ನವದೆಹಲಿ(ಏ.04): ಕೊರೋನಾ ವೈರಸ್‌ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯ ಸಮುದಾಯಕ್ಕೇ ಈಗ ಕೊರೋನಾ ಭೀತಿ ಎದುರಾಗಿದೆ. ಸುಮಾರು 50 ವೈದ್ಯರು ಮತ್ತುವ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ವೈದ್ಯರಿಗೆ ಸೋಂಕಿನ ಮೂಲದ ಪರಿಶೋಧನೆ ಆರಂಭಿಸಿದೆ. ‘ಎಲ್ಲ ವೈದ್ಯರಿಗೂ ಕೊರೋನಾ ಪೀಡಿತರಿಂದಲೇ ಸೋಂಕು ತಗುಲಿದೆ ಎನ್ನಲಾಗದು. ಸೋಂಕಿತ ವಿದೇಶೀಯರ ಜತೆ ಅಥವಾ ಬೇರೊಬ್ಬ ಸೋಂಕಿತರ ಜತೆಗಿನ ಸಂಪರ್ಕದಿಂದಲೂ ಬಂದಿರಬಹುದು. ಪರಿಶೋಧನೆ ನಡೆದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಾಕ್‌ಡೌನ್‌: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್‌ ಸೌಲಭ್ಯ

ಸೋಂಕು ನಿರೋಧಕ ಸಾಧನಗಳ ಕೊರತೆ ಇರುವುದೂ ವೈದ್ಯರಿಗೆ ಕೊರೋನಾ ಹರಡುವಿಕೆಯ ಸಾಧ್ಯತೆ ಹೆಚ್ಚಿಸಿದೆ.

ಸೇನೆಯ ಹಾಗೂ ಸಿಆರ್‌ಪಿಎಫ್‌ನ ಒಬ್ಬ ವೈದ್ಯರು, ದಿಲ್ಲಿ ಏಮ್ಸ್‌ ಆಸ್ಪತ್ರೆಯ ಒಬ್ಬ ವೈದ್ಯ, ದಿಲ್ಲಿಯ ಇಬ್ಬರು ಸರ್ಕಾರಿ ಮೊಹಲ್ಲಾ ಕ್ಲಿನಿಕ್‌ ಆಸ್ಪತ್ರೆಯ ವೈದ್ಯರು ಈಗಾಗಲೇ ಈ 50 ಸೋಂಕಿತ ವೈದ್ಯರ ಪಟ್ಟಿಯಲ್ಲಿದ್ದಾರೆ.