Asianet Suvarna News Asianet Suvarna News

'ಉರಿ'ಯಲ್ಲಿ ಪ್ರೀತಿ, 'ಆರ್ಟಿಕಲ್​ 370'ಯಲ್ಲಿ ಗರ್ಭಿಣಿ! ಫೇರ್​ ಅಂಡ್​ ಲವ್ಲಿ ಬ್ಯೂಟಿ ಯಾಮಿ ಗೌತಮ್​ ಗುಡ್​​ ನ್ಯೂಸ್​

'ಉರಿ'ಯಲ್ಲಿ ಪ್ರೀತಿ, 'ಆರ್ಟಿಕಲ್​ 370'ಯಲ್ಲಿ ಗರ್ಭಿಣಿ! ಗುಡ್​​ ನ್ಯೂಸ್​ ಕೊಟ್ಟಿದ್ದಾರೆ ಫೇರ್​ ಅಂಡ್​ ಲವ್ಲಿ ಬ್ಯೂಟಿ ಯಾಮಿ ಗೌತಮ್​.
 

Yami Gautam Aditya Dhar confirm pregnancy at Article 370 trailer launch suc
Author
First Published Feb 8, 2024, 4:51 PM IST

ಫೇರ್ ಅಂಡ್​ ಲವ್ಲಿ ಬ್ಯೂಟಿ ಕ್ರೀಮ್​ ಜಾಹೀರಾತಿನ ಮೂಲಕ ಎಲ್ಲರ ಮನೆ ಮನ ಗೆದ್ದ ಚೆಲುವೆ ಯಾಮಿ ಗೌತಮ್​. ಸ್ಯಾಂಡಲ್​ವುಡ್​ನ ​ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಬಾಲಿವುಡ್ ನಲ್ಲಿ `ವಿಕ್ಕಿ ಡೋನರ್' ಚಿತ್ರದ ಮೂಲಕ ಸಿನಪಯಣ ಆರಂಭಿಸಿದವರು. ಇದಾದ ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಇವರು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್​ 370 ರದ್ದು ಮಾಡಿರುವ ಕುರಿತ ಸಿನಿಮಾ ಆರ್ಟಿಕಲ್​ 370ಯಲ್ಲಿ ಬಿಜಿಯಾಗಿದ್ದಾರೆ. ಇದರ  ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಕೂಡ ಇದಾಗಲೇ ರಿಲೀಸ್​ ಆಗಿದ್ದು ಸಾಕಷ್ಟು ಜನಪ್ರಿಯವಾಗಿದೆ.
 
ನಟಿಯೀಗ ಗುಡ್​ನ್ಯೂಸ್​ ನೀಡಿದ್ದಾರೆ. 2021ರಲ್ಲಿ ಆದಿತ್ಯ ಧರ್  ಜೊತೆ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಟಿ, ಇದೀಗ ಮೂರು ವರ್ಷಗಳ ಬಳಿಕ ಅಮ್ಮನಾಗುವ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಕುತೂಹಲದ ವಿಷಯ ಏನಪ್ಪಾ ಎಂದರೆ, ಈ ಜೋಡಿ ಮೊದಲು ಭೇಟಿಯಾಗಿದ್ದು ’ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ಸೆಟ್‌ನಲ್ಲಿ. ಇದೀಗ ಆರ್ಟಿಕಲ್​ 370 ಚಿತ್ರದ ಸಮಯದಲ್ಲಿ ಅಪ್ಪ-ಅಮ್ಮ ಆಗುತ್ತಿದ್ದಾರೆ. ಕೆಲ ಸಮಯದಿಂದ ಯಾಮಿ ಗರ್ಭಿಣಿಯೆನ್ನುವ ಸುದ್ದಿ ಹರಿದಾಡುತ್ತಿತ್ತು. ಕೆಲ ದಿನಗಳ ಹಿಂದೆ  ಮುಂಬೈನಲ್ಲಿ ಜೋಡಿ ಕಾಣಿಸಿಕೊಂಡಿದ್ದ ಸಮಯದಲ್ಲಿ  ಯಾಮಿ ತಮ್ಮ   ದುಪಟ್ಟಾದಿಂದ ಹೊಟ್ಟೆ ಮುಚ್ಚಿಕೊಂಡ ರೀತಿಯಲ್ಲಿ ಮಾಡಿದ್ದರು.  ದುಪಟ್ಟಾದಿಂದ ತನ್ನ ಹೊಟ್ಟೆಯನ್ನು ಮರೆಮಾಚಿದ್ದಾರೆ ಎಂದು ಸುದ್ದಿಯಾಗಿ ಆಗಲೇ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಸುದ್ದಿ ನಿಜವಾಗಿದೆ. ಯಾಮಿ ಐದು ತಿಂಗಳ ಗರ್ಭಿಣಿ ಎಂದು ತಿಳಿಸಲಾಗಿದೆ.  

2ನೇ ಮಗುವಾದ್ಮೇಲೆ ಇಶಾ ಡಿಯೋಲ್​ ಪತಿಗೆ ಬೆಂಗಳೂರು ಬೆಡಗಿ ನಂಟು? ಅಂದು ಅಮ್ಮ, ಇಂದು ಮಗಳು!

ಕಿರುತೆರೆಯಲ್ಲಿ ಪ್ರಸಿದ್ಧಗಳಿಸಿದ ನಂತರ ಸಿನಿಮಾರಂಗದಲ್ಲಿ ಸಕ್ರೀಯರಾದ ಯಾಮಿ ಸ್ಟಾರ್ ಆಗಿದ್ದರೂ ಸರಳತೆ ಮೂಲಕವೇ ಹೆಚ್ಚು ಗಮನಸೆಳೆದ ನಟಿ. ಹೆಚ್ಚು ಪ್ರಚಾರ ಬಯಸದ ಯಾಮಿ ತನ್ನ ಪ್ರತಿಭೆ ಮೂಲಕವೇ ಅಭಿಮಾನಿಗಳ ಹೃದಯ ಗೆದಿದ್ದಾರೆ. ಸದ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯಾಮಿ, ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿದ್ದರು. ಸಿನಿಮಾರಂಗದಿಂದ ಹೊರಬಂದು ಕೃಷಿ ಮಾಡಬೇಕೆಂದು ಬಯಸಿದ್ದರಂತೆ. ಪಾರ್ಟಿ, ಹಾಗೂ ಈವೆಂಟ್ ಗಳಿಗೆ ಹಾಜರಾಗುವಂತೆ ಹೇಗೆ ಒತ್ತಡ ಹೇರುತ್ತಾರೆ, ಅಗೌರವ ತೋರುತ್ತಾರೆ, ನಿರಂತರ ತೆಗಳುವ ಬಗ್ಗೆ ಬಹಿರಂಗ ಪಡಿಸಿದ್ದರು. 

ಆಯುಷ್ಮಾನ್ ಖುರಾನಾ ಜೊತೆ ನಟಿಸಿದ್ದ ವಿಕ್ಕಿ ಡೋನರ್ ಸಿನಿಮಾದ ಯಶಸ್ಸಿನ ನಂತರ ಯಾಮಿ ಅನೇಕ ಏರಿಳಿತಗಳನ್ನು ಕಂಡರು. ಆ ನಂತರ ಸಿನಿಮಾರಂಗ ತೊರೆಯುವ ನಿರ್ಧಾರ ಮಾಡಿದ್ದೆ ಎಂದು ಹೇಳಿದ್ದರು. 2018-2019ರಲ್ಲಿ ಆಯುಷ್ಮಾನ್ ಖುರಾನಾ ಅವರ ಎದುರು ನಟಿಸಿದ ವಿಕ್ಕಿ ಡೋನರ್ ಚಿತ್ರದ ಯಶಸ್ಸಿನ ನಂತರ ಅನೇಕ ಏರಿಳಿತ  ಕಂಡ ನಂತರ ತನಗೆ ಅಂತಹ ಆಲೋಚನೆಗಳು ಬಂದವು ಎಂದು ಯಾಮಿ ಈ ಹಿಂದೆ ಹೇಳಿದ್ದರು. ಆದಾಗ್ಯೂ, ನಟನ ಸಾವಿನ ನಂತರ ರಿಯಾ ಚಕ್ರವರ್ತಿ ವಿರುದ್ಧದ ಎಫ್‌ಐಆರ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ತಮ್ಮ ಮಗ ಬಾಲಿವುಡ್ ತೊರೆದು ಸಾವಯವ ಕೃಷಿಗೆ ತನ್ನ ಆಪ್ತ ಸ್ನೇಹಿತರೊಬ್ಬರೊಂದಿಗೆ ಸಾಹಸ ಮಾಡಲು ಬಯಸಿದ್ದರು ಎಂದು ಬಹಿರಂಗಪಡಿಸಿದ್ದರು. ಅಂದಹಾಗೆ ನಟ ಸುಶಾಂತ್ ಸಿಂಗ್ ಕೂಡ ಸಿನಿಮಾರಂಗ ಬಿಟ್ಟು ಕೃಷಿ ಮಾಡಲು ಬಯಸಿದ್ದರು ಎಂದು ಅವರ ತಂದೆ ಬಹಿರಂಗ ಪಡಿಸಿದ್ದರು. 

ಫ್ಯಾನ್ಸ್​ ಅಂದ್ರೆ ಸುಮ್ಮನೇನಾ? ಎದ್ದೆನೋ, ಬಿದ್ದೆನೋ ಎಂದು ಓಡಿ ಹೋದ ನಟಿ ಅನುಷ್ಕಾ ಶೆಟ್ಟಿ
 

Follow Us:
Download App:
  • android
  • ios