ನಟ ಧನುಷ್ ಅವರು ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಮಧ್ಯೆ ಅವರ ಮದುವೆ ಸುದ್ದಿ ಕೂಡ ಓಡಾಡುತ್ತಿರುತ್ತದೆ. ನಟ ಧನುಷ್ ಅವರಿಗೆ 20, 15 ವರ್ಷದ ಮಗ ಕೂಡ ಇದ್ದಾನೆ. ಈಗ ಅವರು ಮದುವೆ ಆಗಲಿದ್ದಾರೆ ಎನ್ನಲಾಗ್ತಿದೆ.
ತಮಿಳು ಸೂಪರ್‌ಸ್ಟಾರ್ ಧನುಷ್ ಮತ್ತು ಬಾಲಿವುಡ್-ಸೌತ್ ನಟಿ ಮೃಣಾಲ್ ಠಾಕೂರ್ ಮದುವೆಯಾಗಲಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ, ಬದಲಿಗೆ ಮಾಧ್ಯಮ ವರದಿಗಳು ಮೂಲಗಳನ್ನು ಉಲ್ಲೇಖಿಸಿ ಈ ಬಗ್ಗೆ ಹೇಳುತ್ತಿವೆ. ಅಷ್ಟೇ ಅಲ್ಲ, ಅವರ ಮದುವೆ ದಿನಾಂಕವನ್ನೂ ವರದಿಗಳಲ್ಲಿ ತಿಳಿಸಲಾಗಿದೆ.
ಧನುಷ್ ಮತ್ತು ಮೃಣಾಲ್ ಠಾಕೂರ್ ಮದುವೆ ಯಾವಾಗ?
ವರದಿಗಳ ಪ್ರಕಾರ, 42 ವರ್ಷದ ಧನುಷ್ ಮತ್ತು 33 ವರ್ಷದ ಮೃಣಾಲ್ ಠಾಕೂರ್ ಫೆಬ್ರವರಿ 14, 2026 ರಂದು ಮದುವೆಯಾಗಬಹುದು. ಇದು ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸುವ ಖಾಸಗಿ ಸಮಾರಂಭವಾಗಿರಲಿದೆ ಎನ್ನಲಾಗಿದೆ.
ಧನುಷ್-ಮೃಣಾಲ್ ಸಂಬಂಧದ ವದಂತಿ ಶುರುವಾಗಿದ್ದು ಹೇಗೆ?
'ಸನ್ ಆಫ್ ಸರ್ದಾರ್ 2' ಚಿತ್ರದ ವಿಶೇಷ ಸ್ಕ್ರೀನಿಂಗ್‌ಗೆ ಧನುಷ್ ಮುಂಬೈಗೆ ಬಂದಾಗ ಇಬ್ಬರ ಸಂಬಂಧದ ಬಗ್ಗೆ ವದಂತಿಗಳು ಶುರುವಾದವು. ಇಬ್ಬರೂ ಕೈ ಕೈ ಹಿಡಿದು, ಕಿವಿಯಲ್ಲಿ ಪಿಸುಗುಟ್ಟುತ್ತಾ ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಧನುಷ್ ಪಾರ್ಟಿಯಲ್ಲೂ ಮೃಣಾಲ್ ಠಾಕೂರ್ ಭಾಗಿ
ಮೃಣಾಲ್ ಠಾಕೂರ್, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ರ‍್ಯಾಪ್-ಅಪ್ ಪಾರ್ಟಿಗೆ ಹಾಜರಾಗಿದ್ದಾಗಲೂ ಸುದ್ದಿಯಾಗಿದ್ದರು. ಅವರು ಆ ಚಿತ್ರದ ಭಾಗವಾಗಿರಲಿಲ್ಲ. ಅಲ್ಲದೆ, ಮೃಣಾಲ್ ಅವರು ಧನುಷ್ ಅವರ ಇಬ್ಬರು ಸಹೋದರಿಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿದ್ದಾರೆ.
ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ?
ನ್ಯೂಸ್ 18 ವರದಿಯ ಪ್ರಕಾರ, ಧನುಷ್ ಮತ್ತು ಮೃಣಾಲ್ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ, ಸಂಬಂಧ ಹೊಸದಾಗಿರುವುದರಿಂದ ಸದ್ಯಕ್ಕೆ ಅದನ್ನು ಜಗತ್ತಿನ ಕಣ್ಣಿನಿಂದ ಮುಚ್ಚಿಡುತ್ತಿದ್ದಾರೆ ಎನ್ನಲಾಗಿದೆ.
ಮೃಣಾಲ್ ಠಾಕೂರ್ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮೃಣಾಲ್, ಧನುಷ್ ಜೊತೆಗಿನ ಸಂಬಂಧದ ಸುದ್ದಿಗಳನ್ನು ತಮಾಷೆಯ ವದಂತಿ ಎಂದಿದ್ದರು. 'ಧನುಷ್ ನನ್ನ ಒಳ್ಳೆಯ ಸ್ನೇಹಿತ ಅಷ್ಟೇ' ಎಂದಿದ್ದರು. 'ಸನ್ ಆಫ್ ಸರ್ದಾರ್ 2' ಸ್ಕ್ರೀನಿಂಗ್‌ಗೆ ಅಜಯ್ ದೇವಗನ್ ಧನುಷ್ ಅವರನ್ನು ಕರೆದಿದ್ದರು ಎಂದು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಧನುಷ್ ಇನ್ನೂ ಮೌನವಾಗಿದ್ದಾರೆ.
ಇಬ್ಬರು ಮಕ್ಕಳ ತಂದೆ ಧನುಷ್
ಧನುಷ್ 2004ರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಯಾತ್ರಾ (20) ಮತ್ತು ಲಿಂಗಾ (16) ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 2022ರಲ್ಲಿ ಬೇರ್ಪಡುವುದಾಗಿ ಘೋಷಿಸಿ, 2024ರಲ್ಲಿ ವಿಚ್ಛೇದನ ಪಡೆದರು.


