Asianet Suvarna News Asianet Suvarna News

Yashoda Teaser; ಗರ್ಭಿಣಿ ಸಮಂತಾ ನೋಡಿ ಫ್ಯಾನ್ಸ್ ಫುಲ್ ಖುಷ್

ಸಮಂತಾ ನಟನೆಯ ಯಶೋಧ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಯಶೋಧ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. 

Yashoda Teaser Samantha playing Pregnant spy role sgk
Author
First Published Sep 10, 2022, 6:02 PM IST

ಟಾಲಿವುಡ್ ಸ್ಟಾರ್ ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ಬಳಿಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಸಮಂತಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿಗಳಿಸಿರುವ ಸಮಂತಾ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಸಮಂತಾ ನಟನೆಯ ಯಶೋಧ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಯಶೋಧ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.  ವಿಶೇಷ ಎಂದರೆ ಸಮಂತಾ ಈ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಸಮಂತಾಗೆ ಗರ್ಭಿಣಿ ಎಂದು ಹೇಳುವ ಮೂಲಕ ಪ್ರಾರಂಭವಾಗುವ ಟೀಸರ್ ಭಾರಿ ಕುತೂಹಲ ಸೃಷ್ಟಿಮಾಡಿದೆ. 

ವೈದ್ಯರು ಸಮಂತಾಗೆ ತನ್ನನ್ನು ತಾನು ಸರಿಯಾಗಿ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು ಸಹ ಸ್ಯಾಮ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಹೈ ಆಕ್ಷನ್ ಸ್ಟಂಟ್ ಗಳನ್ನು ಮಾಡಿದ್ದಾರೆ. ಓಡುವುದು, ವೈಟ್ ಎತ್ತುವುದು ಸೇರಿದಂತೆ ಸಿಕ್ಕಾಪಟ್ಟೆ ಸ್ಟಂಟ್ ಗಳನ್ನು ಮಾಡಿದ್ದಾರೆ. ಸಮಂತಾ ನಟನೆಯ ಅಭಿಮಾನಿಗಳ ಹೃದಯಗೆದ್ದಿದೆ. 

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಡಿದೆದ್ದ ಸಮಂತಾ; ಕೆಲವು ಯೂಟ್ಯುಬರ್ಸ್‌ಗಳಿಗೆ ಕಾದಿದೆ ಗ್ರಾಹಚಾರ

ಸಮಂತಾ ಜೊತೆಗೆ ಈ ಸಿನಿಮಾದಲ್ಲಿ ವರಲಕ್ಷ್ಮಿ ಶರತ್ ಕುಮಾರ್, ಉನ್ನಿ ಮುಕುಂದನ್, ಮುರಳಿ ಶರ್ಮಾ, ರಾವ್ ರಮೇಶ್ ಸಂಪನ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಮಂತಾ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂತು ನೋಡುವಂತೆ ಮಾಡಿದೆ. ಟೀಸರ್ ಈ ಪರಿ ಇದೆ ಅಂದ್ಮೇಲೆ ಇನ್ನು ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವೆಬ್ ಸರಣಿ ಬಳಿಕ ಸಮಂತಾ ಅವರ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಆಶೋಕ್ ಸಾರಥ್ಯದಲ್ಲಿ ಮೂಡಿಬಂದಿರುವ ಯಶೋಧ ಸಿನಿಮಾ ಸದ್ಯದಲ್ಲೇ ತೆರೆಗೆ ಬರುತ್ತಿದೆ.

ಡಿವೋರ್ಸ್‌ ಆದ್ಮೇಲೆ ಮೈ ತೋರ್ಸೋದು ಜಾಸ್ತಿಯಾಗಿದೆ; ಸಮಂತಾ ವಿರುದ್ಧ ನೆಟ್ಟಿಗರು ಗರಂ

ಸಮಂತಾ ಯಶೋಧ ಸಿನಿಮಾ ಜೊತೆಗೆ ಶಾಕುಂತಲಂ, ಖುಷಿ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವಕೊಂಡ ಜೊತೆ ಖುಷಿ ಸಿನಿಮಾ ಮಾಡಿದ್ರೆ ಶಾಕುಂತಂ ನಲ್ಲಿ ಶಾಂಕುಂತಲೆ ಪಾತ್ರ ಮಾಡಿದ್ದಾರೆ. ಇನ್ನು ಹಿಂದಿಯಲ್ಲಿ ಮತ್ತೊಂದು ವೆಬ್ ಸರಣಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಸಮಂತಾ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಸಮಂತಾ ಜೊತೆ ವರುಣ್ ಧವನ್ ನಟಿಸುತ್ತಿದ್ದಾರೆ.   


 

Follow Us:
Download App:
  • android
  • ios