Asianet Suvarna News Asianet Suvarna News

ನೀನು ಸಖತ್ ಬೋರಿಂಗ್: ಕರಣ್ ಜೋಹಾರ್ ಕಾಲೆಳೆದ ಯಶ್ ವಿಡಿಯೋ ವೈರಲ್

ಯಶ್ ಮತ್ತು ರೂಹಿ ವಿಡಿಯೋ ಅಪ್ಲೋಡ್ ಮಾಡಿದ ಕರಣ್. ಅಪ್ಪ ನೀನು ತುಂಬಾನೇ ಬೋರಿಂಗ್ ಎಂದ ಮಗ.....

You are boring says Karan Johar son Yash personality review video viral vcs
Author
First Published Nov 27, 2022, 10:30 AM IST

ಬಾಲಿವುಡ್‌ ಸ್ಟಾರ್ ಡೈರೆಕ್ಟರ್ ಕಮ್ ಕಾಂಟ್ರವರ್ಸಿ ಕ್ರಿಯೇಟರ್ ಕರಣ್ ಜೋಹಾರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅವಳಿ ಮಕ್ಕಳಾದ ಯಶ್ ಮತ್ತು ರೂಹಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಪರ್ಸನಲ್ ಲೈಫ್‌ ಬಗ್ಗೆ ಆಗಾಗ ಹಂಚಿಕೊಳ್ಳುತ್ತಾರೆ. ಅದರಲ್ಲೂ ಪುತ್ರ ಯಶ್‌ ಬೋರಿಂಗ್ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕರಣ್ ಕಾಲೆಳೆಯುತ್ತಿದ್ದಾರೆ. 

ಸೈಲೆಂಟ್ ಆಗಿರುವ ಪುತ್ರನನ್ನು ವಿಡಿಯೋ ರೆಕಾರ್ಡ್‌ ಮಾಡುವ ಕರಣ್ ಏನ್ ಮಾಡುತ್ತಿರುವ ಯಶ್ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಯಶ್ ನನಗೆ ಬೋರ್ ಅಗುತ್ತಿದೆ ಎಂದು ಹೇಳುತ್ತಾನೆ. 'ಹೋ ನಿನಗೆ ನೀನೇ ಬೋರ್ ಆಗುತ್ತಿರುವೆ' ಎಂದು ಕರಣ್ ಹೇಳಿದಕ್ಕೆ 'ಇಲ್ಲ ಇಲ್ಲ ನನಗೆ ನೀನು ಬೋರ್ ಆಗುತ್ತಿರುವೆ' ಎಂದು ಯಶ್ ಹೇಳುತ್ತಾನೆ. 5 ವರ್ಷದ ಹುಡುಗನಿಗೂ ಕರಣ್ ಬೋರ್ ಆಗಿದ್ದಾನೆ ಎಂದು ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ. ಕಾಫಿ ವಿತ್ ಕರಣ್ ರಿಯಾಲಿಟಿ ಶೋನಲ್ಲಿ ಹೇಗೆ ಕರಣ್ ಸೆಲೆಬ್ರಿಟಿಗಳ ಕ್ಯಾರೆಕ್ಟರ್ ರೋಸ್ಟ್‌ ಮಾಡುತ್ತಾರೆ ಹಾಗೆ ಯಶ್‌ ಇಲ್ಲಿ ತಂದೆ ಕರಣ್ ವ್ಯಕ್ತಿತ್ವವನ್ನು ರೋಸ್ಟ್‌ ಮಾಡಿದ್ದಾನೆ.

You are boring says Karan Johar son Yash personality review video viral vcs

ಕೆಳವು ದಿನಗಳ ಹಿಂದೆ ಯಶ್ ಮತ್ತು ರೂಹಿ ಡ್ಯಾನ್ಸ್‌ ಮಾಡುತ್ತಿರುವ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಡಿಸ್ಕೋ ದಿವಾನಿ ಹಾಡಿಗೆ ತಮ್ಮದೇ ರಾಗ ಸೇರಿಸಿಕೊಂಡು ಕ್ರಿಯೇಟ್ ಮಾಡಲಾಗಿತ್ತು. ಕರಣ್ ಭಾಗ ಎರಡು ಚಿತ್ರೀಕರಣ ಶುರು ಯಾವಾಗ ಎಂದು ಕಾಲೆಳೆದಿದ್ದರು. 

ಕಾಂಟ್ರವರ್ಸಿಯಿಂದ ಫೇಮಸ್:

ಕರಣ್ ಜೋಹರ್ ಅವರು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ಕೆಲಸದಿಂದ ಅವರ ತಂದೆ ಯಶ್ ಜೋಹರ್ ತುಂಬಾ ಸಂತೋಷಪಟ್ಟಿದ್ದಾರೆ.ಇದರ ನಂತರ ಕರಣ್ ನಿರ್ದೇಶನವನ್ನು ವಹಿಸಿಕೊಂಡರು ಮತ್ತು ಕುಚ್ ಕುಚ್ ಹೋತಾ ಹೈ ಚಿತ್ರವನ್ನು ನಿರ್ದೇಶಿಸಿದರು.  ಉದ್ಯಮದಲ್ಲಿ ಹಲವರು ಕರಣ್ ಜೋಹರ್ ಅವರನ್ನು ಗ್ಯಾಂಗ್ ಮಾಫಿಯಾ ಎಂದೂ ಕರೆಯುತ್ತಾರೆ. ಅಷ್ಟೇ ಅಲ್ಲ, ತಾರೆಯರನ್ನು ಬೆದರಿಸಿ ಬೆದರಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಕಂಗನಾ ರಣಾವತ್  ಕರಣ್ ಜೋಹರ್ ಅವರನ್ನು ಸಾರ್ವಜನಿಕವಾಗಿ ಬಾಲಿವುಡ್ ಮಾಫಿಯಾ ಎಂದು ಕರೆದರು.

ಕರಣ್‌ ಜೋಹರ್‌ ದೊಡ್ಡ ಗಾತ್ರದ ಬಟ್ಟೆ ಧರಿಸಲು ಇದೇ ಕಾರಣವಂತೆ

ಕರಣ್ ಜೋಹರ್ ತನ್ನ ಲೈಂಗಿಕತೆಯನ್ನು ಎಂದಿಗೂ ಬಹಿರಂಗಪಡಿಸಲಿಲ್ಲ.  ಆದರೆ ಅವರು ಅನೇಕ ಸಂದರ್ಶನಗಳಲ್ಲಿ ತಮಾಷೆಯಾಗಿ ಸುಳಿವು ನೀಡಿದ್ದಾರೆ ಮತ್ತು ಜನರು ಅವರನ್ನು ಸಲಿಂಗಕಾಮಿ ಎಂದು ಆರೋಪಿಸುತ್ತಾರೆ. ಕರಣ್ ಜೋಹರ್ ಅವರು ಶಾರುಖ್ ಖಾನ್ ಅವರೊಂದಿಗಿನ ಸಂಬಂಧದ ಆರೋಪವನ್ನು ಹೊಂದಿದ್ದಾರೆ.  ಶಾರುಖ್ ತನ್ನ ಅಣ್ಣ ಮತ್ತು ತಂದೆ ಎಂದು ಹಲವು ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೂ  ಜನರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.ಕರಣ್ ಜೋಹರ್ ಅವರು ತಮ್ಮ ಶಿವಾಯ್ ಚಿತ್ರದ ದಿನಾಂಕವನ್ನು ವಿಸ್ತರಿಸಲು ಅಜಯ್ ದೇವಗನ್ ಅವರನ್ನು ಕೇಳಿದ್ದರು ಆದರೆ ಅವರು ಒಪ್ಪಲಿಲ್ಲ ಮತ್ತು ಕಾಜೋಲ್ ಅವರ ಪತಿಯನ್ನು ಬೆಂಬಲಿಸಿದರು. ಇದೇ ಕರಣ್ ಮತ್ತು ಕಾಜೋಲ್ ನಡುವಿನ ಸಂಬಂಧ ಹಳಸಲು ಕಾರಣವಾಗಿತ್ತು.

ಬ್ರಹ್ಮಾಸ್ತ್ರ, ರಾಕಿ ಔರ್‌ ರಾಣಿ ಕಿ ಪ್ರೇಮಕಹಾನಿ, ಜಗ್ ಜಗ್ ಜಿಯೋ, ಲಿಗರ್, ಮಿಸ್ಟರ್ ಅಂಡ್ ಮಿಸಸ್ ಮಹಿ, ಗೋವಿಂದ ಮೇರಾ  ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಮುಂದಿನ ಚಿತ್ರಗಳು.

Follow Us:
Download App:
  • android
  • ios