Asianet Suvarna News Asianet Suvarna News

ಸಾವಿನ ಮನೆಯಲ್ಲೂ ಅಸಹ್ಯ ನಡೆ ತೋರಿದ ನರೇಶ್-ಪವಿತ್ರಾ ಲೋಕೇಶ್ ಈಗ್ಯಾಕೆ ಮುತ್ತಿನ ಫೋಟೋ ಹಾಕಿದ್ದು?

ಕಳೆದ ವರ್ಷ ಪವಿತ್ರಾ ಲೋಕೇಶ್ ಮತ್ತು ನರೇಶ್‌ ಜೋಡಿ ಕತೆ ರಂಪ ರಾಮಾಯಣವಾಯ್ತು. ಈ ವರ್ಷ ಅಂಥ ರಿಸ್ಕೇ ಬೇಡ ಅಂತ ಹೊಸ ವರ್ಷವನ್ನು ಪರಸ್ಪರ ಚುಂಬಿಸಿ ಸ್ವಾಗತಿಸಿದ ಜೋಡಿ ಹೊಸ ವರ್ಷದಲ್ಲಿ ಸಿಹಿ ಸುದ್ದಿ ನೀಡಿದ್ದರು. ಸದ್ಯಕ್ಕೀಗ ಹೊಸ ವರ್ಷದಲ್ಲೇ ಈ ಜೋಡಿ ಹಸೆಮಣೆ ಏರಲಿದೆ ಅನ್ನೋ ಮಾತು ಕೇಳಿಬರುತ್ತಿದೆ.

Will Pavitra Lokesh and Naresh get marry this month end
Author
First Published Jan 3, 2023, 11:06 AM IST

ಈ ವರ್ಷ ಆರಂಭಕ್ಕೂ ಮೊದಲೇ ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೋಡಿ ಲಿಪ್‌ ಟು ಲಿಪ್‌ ಕಿಸ್‌ ನೀಡಿ ತಾವು ಮದುವೆ ಆಗುತ್ತಿರೋದಾಗಿ ಘೋಷಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಯ ಈ ಪೋಸ್ಟ್ ವೈರಲ್ ಆಯ್ತು. ಇದಕ್ಕೆ ಕಾರಣ ಕಳೆದ ವರ್ಷ ಈ ಜೋಡಿ ಮಾಡಿಕೊಂಡಿದ್ದ ಅವಾಂತರ. ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಜೋಡಿ ಕಳೆದ ವರ್ಷವೆಲ್ಲ ಸುದ್ದಿಯಲ್ಲಿದ್ದರು. ಇವರಿಬ್ಬರ ರಿಲೇಶನ್‌ಶಿಪ್‌ ಬಗ್ಗೆ ಸಿಕ್ಕಾಪಟ್ಟೆ ಮಾತುಗಳು ಕೇಳಿ ಬಂದವು. ಒಂದು ಕಡೆ ಈ ಜೋಡಿಯ ಪ್ರೇಮ ಕಹಾನಿ ಗಮನ ಸೆಳೆದರೆ ಇನ್ನೊಂದು ಕಡೆ ಇವರಿಬ್ಬರ ಪತ್ನಿ ಹಾಗೂ ಪತಿಯ ಹೇಳಿಕೆಗಳೂ ವೈರಲ್‌ ಆಗಿದ್ದವು. ಅದರಲ್ಲೂ ನರೇಶ್ ಪತ್ನಿ ರಮ್ಯಾ ಈ ಸಂಬಂಧದ ಬಗ್ಗೆ ಸಾರ್ವಜನಿಕವಾಗಿಯೇ ಆವಾಜ್ ಹಾಕಿದರು. ಇತ್ತ ಪವಿತ್ರಾ ಲೋಕೇಶ್ ಮೊದಲ ಪತಿ ಸುಚೇಂದ್ರ ಪ್ರಸಾದ್‌ ಸಹ ಈ ಸಂಬಂಧದ ಬಗ್ಗೆ ಮಾತಾಡಿದ್ದರು.

ಈ ಜೋಡಿಯ ಸಂಬಂಧ ಪಾಸಿಟಿವ್‌ ಗಿಂತಲೂ ನೆಗೆಟಿವ್‌ ಆಗಿಯೇ ಸುದ್ದಿ ಆಯ್ತು. ಹಾಗೆ ನೋಡಿದರೆ ನರೇಶ್‌ ಮನೆತನಕ್ಕೆ ಟಾಲಿವುಡ್‌ನಲ್ಲಿ ದೊಡ್ಡ ಹೆಸರಿದೆ. ತೆಲುಗಿನ ಸೂಪರ್‌ ಸ್ಟಾರ್ ಮಹೇಶ್‌ ಬಾಬು ಅವರಿಗೆ ವರಸೆಯಲ್ಲಿ ಈ ನರೇಶ್‌ ಅಣ್ಣನಾಗಬೇಕು. ಇವರಿಬ್ಬರ ತಂದೆ ಕೃಷ್ಣ. ಒಮ್ಮೆಯಂತೂ ಈ ಜೋಡಿ ಸಿಕ್ಕಾಕಿಕೊಂಡು ಕ್ಯಾಮರ ಕಣ್ಣಿಗೆ ಸಿಕ್ಕಿ ಇವರಿಬ್ಬರ ವೀಡಿಯೋ ವೈರಲ್‌ ಆಗಿತ್ತು. ಇನ್ನೊಂದೆಡೆ ಈ ಜೋಡಿ ಸಾವಿನ ಮನೆಯಲ್ಲೂ ಬೇರೆ ಥರವೇ ಬಿವೇವ್‌ ಮಾಡುತ್ತಿತ್ತು. ಇದು ನೋಡುವವರಲ್ಲಿ ಇವರ ಬಗ್ಗೆ ಅಸಹ್ಯ ಭಾವ ಮೂಡಿಸುತ್ತಿತ್ತು ಅನ್ನೋದು ಸುದ್ದಿಯಾಯ್ತು.

ಬಹುಶಃ ಈ ಜೋಡಿ ಇಂಥಾ ಸುದ್ದಿಗಳಿಂದ ರೋಸಿ ಹೋಗಿರಬೇಕು. ಈಗ ವರ್ಷದ ಆರಂಭದಲ್ಲೇ ಸಿಹಿ ಸುದ್ದಿ ನೀಡಿತು. ಇದೀಗ ಅವರ ಮದುವೆಯ ದಿನಾಂಕದ ಸುದ್ದಿಯೂ ರೆಕ್ಕೆಪುಕ್ಕ ಮೂಡಿಸಿ ಹರಿದಾಡಲು ಶುರುವಾಗಿದೆ. ಈ ಜೋಡಿ ಈ ತಿಂಗಳ ಕೊನೆಯಲ್ಲಿ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ. ತೆಲುಗು ಸಿನಿಮಾ ಎಂಟ್ರಿಗೂ ಮುನ್ನವೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಹೆಸರು ಮಾಡಿದ್ದವರು ಪವಿತ್ರಾ ಲೋಕೇಶ್‌. ಬಳಿಕ ಟಾಲಿವುಡ್ ನಲ್ಲಿ ಪೋಷಕ ನಟಿಯಾಗಿ ಹೆಸರು ಮಾಡಿದರು. ಇದೀಗ ಪವಿತ್ರಾ ಲೋಕೇಶ್ 2023ರ ಹೊಸ ವರ್ಷದ ಹೊಸ್ತಿಲಿನಲ್ಲಿ ತಮ್ಮ ಮದುವೆಯ ವಿಚಾರವನ್ನು ವಿಶಿಷ್ಟವಾಗಿ ರೊಮ್ಯಾಂಟಿಕ್ ಆಗಿ ಬಹಿರಂಗಪಡಿಸಿದ್ದಾರೆ. ಟಾಲಿವುಡ್ ನ ಖ್ಯಾತ ಪೋಷಕ ನಟ ನರೇಶ್ ಜೊತೆಗಿನ ಪವಿತ್ರಾ ಲೋಕೇಶ್ ಸಂಬಂಧ ಕೆಲ ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ನರೇಶ್ ಅವರ ಪತ್ನಿ ರಮ್ಯಾ ಇಬ್ಬರ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮೈಸೂರಿನ ಹೊಟೇಲ್ ರೂಂನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಉಳಿದುಕೊಂಡಿದ್ದ ವೇಳೆ ರಮ್ಯಾ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿ ಆ ಸುದ್ದಿ ಅಲ್ಲಿಗೇ ತಣ್ಣಗಾಗಿತ್ತು.

ಲಿಪ್ ಕಿಸ್ ವಿಡಿಯೋ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸಿದ ಪವಿತ್ರಾ ಲೋಕೇಶ್-ನರೇಶ್

ಇದೀಗ ಪವಿತ್ರ ಲೋಕೇಶ್ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯೊತ್ತಿದ್ದಾರೆ. ವಿಡಿಯೊವೊಂದನ್ನು ಅವರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ನರೇಶ್ ಮತ್ತು ಪವಿತ್ರಾ ಕ್ಯಾಂಡಲ್ ಲೈಟ್ ಉರಿಸಿ ಕೇಕ್ ಕತ್ತರಿಸಿದ್ದಾರೆ. ಬಳಿಕ ಇಬ್ಬರೂ ಒಬ್ಬರಿಗೊಬ್ಬರು ತಿನ್ನಿಸಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನರೇಶ್ ಪವಿತ್ರಾ ಅವರ ತುಟಿಗೆ ರೊಮ್ಯಾಂಟಿಕ್(Romantic) ಆಗಿ ಮುತ್ತಿಡುತ್ತಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಶಯ(Wish) ಕೋರುತ್ತಾ ಹೊಸ ವರ್ಷ, ಹೊಸ ಆರಂಭ ನಿಮ್ಮೆಲ್ಲರ ಶುಭಹಾರೈಕೆ ಬೇಕು, ನಾನು ಮತ್ತು ಪವಿತ್ರಾ ನರೇಶ್ ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಪ್ರಕಟಿಸಿದ್ದಾರೆ ನರೇಶ್.

ತೆಲುಗಿನ ಖ್ಯಾತ ಹಿರಿಯ ನಟ ದಿವಂಗತ ಕೃಷ್ಣ ಅವರ ಪುತ್ರ, ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಮಲ ಸಹೋದರ ನರೇಶ್ ಅವರಿಗೆ ಇದು ನಾಲ್ಕನೇ ಮದುವೆಯಾದರೆ(Marriage) ಪವಿತ್ರಾ ಲೋಕೇಶ್ ಅವರಿಗೆ ಮೂರನೇ ಮದುವೆಯಾಗಿದೆ. ಹಾಗಿದ್ದರೆ ಈ ಜೋಡಿ ಈ ತಿಂಗಳ ಕೊನೆಯಲ್ಲೇ ಪಾಣಿಗ್ರಹಣ ಮಾಡಿಕೊಳ್ಳೋದು ನಿಜನಾ ಅನ್ನೋ ಬಗ್ಗೆ ಈ ಜೋಡಿಯೇ ಸ್ಪಷ್ಟನೆ ನೀಡಬೇಕಿದೆ.

ನರೇಶ್ ಜೊತೆ ಮದುವೆ ವಿವಾದ ಬೆನ್ನಲ್ಲೇ ದೊಡ್ಡ ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಔಟ್?

Follow Us:
Download App:
  • android
  • ios