ಕೊಯಂಬತ್ತೂರ್(ಏ.11):  ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಲಾಕ್‌ಡೌನ್ ವಿಸ್ತರಣೆಯಾಗುತ್ತಿದೆ. ಹೆಚ್ಚಿನವರದ್ದು ಒಂದೇ ಮಾತು ಮನೆಯಲ್ಲಿ ಕೂತು ಸಾಕಾಯ್ತು, ಮನೆಯಲ್ಲಿ ಏನುಮಾಡಲಿ, ಹೊರಗೆ ಬರಲು ಅನುಮಾಡಿಕೊಡಿ ಎನ್ನುತ್ತಿದ್ದಾರೆ. ಇವರೆಲ್ಲರಿಗೂ ಕೊಯಂಬತ್ತೂರಿನ ವಿದ್ಯಾರ್ಥಿ ಮಾದರಿಯಾಗಿದ್ದಾರೆ. 

ಸ್ಪೇನ್‌ನಲ್ಲಿ MBA ಕೋರ್ಸ್ ಮಾಡುತ್ತಿರುವ 25 ವರ್ಷದ ವಿದ್ಯಾರ್ಥಿ ಕಳೆದ ತಿಂಗಳ ಮಾರ್ಚ್ 16ಕ್ಕೆ ತವರಿಗೆ ವಾಪಾಸ್ಸಾಗಿದ್ದಾಳೆ. ಈ ವೇಳೆ ತಪಾಸಣೆ ಮಾಡಿದಾಗ ಕೊರೋನಾ ಪಾಸಿಟೀವ್ ವರದಿ ಬಂದಿದೆ. ಹೀಗಾಗಿ ಕೊಯಂಬತ್ತೂರಿ ಇಎಸ್ಇ ಆಸ್ಪತ್ರೆಯಲ್ಲಿ 18 ದಿನ ಚಿಕಿತ್ಸೆ ಪಡೆದಿದ್ದಾಳೆ. ಈ ವೇಳೆ ವಿದ್ಯಾರ್ಥಿ ಲ್ಯಾಪ್‌ಟಾಪ್ ಬಳಿಕ ಆನ್‌ಲೈನ್ ಮೂಲಕ ಪರೀಕ್ಷೆ ಬರೆದಿದ್ದಾಳೆ. ಇಷ್ಟೇ ಅಲ್ಲ ಆಸೈನ್‌ಮೆಂಟ್ ಕೂಡ ಮುಗಿಸಿದ್ದಾರೆ. 

ಎಪ್ರಿಲ್ 6ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ವಿದ್ಯಾರ್ಥಿ ತನ್ನ MBA ಕೋರ್ಸ್ ಮುಗಿಸಿದ್ದಾಳೆ. ಆಸ್ಪತ್ರೆಯಿಂದ ಮನೆಗೆ ಬಂದು ಮತ್ತೆ 14ದಿನ ಕ್ವಾರಂಟೈನ್‌ಗೆ ಒಳಗಾಗಿದ್ದಾಳೆ. ಇದೀಗ ವಿದ್ಯಾರ್ಥಿನಿ ಕೊರೋನಾ ವೈರಸ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾಳೆ. ಇಷ್ಟೇ ಅಲ್ಲ ಇದೇ ವೇಳೆ MBA ಕೋರ್ಸ್ ಕೂಡ ಮುಗಿಸಿ ಇದೀಗ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲಕಳೆಯುತ್ತಿದ್ದಾಳೆ.