ಲಾಂಡ್ರಿ ಮಾಲೀಕ ಕೊರೋನಾ ವೈರಸ್‌ಗೆ ತುತ್ತಾಗಿರುವುದು ಸಾಬೀತು| ಲಾಂಡ್ರಿಯ ಸುತ್ತಮುತ್ತಲಿನ ಮನೆಗಳನ್ನು ಗುರುತಿಸಿ 54,000 ಮಂದಿಗೆ ಹೋಂ ಕ್ವಾರಂಟೈನ್‌

ಸೂರತ್‌(ಏ.04): ಲಾಂಡ್ರಿ ಮಾಲೀಕ ಕೊರೋನಾ ವೈರಸ್‌ಗೆ ತುತ್ತಾಗಿರುವುದು ಸಾಬೀತಾದ ಬೆನ್ನಿಗೇ ಇದೀಗ ಆತನ ಲಾಂಡ್ರಿಯ ಸುತ್ತಮುತ್ತಲಿನ ಮನೆಗಳನ್ನು ಗುರುತಿಸಿ 54,000 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ!

ಸೂರತ್‌ನ 67 ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್‌ ಇರುವುದು ಗುರುವಾರದ ಪರೀಕ್ಷೆಯ ಬಳಿಕ ಸಾಬೀತಾಗಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಆತನ ಸಂಪರ್ಕವಿರುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಆಗ ಲಾಂಡ್ರಿ ಮಾಲೀಕ ಎನ್ನುವುದು ತಿಳಿದಿದೆ. ತಕ್ಷಣ ಲಾಂಡ್ರಿ ಸಂಪರ್ಕವಿರುವ ಮನೆಗಳ ಹಾಗೂ ಸುತ್ತಮುತ್ತಲಿನ ಉಳಿದ ಮನೆಗಳನ್ನೂ ಗುರುತಿಸಿದ್ದಾರೆ.

ತಬ್ಲೀಘಿ ಹಣದ ಮೂಲ ಯಾವುದು? ಜಮಾತ್‌ ಮುಖ್ಯಸ್ಥ ಸಾದ್‌ಗೆ ನೋಟಿಸ್‌!

16,785 ಮನೆಗಳಿಂದ ಸುಮಾರು 54,003 ಮಂದಿಗೆ ಮನೆಯಿಂದ ಹೊರ ಬಾರದಂತೆ ದಿಗ್ಬಂಧನ ಹೇರಿದ್ದಾರೆ.