ವೀರ ಸಾವರ್ಕರ್‌ಗೆ ಅವಮಾನ ಮಾಡಿದರೆ ಸಹಿಸಿಲ್ಲ ಎಂದು ಪತ್ರ ನಟಿ ಸ್ವರಾ ಭಾಸ್ಕರ್‌ಗೆ ಬಂತು ಬೆದರಿಕೆ ಪತ್ರ, ಮುಂಬೈ ಪೊಲೀಸರ ತನಿಖೆ ವೀರ ಸಾವರ್ಕರ್‌ಗೆ ಅವಮಾನ ಮಾಡಿದ್ದೀರಿ ಎಂದು ಪತ್ರ

ಮುಂಬೈ(ಜೂ.30): ಹಿಂದುತ್ವ, ಬಲಪಂಥೀಯಗಳ ವಿರುದ್ಧ ಸತತ ವಾಗ್ದಾಳಿ ನಡೆಸುವ ನಟಿ ಸ್ವರಾ ಭಾಸ್ಕರ್‌ಗೆ ಇದೀಗ ಜೀವ ಬೆದರಿಕೆ ಪತ್ರ ಬಂದಿದೆ. ವೀರ ಸಾವರ್ಕರ್‌ಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಜೀವ ಬೆದರಿಕೆ ಪತ್ರ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜೀವ ಬೆದರಿಕೆ ಪತ್ರ ಸ್ವೀಕರಿಸಿದ ಬೆನ್ನಲ್ಲೇ ಸ್ವರಾ ಭಾಸ್ಕರ್ ಮುಂಬೈನ ವರ್ಸೋವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನಾಮಧೇಯ ಪತ್ರದ ಕುರಿತು ಮಾಹಿತಿ ನೀಡಿದ್ದಾರೆ. ಇದೀಗ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

The Kashmir Files ಚಿತ್ರದ ಬಗ್ಗೆ ವ್ಯಂಗ್ಯವಾಡಿದ ಸ್ವರಾ ಭಾಸ್ಕರ್ ಹಿಗ್ಗಾಮುಗ್ಗಾ ಟ್ರೋಲ್

ಪತ್ರದಲ್ಲಿ ನಟಿ ಸ್ವರಾ ಭಾಸ್ಕರ್ ವೀರ್ ಸಾವರ್ಕರ್‌ಗೆ ಅಪಮಾನ ಮಾಡಿದ್ದಾರೆ. ಇದನ್ನು ಭಾರತ ಸಹಿಸುವುದಿಲ್ಲ. ಸ್ವಾತಂತ್ರ್ಯ ವೀರನಿಗೆ ಅಪಮಾನ ಮಾಡಿದರೆ ಕೊಲ್ಲುವುದಾಗಿ ಎಚ್ಚರಿಸಲಾಗಿದೆ. ಸಾವರ್ಕರ್‌ ಅವರು, ಬ್ರಿಟೀಷರ ಬಳಿ ಕ್ಷಮಾಪಣೆ ಕೋರಿ, ತಮ್ಮನ್ನು ಜೈಲಿಂದ ಬಿಡುಗಡೆ ಮಾಡುವಂತೆ ಕೋರಿದ್ದರು. ಹೀಗಾಗಿ ಅವರು ವೀರರಂತೂ ಆಗಿರಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸ್ವರಾ ಟ್ವೀಟ್‌ ಮಾಡಿದ್ದರು.

ಸ್ವರಾ ಟ್ವೀಟ್‌ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಟ್ವೀಟ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿಬಂದಿತ್ತು. ಸ್ವರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ ಹಲವು ಭಾರಿ ಸ್ವರಾ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ.

ಮಕ್ಕಳನ್ನು ಪೀಡೆ ಎಂದ ಸ್ವರಾ ವಿರುದ್ಧ ಕೇಸ್‌
ಅಬಿಶ್‌ ಮ್ಯಾಥ್ಯು ನಡೆಸಿಕೊಡುವ ‘ಯೂಟ್ಯೂಬ್‌ ಚಾಟ್‌ ಶೋ’ ವೇಳೆ ಮಗುವಿನ ಕುರಿತಾದ ಅವಹೇಳನಾಕಾರಿ ಹೇಳಿಕೆ, ನಟಿ ಸ್ವರಾ ಭಾಸ್ಕರ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ವರಾ ವಿರುದ್ಧ 2 ಪ್ರತ್ಯೇಕ ದೂರುಗಳು ದಾಖಲಾಗಿವೆ. ಚಾಟ್‌ ಶೋ ವೇಳೆ ಸ್ವರಾ ಭಾಸ್ಕರ್‌ ಅವರು, ತಾವು ಜಾಹೀರಾತು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಈ ವೇಳೆ, 4 ವರ್ಷದ ಮಗುವಿನ ಜೊತೆ ಸೋಪ್‌ ಜಾಹೀರಾತಿನ ಶೂಟಿಂಗ್‌ನಲ್ಲಿ ಭಾಗವಹಿಸಬೇಕಿತ್ತು. ಈ ಸಂದರ್ಭದಲ್ಲಿ ಆ ಮಗು ತಮ್ಮನ್ನು ಉದ್ದೇಶಿಸಿ ಆಂಟಿ ಎಂದು ಕರೆಯಿತು. ಇದು ತಮಗೆ ತೀರಾ ಇರಿಸು-ಮುರಿಸು ಮಾಡಿತ್ತು. ಅಲ್ಲದೆ, ಮಕ್ಕಳ ಈ ರೀತಿಯ ವರ್ತನೆಯು ಪೀಡೆ ಮತ್ತು ಅಪಶಕುನಗಳಾಗಿವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸ್ವರ ವಿರುದ್ಧ ಕೇಸ್‌ ದಾಖಲಾಗಿವೆ.

'ನಮ್ಮನೆ ಕೆಲಸದವಳು ಸೀರೆಯಲ್ಲಿ ನಿಮಗಿಂದ ಚೆಂದ ಕಾಣ್ತಾಳೆ'; ನಟಿ ಸ್ವರಾ ಭಾಸ್ಕರ್ ಟ್ರೋಲ್!

ಸ್ವರಾಗೆ ನೋಟಿಸ್‌
ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಉತ್ತರಪ್ರದೇಶದ ಹಾಥ್ರಸ್‌ ಅತ್ಯಾಚಾರ ಸಂತ್ರಸ್ತೆಯ ಫೋಟೋವನ್ನು ಜಾಲತಾಣಗಳಲ್ಲಿ ಶೇರ್‌ ಮಾಡಿದ್ದ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ, ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಹಾಗೂ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ಜಾರಿ ಮಾಡಿ ವಿವರಣೆ ಬಯಸಿದೆ. ಈ ಕುರಿತಾದ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ಕೂಡಲೇ ತೆಗೆದು ಹಾಕಬೇಕು, ಇನ್ನು ಮುಂದೆ ಇಂತಹ ಪೋಸ್ಟ್‌ಗಳನ್ನು ಮಾಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವಂತಿಲ್ಲ. ಆದಾಗ್ಯೂ ಈ ಮೂವರೂ ಫೋಟೋ ಶೇರ್‌ ಮಾಡಿದ್ದು ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.