ಮುಹೂರ್ತದ ಚಿತ್ರಗಳು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವೈರಲ್‌ ಆದವು. ಅದರಲ್ಲೂ ಯಶ್‌ ಮತ್ತು ಪ್ರಭಾಸ್‌ ಒಂದೇ ಫ್ರೇಮ್‌ನಲ್ಲಿ ಸೆರೆಯಾಗಿರುವ ಚಿತ್ರಗಳನ್ನು ಜನ ಬಹುವಾಗಿ ಮೆಚ್ಚಿಕೊಂಡರು. ಈ ಸಂದರ್ಭ ಮಾತನಾಡಿದ ಪ್ರಭಾಸ್‌, ‘ಈ ಸಿನಿಮಾದಲ್ಲಿ ನನ್ನ ಲುಕ್ಕೇ ವಿಭಿನ್ನವಾಗಿದೆ. ನನಗೂ ಸಖತ್‌ ಥ್ರಿಲ್ಲಿಂಗ್‌ ಅನಿಸಿದೆ. ಈ ಲುಕ್‌ನಲ್ಲಿ ಫ್ಯಾನ್ಸ್‌ ಎದುರು ಬರಲು ಖುಷಿಯಾಗುತ್ತೆ. ಸದ್ಯ ಶೂಟಿಂಗ್‌ ಶುರುವಾಗೋದನ್ನೇ ಎದುರು ನೋಡುತ್ತಿದ್ದೇನೆ’ ಎಂದರು.

"

ನಿರ್ದೇಶಕ ಪ್ರಶಾಂತ್‌ ನೀಲ್‌ ತಮ್ಮ ಹೊಸ ಸಾಹಸಕ್ಕೆ ಸಾಥ್‌ ನೀಡುತ್ತಿರುವ ಪ್ರಭಾಸ್‌ಗೆ ಥ್ಯಾಂಕ್ಸ್‌ ಹೇಳುವ ಜೊತೆಗೆ ರಾಕಿಂಗ್‌ ಸ್ಟಾರ್‌ ಯಶ್‌ರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ, ‘ನಿಮ್ಮನ್ನು ಖಂಡಿತಾ ನಿರಾಸೆ ಮಾಡೋದಿಲ್ಲ’ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ಪ್ರಭಾಸ್ ಜತೆ ಯಶ್.. ನೀಲ್ ಸಹ ಇದ್ದಾರೆ? ಏನ್ ಹೊಸ ಪ್ರಾಜೆಕ್ಟು? 

ಡಿಸಿಎಂ ಅಶ್ವತ್ಥನಾರಾಯಣ್‌ ಶುಭ ಹಾರೈಕೆ

ಉಪ ಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ ಅವರು ಸಲಾರ್‌ ಮುಹೂರ್ತದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿ, ‘ಕನ್ನಡದಲ್ಲಿ ಹೊಂಬಾಳೆ ಫಿಲ್ಮ್‌$್ಸಕೆಜಿಎಫ್‌ ಸಿನಿಮಾ ಮೂಲಕ ದಾಖಲೆ ಬರೆದಿದೆ. ಪ್ರಶಾಂತ್‌ ನೀಲ್‌ ಈ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೀಗ ಸಲಾರ್‌ ಮೂಲಕ ಗಡಿ ಭಾಷೆಯನ್ನು ಮೀರಿ ಚಿತ್ರ ಮಾಡುತ್ತಿರುವುದು ಸಂತಸ ತಂದಿದೆ. ಪ್ರಭಾಸ್‌ ಕನ್ನಡಿಗರಿಗೆ ಇನ್ನಷ್ಟುಹತ್ತಿರವಾಗುತ್ತಿದ್ದಾರೆ’ ಎಂದರು.

"