Zeenat Aman: ಮೊದಲ ಪತಿ ದವಡೆ ಮುರಿದ, 3ನೇಯವ ರೇಪ್​ ಮಾಡಿದ, ಬಾಲಿವುಡ್​ ಸೆಕ್ಸಿಯ ಭಯಾನಕ ಸ್ಟೋರಿ!

ಮೂರು ದಶಕಗಳವರೆಗೆ ಬಾಲಿವುಡ್​ ಆಳಿದ್ದ ತಾರೆ ಜೀನತ್​ ಅಮಾನ್​ ಅವರ ಬದುಕು ದುರಂತಗಳ ಸರಮಾಲೆ. ಅವ ಬದುಕಿನಲ್ಲಿ ನಡೆದದ್ದೇನು?
 

Bollywood Actress Zeenat Aman's heart wrenching story

ನವದೆಹಲಿ: 70 ರಿಂದ 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಒಬ್ಬರು  ಜೀನತ್ ಅಮಾನ್ (Zeenat Aman). ತಮ್ಮ ಸೆಕ್ಸಿ ಲಿಕ್​ ಹಾಗೂ ಅಮಲೇರಿದ ಕಣ್ಣುಗಳಿಂದಲೇ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಇವರು. ಆ ಕಾಲದಲ್ಲಿಯೇ ಅತ್ಯಂತ ಬೋಲ್ಡ್​ ಆಗಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟಿ ಇವರು.  1971ರಲ್ಲಿ ಬಿಡುಗಡೆಯಾಗಿದ್ದ ಹರೇ ಕೃಷ್ಣ ಹರೇ ರಾಮ್​ ಚಿತ್ರದಲ್ಲಿನ ದಮ್ಮೊರೆ ದಂ... ಹಾಡಂತೂ ಕೆಲ ದಶಕಗಳವರೆಗೆ ಎಲ್ಲರ ಬಾಯಲ್ಲೂ ನಲಿದಾಡಿತ್ತು. ತಮ್ಮ ಮಾದಕ ನೋಟ, ನೃತ್ಯದಿಂದ ಜೀನತ್​ ಹಲವರ ಹೃದಯ ಗೆದ್ದಿದ್ದರು. ಆದರೆ ಎಲ್ಲರ ಕಣ್ಣಿಗೆ ಕಾಣುವ ಬಣ್ಣದ ಲೋಕದಂತೆ ಕೆಲವು ನಟ ನಟಿಯರ ನಿಜ ಜೀವನ ಬಣ್ಣದ್ದಾಗಿರುವುದಿಲ್ಲ. ಅಲ್ಲಿ ಬರೀ ಕತ್ತಲು, ನೋವು, ನಿರಾಸೆ. ಅಂಥ ಕೆಟ್ಟ ಜೀವನವನ್ನು ಅನುಭವಿಸಿರುವವರಲ್ಲಿ ಜೀನತ್​ ಅಮಾನ್​ ಕೂಡ ಒಬ್ಬರು. ಇವರ ವೈಯಕ್ತಿಕ ಜೀವನ ಎಂದಿಗೂ ಸಂತೋಷವಾಗಿಲ್ಲ. 

ಹೌದು. ಇವರ ಜೀವನವೇ ದೊಡ್ಡ ಟ್ರ್ಯಾಜಡಿ. ಜೀನತ್ ಮೊದಲು ನಟ ಸಂಜಯ್ ಖಾನ್ (Sanjay Khan) ಅವರನ್ನು ವಿವಾಹವಾದರು. ಆದರೆ ಶೀಘ್ರದಲ್ಲೇ ಅವರು ಅವರಿಂದ ವಿಚ್ಛೇದನ (Divorce) ಪಡೆದರು. ಈ ದಾಂಪತ್ಯದಲ್ಲಿ ಜೀನತ್ ಸಾಕಷ್ಟು ಕಳೆದುಕೊಂಡರು.  ಸೌಂದರ್ಯದ ಜೊತೆಗೆ  ವೃತ್ತಿ ಜೀವನದಲ್ಲಿಯೂ ಇವರಿಗೆ ಬಹಳ ಹಿನ್ನಡೆಯಾಯಿತು.  1978 ರಲ್ಲಿ ಈ ವಿವಾಹ ನಡೆದಿತ್ತು.  ಇಬ್ಬರೂ ಬಹಳ ರಹಸ್ಯವಾಗಿ ಮದುವೆಯಾಗಿದ್ದರು.   ಆ ದಿನಗಳಲ್ಲಿ ಜೀನತ್ ಯಶಸ್ಸಿನ ಉತ್ತುಂಗದಲ್ಲಿದ್ದರು. ಸಂಜಯ್ ಖಾನ್​ಗೆ ಅದಾಗಲೇ  ಮದುವೆಯಾಗಿ ಮೂರು ಮಕ್ಕಳಿದ್ದರು. ಈ ಹಿನ್ನೆಲೆಯಲ್ಲಿ ಜೀನತ್ ಅವರನ್ನು ಗುಟ್ಟಾಗಿ ಮದುವೆಯಾದರು. ಇದು ಜೀನತ್​ ಬಾಳಿನ ಬಹು ದೊಡ್ಡ ದುರಂತ.

ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್​ ಸ್ಟಾರ್​!

ಜೀನತ್ ತಮ್ಮ ಸೌಂದರ್ಯದಿಂದ ಇಡೀ ಇಂಡಸ್ಟ್ರಿಯನ್ನು ಹುಚ್ಚೆಬ್ಬಿಸಿದ್ದರೂ,  ನಟ ಸಂಜಯ್‌ ಖಾನ್​ ಅವರ  ಅಭಿಮಾನಿಯಾಗಿದ್ದರು. ಆದರೆ ಈ ದಾಂಪತ್ಯ ಬಹಳ ಕಾಲ ಉಳಿಯಲಿಲ್ಲ. ಸಂಜಯ್ ಖಾನ್ ಪತ್ನಿಗೂ ವಿಷಯ ತಿಳಿದು ಜೀನತ್​ ಅವರ ಕೆನ್ನೆಗೆ ಹೊಡೆದಿದ್ದರು. ಇತ್ತ ಮದುವೆಯಾದ ಮೇಲೆ ಸಂಜಯ್​ ಖಾನ್​ರ ವರಸೆ ಬದಲಾಯಿತು. ಅವರು ಆಗಾಗ ಥಳಿಸುತ್ತಿದ್ದರು ಎನ್ನಲಾಗಿದೆ.  ಜೀನತ್ ನಿರ್ದೇಶಕರೊಬ್ಬರ (Director) ಜೊತೆ ಸಂಬಂಧ ಹೊಂದಿರುವುದಾಗಿ ಅನುಮಾನಿಸಿದ್ದ ಸಂಜಯ್​ ವರ್ತನೆ ಬದಲಾಗಿತ್ತು.  ಒಮ್ಮೆ ಜೀನತ್​ ಲೋನಾವಾಲಾದಲ್ಲಿ ಶೂಟಿಂಗ್​ನಲ್ಲಿದ್ದಾಗ ಸಂಜಯ್​ ಇದೇ ವಿಷಯ ತೆಗೆದು ಜಗಳವಾಡಿದ್ದಾರೆ. ಕೂಡಲೇ ಜೀನತ್​  ಶೂಟಿಂಗ್‌ ಬಿಟ್ಟು ಮುಂಬೈಗೆ ವಾಪಸಾಗಿದ್ದಾರೆ. ಅಲ್ಲಿ ನೋಡಿದರೆ  ಸಂಜಯ್ ತಮ್ಮ ಮೊದಲ ಹೆಂಡತಿ ಮತ್ತು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ಜೀನತ್ ಕೋಪದಿಂದ ಬಂದಾಗ ಆಕೆಯನ್ನು ನೋಡಿದ ಸಂಜಯ್ ಖಾನ್​ ಜೋರಾಗಿ ಮುಖಕ್ಕೆ ಗುದ್ದಿದ್ದರಿಂದ ಜೀನತ್​ ಅವರ ದವಡೆ ಮುರಿದುಹೋಗಿತ್ತು. 

ಇಬ್ಬರ ನಡುವೆ ವಾಗ್ವಿವಾದ ನಡೆದು  ಸಂಜಯ್ ಖಾನ್​ ಜೀನತ್ ಅವರನ್ನು ನಿರ್ದಯವಾಗಿ ಥಳಿಸಲು ಆರಂಭಿಸಿದರು. ಕೋಣೆಯ ಹೊರಗೆ ಕೂಗುವ ಧ್ವನಿಗಳು ಕೇಳಿಬಂದವು. ಆದರೆ ಯಾರೂ ಅವರನ್ನು ರಕ್ಷಿಸಲಿಲ್ಲ.  ಬಳಿಕ ಹೋಟೆಲ್ ಸಿಬ್ಬಂದಿ ರಕ್ತದ (Blood) ಮಡುವಿನಲ್ಲಿ ಬಿದ್ದಿದ್ದ ಜೀನತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ವೇಳೆ ಜೀನತ್ ಅವರ ಕಣ್ಣಿಗೂ ಸಾಕಷ್ಟು ಗಾಯಗಳಾಗಿದ್ದು, ಆಕೆಯ ದವಡೆಯೂ ಮುರಿದಿದೆ ಎಂದು ತಿಳಿದುಬಂತು.  ನಂತರ ಜೀನತ್ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. 

Rakhi Sawant: ನಾನು ಫ್ರಿಡ್ಜ್​ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್​ಗೆ ಆಗಿದ್ದಾದ್ರೂ ಏನು?

ಸಂಜಯ್ ಖಾನ್ ಅವರೊಂದಿಗೆ ಮುರಿದುಬಿದ್ದ ನಂತರ, ಜೀನತ್ ನಟ ಮತ್ತು ನಿರ್ಮಾಪಕ ಮಝರ್ ಖಾನ್ (Maghar Khan)ಅವರನ್ನು ಮರುಮದುವೆಯಾದರು ಮತ್ತು ಅವರೊಂದಿಗೆ ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಮಝರ್ ನಂತರ ಸಾವನ್ನಪ್ಪಿದರು.  ನಂತರ, ಜೀನತ್ ಅಮಾನ್ ಅಮನ್ ಖನ್ನಾ ಅಕಾ ಸರ್ಫರಾಜ್ ಜಾಫರ್ ಅಹ್ಸನ್  ಅವರನ್ನು ವಿವಾಹವಾದರು. 2012ರಲ್ಲಿ ಈ ಮದುವೆ ನಡೆದಿತ್ತು. ಸರ್ಫರಾಜ್ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ. ಆ ದಿನಗಳಲ್ಲಿ ಜೀನತ್ 59 ವರ್ಷ ವಯಸ್ಸಿನವನಾಗಿದ್ದಾಗ ಸರ್ಫರಾಜ್ (Sarfaraj) 33 ವರ್ಷ ವಯಸ್ಸಿನವರಾಗಿದ್ದರು.  ಆದಾಗ್ಯೂ, ಈ ಮದುವೆಯು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಈ ಮದುವೆಯನ್ನು ಮುರಿದುಕೊಳ್ಳುವಾಗ, ಜೀನತ್ ಸರ್ಫರಾಜ್ ಮೇಲೆ ಅತ್ಯಾಚಾರ ಮತ್ತು ವಂಚನೆ ಎಂದು ಆರೋಪಿಸಿದರು. ಜೀನತ್ ಅವರ ಎಫ್ಐಆರ್ (FIR) ನಂತರ, ಸರ್ಫರಾಜ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದರು ಮತ್ತು ಅವರು ಹಲವಾರು ದಿನಗಳವರೆಗೆ ಜೈಲಿನಲ್ಲಿದ್ದರು.

ಜೀನತ್ ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಆಕೆಯ ಹೆಸರು ನಟ ದೇವ್ ಆನಂದ್‌ (Dev Anand) ಅವರೊಂದಿಗೆ ಸೇರಿಕೊಂಡಿತ್ತು. ಆದರೆ ಆಗಲೇ ದೇವ್​ ಆನಂದ್​   ಇಬ್ಬರು ಮಕ್ಕಳ ತಂದೆಯಾಗಿದ್ದರು. ಆದ್ದರಿಂದ ಅವರು ಈ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಇದಾದ ನಂತರ ಜೀನತ್ ಹೆಸರು ಪಾಕಿಸ್ತಾನಿ ಕ್ರಿಕೆಟಿಗ (ನಂತರ  ಪಾಕ್​ ಪ್ರಧಾನಿ) ಇಮ್ರಾನ್ ಖಾನ್ (Imran Khan) ಜೊತೆಗೂ ಸೇರಿಕೊಂಡಿತ್ತು. ಹೀಗೆ ಬದುಕಿನುದ್ದಕ್ಕೂ ಕಾಂಟ್ರವರ್ಸಿಯ ಜೊತೆ ದುರಂತ ಜೀವನ ಅನುಭವಿಸಿದ್ದಾರೆ ನಟಿ ಜೀನತ್​ ಅಮಾನ್​. ಸದ್ಯ ಅವರಿಗೆ 71 ವರ್ಷ ವಯಸ್ಸಾಗಿದ್ದು, ಮಕ್ಕಳ ಜೊತೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios