Asianet Suvarna News Asianet Suvarna News

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಡಿದೆದ್ದ ಸಮಂತಾ; ಕೆಲವು ಯೂಟ್ಯುಬರ್ಸ್‌ಗಳಿಗೆ ಕಾದಿದೆ ಗ್ರಾಹಚಾರ

 ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಮಂತಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.ಕೆಲವು ಯೂಟ್ಯುಬರ್ಸ್ ವಿರುದ್ಧ ಸಿಡಿದೆದ್ದಿರುವ ಸಮಂತಾ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ಮುದಾಗಿದ್ದಾರೆ ಎನ್ನಲಾಗಿದೆ. 

Samantha Ruth Prabhu takes legal action against multiple YouTube channels sgk
Author
First Published Sep 6, 2022, 5:12 PM IST

ತೆಲುಗು ಸ್ಟಾರ್ ಸಮಂತಾ ರುತ್ ಪ್ರಭು ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.  ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಬಳಿಕ ಅವರ ಡಿಮ್ಯಾಂಡ್​ ಇನ್ನು ಹೆಚ್ಚಾಗಿದೆ. ಆದರೂ ಸಮಂತಾ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಾಗಚೈತನ್ಯ ಅವರಿಂದ ದೂರ ಆದ ಬಳಿಕ ಸಮಂತಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.  ಸ್ಯಾಮ್ ಅವರ ವೃತ್ತಿ ಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಸೆಲೆಬ್ರಿಟಿ ಎಂದಮೇಲೆ ಗಾಸಿಪ್ ಎಲ್ಲಾ ಸಹಜ. ಆದರೆ ಮಿತಿ ಮೀರಿದ್ರೆ ಸೆಲೆಬ್ರಿಟಿಗಳು ಸುಮ್ಮಲೇ ಕೂರುವ ಮಾತೆ ಇಲ್ಲ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಾರೆ. ಇದೀಗ ಸಮಂತಾ ಆರೋಗ್ಯದ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಹಾಗಾಗಿ ಈ ಬಾರಿ ಸಮಂತಾ ಅವರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಕೆಲವು ಯೂಟ್ಯೂಬರ್​ಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸಮಂತಾ ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಅಷ್ಟಕ್ಕೂ ಸಮಂತಾ ಅವರು ಆರೋಗ್ಯದ ಬಗ್ಗೆ ಗಾಸಿಪ್​ ಹಬ್ಬಿದ್ದು ಯಾಕೆ? ಸಮಂತಾ ಯಾವಾಗಲೂ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆಕ್ವೀಟ್ ಆಗಿರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಅವರು ಅಷ್ಟಾಗಿ ಸೋಶಿಯಲ್​ ಮೀಡಿಯಾ ಬಳಸುತ್ತಿಲ್ಲ. ಅವರಿಗೆ ಅನಾರೋಗ್ಯ ಕಾಡುತ್ತಿರುವುದರಿಂದ ಈ ರೀತಿ ಸೈಲೆಂಟ್​ ಆಗಿದ್ದಾರೆ ಎಂದು ಕೆಲವು ಯೂಟ್ಯೂಬರ್​ಗಳು ಸುದ್ದಿ ಹಬ್ಬಿಸಿದ್ದಾರೆ. ಕೆಲವರಂತೂ ​ಅತಿ ಕೆಟ್ಟದಾಗಿ ಥಂಬ್​ನೇಲ್​ಗಳನ್ನು ಮಾಡಿ ಸುದ್ದಿ ಹರಿಬಿಟ್ಟಿದ್ದಾರೆ. ಇದು ಸಮಂತಾ ಕಣ್ಣಿಗೂ ಬಿದ್ದಿದೆ. ಹಾಗಾಗಿ ಇಂಥ ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. 

ಜೂ.ಎನ್‌ಟಿಆರ್ ಸಿನಿಮಾ ರಿಜೆಕ್ಟ್ ಮಾಡಿದ ಸಮಂತಾ; ಸಂಭಾವನೆ ಕೇಳಿ ಹೌಹಾರಿದ ಚಿತ್ರತಂಡ

ಅಂದಹಾಗೆ ಸಮಂತಾಗೆ ಟ್ರೋಲ್ ಆಗುತ್ತಿರುವುದು, ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದ ಸಂದರ್ಭದಲ್ಲೂ ಇದೇ ರೀತಿ ಆಗಿತ್ತು. ಸಮಂತಾ ಅವರ ಪರ್ಸನಲ್​ ಲೈಫ್​ ಬಗ್ಗೆ ಇಲ್ಲಸಲ್ಲದ ಗಾಸಿಪ್​ ಹಬ್ಬಿಸಲಾಗಿತ್ತು. ಆಗಲೂ ಅವರು ಕಾನೂನು ಸಮರ ಸಾರಿದ್ದರು. ಅಷ್ಟಾದರೂ ಕೆಲವು ಯೂಟ್ಯೂಬರ್​ಗಳು ಸುಳ್ಳು ಸುದ್ದಿ ಮಾಡುವುದನ್ನು ಬಿಟ್ಟಿಲ್ಲ. ಇದೀಗ ಅಂಥವರಿಗೆ ತಕ್ಕ ಪಾಠ ಕಲಿಸಲು ಸಮಂತಾ ಮುಂದಾಗಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್‌ ಸ್ಟೇಡಿಯಂನಲ್ಲಿ ಊ ಅಂಟಾವ ಮಾವ...ಹಾಡಿನ ಕ್ರೇಸ್; ಫ್ಯಾನ್ಸ್‌ ಡಾನ್ಸ್‌ ವೈರಲ್

ಇನ್ನು ಸಮಂತಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯ ತೆಲುಗಿನಲ್ಲಿ ಶಾಕುಂತಲೆ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಶಾಕುಂತಲೇಯಾಗಿ ಸಮಂತಾ ನಟಿಸಿದ್ದಾರೆ. ಇನ್ನು ಯಶೋಧ ಸಿನಿಮಾ ಕೂಡ ಸಮಂತಾ ಕೈಯಲ್ಲಿದೆ. ಈ ಸಿನಿಮಾ ಲುಕ್ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದು ಸಮಂತಾ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ.  ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿ ಸ್ಯಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸೌತ್ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಒಂದು ವೆಬ್ ಸರಣಿಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಬೇಕಿದೆ ಅಷ್ಟೆ. ವರುಣ್ ಧವನ್ ನಾಯಕರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios