ಬಾಲಿವುಡ್‌ನಲ್ಲಿ ಭಾರೀ ಸಂಚಲನ ಹುಟ್ಟುಹಾಕಿರುವ ಚಪಕ್ ಚಿತ್ರದ ಪ್ರಮೋಶನ್‌ನಲ್ಲಿ ದೀಪಿಕಾ ಪಡುಕೋಣೆ ಬ್ಯುಸಿಯಾಗಿದ್ದಾರೆ. ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಗ್ನೆನ್ಷಿ ಬಗ್ಗೆಯೇ ಜನ ಹೆಚ್ಚು ಪ್ರಶ್ನೆ ಕೇಳುತ್ತಾರೆ. ಹೋದಲ್ಲೆಲ್ಲಾ ಇವರ ಪ್ರಗ್ನೆನ್ಸಿ ಬಗ್ಗೆಯೇ ಜನಕ್ಕೆ ಕುತೂಹಲ ಜಾಸ್ತಿ. ಇಂತದ್ದೇ ಒಂದು ಘಟನೆ ಕೆಲದಿನಗಳ ಹಿಂದೆ ಮಾಧ್ಯಮದೆದುರು ನಡೆದಿದೆ. 

ರಾಕಿಭಾಯ್ ಬರ್ತಡೇಗೆ ಕೆಜಿಎಫ್ 2 ಡೈರೆಕ್ಟರ್ ಕೊಟ್ರು ಶಾಕಿಂಗ್ ನ್ಯೂಸ್!

ದೀಪಿಕಾ ಪಡುಕೋಣೆ ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ, ಪತ್ರಕರ್ತರೊಬ್ಬರು, ನೀವು ಪ್ರಗ್ನೆಂಟಾ? ಎಂದು ಕೇಳುತ್ತಾರೆ. ಇದಕ್ಕೆ ದೀಪಿಕಾ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಟ್ಟಿದ್ದಾರೆ. 

'ನಾನು ನಿಮಗೆ ಪ್ರಗ್ನೆಂಟ್ ರೀತಿ ಕಾಣಿಸುತ್ತೀನಾ? ಮಗುವನ್ನು ಮಾಡಿಕೊಳ್ಳುವ ಮುನ್ನ ಒಮ್ಮೆ ಬಂದು ನಿಮ್ಮನ್ನು ಕೇಳುತ್ತೇನೆ.  ನೀವು ಒಪ್ಪಿಗೆ ಕೊಟ್ಟ ಮೇಲೆ ನಾವು ಪ್ಲಾನ್ ಮಾಡಿಕೊಳ್ಳುತ್ತೇವೆ.  ಒಂದು ವೇಳೆ ನಾನು ಪ್ರಗ್ನೆಂಟ್ ಆದರೆ ಒಂಭತ್ತು ತಿಂಗಳಲ್ಲಿ ನಿಮಗೆ ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ. 

ದೀಪಿಕಾಪಡುಕೋಣೆ- ರಣವೀರ್ ಬಾಲಿವುಡ್‌ನ ಮೋಸ್ಟ್ ಅಡೋರಬಲ್ ಕಪಲ್. ಹೋದಲ್ಲೆಲ್ಲಾ ಮಗುವಿನ ಬಗ್ಗೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. 

ಮೆಲೋಡಿಯಸ್ ಹಾಡುಗಳ ಮಾಂತ್ರಿಕ ಎ ಆರ್ ರೆಹಮಾನ್; ಇಂಟರೆಸ್ಟಿಂಗ್ ವಿಚಾರಗಳು!

ದೀಪಿಕಾ ಪಡುಕೋಣೆ ಸದ್ಯ 'ಚಪಕ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಲ್ಮಾನ್ ಖಾನ್, ಅನನ್ಯ ಪಾಂಡೆ ಹಾಗೂ ಸಿದ್ಧಾಂತ್ ಚತುರ್ವೇದಿ ಜೊತೆ ಸಿನಿಮಾ ಮಾಡಲಿದ್ದಾರೆ. ಸಿನಿಮಾಗೆ ಇನ್ನೂ ಟೈಟಲ್ ಇಡಲಾಗಿಲ್ಲ. 

ಇನ್ನು ರಣವೀರ್ ಸಿಂಗ್ '83' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಬಯೋಪಿಕ್.