ಡಿವೋರ್ಸ್ ಆದ್ಮೇಲೆ ಮೈ ತೋರ್ಸೋದು ಜಾಸ್ತಿಯಾಗಿದೆ; ಸಮಂತಾ ವಿರುದ್ಧ ನೆಟ್ಟಿಗರು ಗರಂ
ಎಲ್ಲೋ ಚಿಕನ್ ಮೆಟೀರಿಯಲ್ ಲುಕ್‌ನಲ್ಲಿ ಕಾಣಿಸಿಕೊಂಡ ಸಮಂತಾ. ವೈರಲ್ ಆಗುತ್ತಿದೆ ಸಮಂತಾ 2.o ಲುಕ್ ನೋಡಿ ನೆಟ್ಟಿಗರು ಗರಂ....

ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ನೆಟ್ಟಿಗರಿಗೆ ಶಾಕ್ ಕೊಡುತ್ತಿದ್ದಾರೆ.
ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಮತ್ತು ವೈವಾಹಿಕ ಜೀವನದಲ್ಲಿದ್ದಾಗ ಸಮಂತಾ ಸೀರೆ ಮತ್ತು ಸಿಂಪಲ್ ಮಾಡ್ರನ್ ಡ್ರೆಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೀಗ ಸಣ್ಣ ಪುಟ್ಟ ಕಾರ್ಯಕ್ರಮಕ್ಕೂ ಹಾಟ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಪಿಂಕ್ವಿಲ್ಲಾ ವೆಬ್‌ಸೈಟ್ ಜೊತೆ ಮಾತನಾಡಿದ ಸಮಂತಾ ಡಿಸೈನರ್ ಪ್ರೀಥಮ್ 'ಡಿಸೈನರ್ ಇಲ್ಲದೆ ಸಮಂತಾ ಒಳ್ಳೆ ಉಡುಪು ಧರಿಸುತ್ತಾಳೆ. ಆಕೆ ಕಲೆಕ್ಷನ್ ಸೂಪರ್ ಆಗಿದೆ ಮತ್ತು ಡ್ರೆಸಿಂಗ್ ಸೆನ್ಸಸ್ ಸೂಪರ್ ಆಗಿದೆ' ಎಂದು ಹೇಳಿದ್ದಾರೆ.
'ಸಮಂತಾ ರೂಮ್‌ಗೆ ಎಂಟ್ರಿ ಕೊಟ್ಟರೆ ಎಲ್ಲಾ ಉಡುಪುಗಳು up to the mark ಇರುತ್ತದೆ. ಆದರೆ ನಮಗಿರುವ ಪ್ರೆಶರ್ ಏನೆಂದರೆ ದಿನ ಸೆಲೆಬ್ರಿಟಿಗಳನ್ನು ಫಾಲೋ ಮಾಡುವ ಜನರಿಗೆ ಏನಾದರೂ ವೆರೈಟಿ ಬೇಕು'
'ಪ್ರತಿಯೊಬ್ಬ ಡಿಸೈನರ್‌ಗೂ ಈ ರೀತಿ ಪ್ರೆಶ್ ಇರುತ್ತದೆ. ನಾವು ಏನೇ ಕೊಟ್ಟರು ಸಮಂತಾ ಒಪ್ಪಿಕೊಳ್ಳುತ್ತಾರೆ ನೋ ಎನ್ನುವುದಿಲ್ಲ. ಆಕೆ ಬಾಡಿ ಲುಕ್ ಮತ್ತು ಕಾರ್ಯಕ್ರಮಕ್ಕೆ ಸೂಟ್ ಆಗುವುದನೇ ನಾವು ಆಯ್ಕೆ ಮಾಡುವುದು'
'ಈ ಹಳದಿ ಬಣ್ಣದ ಡ್ರೆಸ್‌ನ ನಾವು ಆನ್‌ಲೈನ್‌ನಲ್ಲಿ ಖರೀದಿ ಮಾಡಿರುವುದು. ಹಲವು ದಿನಗಳಿಂದ ಬಳಸದೇ ಹಾಗೆ ಇತ್ತು. ಯೋಚನೆ ಮಾಡಿ ಈ ರೀತಿ ಟಚ್ ಕೊಟ್ಟೆವು' ಎಂದು ಡಿಸೈನರ್ ಪ್ರೀತಮ್ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.