ವೇತನ ನೀಡಲು ಅಸಹಾಯಕತೆ ವ್ಯಕ್ತಪಡಿಸಿವೆ. ಈ ನಡುವೆ, ದಿಲ್ಲಿ ಕಾರ್ಮಿಕ ಸಂಘಟನೆಯೊಂದರ ನೇತಾರ ಚಂದನ್‌ ಕುಮಾರ್‌ ಅವರು, ‘ಏಕಪಕ್ಷೀಯವಾಗಿ ಒ.ಟಿ. ನಿರ್ಧಾರ ಅಕ್ರಮ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದು’ ಎಂದಿದ್ದಾರೆ.

Follow Us:
Download App:
  • android
  • ios