Asianet Suvarna News Asianet Suvarna News

KGF 2 Collection; 2ನೇ ದಿನವೂ ಹಿಂದಿಯಲ್ಲಿ ದಾಖಲೆ ಬರೆದ ರಾಕಿ ಭಾಯ್

2ನೇ ದಿನವೂ ಕೆಜಿಎಫ್-2 ಕಲೆಕ್ಷನ್ ಅಬ್ಬರ ಮುಂದುವರೆದಿದೆ. ಹಿಂದಿಯಲ್ಲಿ ಏಪ್ರಿಲ್ 15ರಂದು ದಾಖಲೆಯ ಕಲೆಕ್ಷನ್ ಮಾಡಿದೆ ಈ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಮಾಹಿತಿ ಹಂಚಿಕೊಂಡಿದ್ದಾರೆ. 2ನೇ ದಿನ ಕೆಜಿಎಫ್-2 ಹಿಂದಿಯಲ್ಲಿ 45 ಕೋಟಿ ರೂಪಾಯಿ ಕಲೆಕ್ಷನ್ ಟ್ರೆಂಡ್ ಇದೆ ಎಂದು ಹೇಳಿದ್ದಾರೆ.

Yash starrer KGF 2 Hindi version earned Rs 44 crore on Day 2
Author
Bengaluru, First Published Apr 16, 2022, 10:45 AM IST

ಪ್ಯಾನ್ ಇಂಡಿಯಾ ಹೀರೋ, ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ವಿಶ್ವದಾದ್ಯಂತ ಕೆಜಿಎಫ್-2 ಸಿನಿಮಾದೇ ಸದ್ದು. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕೆಜಿಎಫ್2 ಏಪ್ರಿಲ್ 14ರಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳು ಭರ್ಜರಿ ಸ್ವಾಗತ ಮಾಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಕೆಜಿಎಫ್-2 ಮೊದಲ ದಿನ ಬಾಕ್ಸ್ ಆಫೀಸ್ ನಲ್ಲ ದಾಖಲೆಯ ಕಲೆಕ್ಷನ್ ಮಾಡಿದೆ (KGF 2 box office collection). ಹಿಂದಿ ಭಾಗದಲ್ಲಿ ಕೆಜಿಎಫ್2 ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ.

2ನೇ ದಿನವೂ ಕೆಜಿಎಫ್-2 ಕಲೆಕ್ಷನ್ ಅಬ್ಬರ ಮುಂದುವರೆದಿದೆ. ಹಿಂದಿಯಲ್ಲಿ ಏಪ್ರಿಲ್ 15ರಂದು ದಾಖಲೆಯ ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾ ಕಲೆಕ್ಷನ್ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಮಾಹಿತಿ ಹಂಚಿಕೊಂಡಿದ್ದಾರೆ. 2ನೇ ದಿನ ಕೆಜಿಎಫ್-2 ಹಿಂದಿಯಲ್ಲಿ 45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವೀಕೆಂಡ್ ನಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬಿಹಾರ, ಯುಪಿ ಸೇರಿದಂತೆ ಹಿಂದಿ ಬೆಲ್ಟ್ ನಲ್ಲಿ ಕಲೆಕ್ಷನ್ ಜಾಸ್ತಿ ಅಗಲಿದೆ ಎನ್ನಲಾಗಿದೆ. 2ನೇ ದಿನ ಹಿಂದಿ ಭಾಗದಲ್ಲಿ 98 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಅಂದಹಾಗೆ ಈ ಸಂಖ್ಯೆ ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡನೇ ದಿನಕ್ಕೆ 100 ಕೋಟಿ ಕ್ಲಬ್ ಸಮೀಪ ಹೋಗಿರುವುದು ಕೆಜಿಎಫ್-2 ದಾಖಲೆಯಾಗಿದೆ. ಈಗಾಗಲೇ ಎಲ್ಲಾ ಸಿನಿಮಾಗಳ ದಾಖಲೆ ಬ್ರೇಕ್ ಮಾಡಿರುವ ಕೆಜಿಎಫ್-2 ಭಾರತದಾದ್ಯಂತ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಅಧಿಕೃತ ವರದಿ ಇನ್ನು ಬಹಿರಂಗವಾಗಿಲ್ಲ.

KGF 2 ಅಬ್ಬರದ ನಡುವೆ ವಿಜಯ್ 'ಬೀಸ್ಟ್' ಸಿನಿಮಾ ಗಳಿಸಿದೆಷ್ಟು?

ಇನ್ನು ಕೆಜಿಎಫ್-2 ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದು ಭಾರತದ ಬಾಕ್ಸ್ ಆಫೀಸ್ ಗಳಿಕೆಯಲ್ಲೇ ಅತೀ ದೊಡ್ಡ ಮಟ್ಟದ ಗಳಿಕೆಯಾಗಿದೆ. ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯಲಿದೆ ಎನ್ನುವ ನಿರೀಕ್ಷೆ ಎಲ್ಲರಲ್ಲಿತ್ತು. ಅದರಂತೆ ಸಿನಿಮಾ ಮೊದಲ ದಿನವೇ ಉತ್ತಮ ಕಮಾಯಿ ಮಾಡಿದೆ. ಅದರಲ್ಲೂ ಹಿಂದಿ ಭಾಗದಲ್ಲಿ ಕೆಜಿಎಫ್-2 ಇತಿಹಾಸ ಸೃಷ್ಟಿಸಿದೆ. ಬಾಲಿವುಡ್ ನ ಘಟಾನುಘಟಿ ಸ್ಟಾರ್ ಕಲಾವಿದರನ್ನು ರಾಕಿಂಗ್ ಸ್ಟಾರ್ ಯಶ್ ಹಿಂದಿಕ್ಕಿದ್ದಾರೆ. ದಕ್ಷಿಣ ಭಾರತ ಸಿನಿಮಾ ಬಾಲಿವುಡ್ ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವುದು ಹಿಂದಿ ಮಂದಿಗೆ ಅಚ್ಚರಿ ಮೂಡಿಸಿದೆ.

ಬಾಲಿವುಡ್ ನಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಹೃತಿಕ್ ರೋಷನ್ ನಟನೆಯ ವಾರ್, ಆಮೀರ್ ನಟನೆಯ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿ ಕೆಜಿಎಫ್-2 ಹೊಸ ದಾಖಲೆ ಬರೆದಿದೆ. ಅಂದಹಾಗೆ ಯಶ್ ನಟನೆಯ ಕೆಜಿಎಫ್-2 ಮೊದಲ ದಿನ ಹಿಂದಿಯಲ್ಲಿ ಬರೋಬ್ಬರಿ 53.95 ಕೋಟಿ ರೂ. ಗಳಿಕೆ ಮಾಡಿದೆ. ಹಿಂದಿ ಭಾಗದಲ್ಲಿ ಭಾರಿ ಕ್ರೇಜ್ ಇತ್ತು. ಅದರಂತೆ ರಾಕಿಂಗ್ ಸ್ಟಾರ್ ಯಶ್ ಮತ್ತು ತಂಡ ಆ ಭಾಗಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಇದೀಗ ಪ್ರಚಾರಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

Jr.NTR ತಾಯಿ ಜೊತೆ ಯಶ್ ಗಿದೆ ವಿಶೇಷ ಬಾಂಧವ್ಯ; KGF 2 ಹೀರೋ ಹೇಳಿದ್ದೇನು?

ಇದೀಗ ವೀಕೆಂಡ್ ಪ್ರಾರಂಭವಾಗಿದ್ದರಿಂದಗಿ ಕೆಜಿಎಫ್2 ಮತ್ತಷ್ಟು ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಮೊದಲ ವಾರದ ಅಂತ್ಯಕ್ಕೆ ಎಷ್ಟು ಕೋಟಿ ಬಾಚಿಕೊಳ್ಳಲಿದೆ ಎಂದು ಕಾದು ನೋಡಬೇಕು.

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

 

Latest Videos
Follow Us:
Download App:
  • android
  • ios