‘ನಂಗೆ ಇಂಡಿಯನ್ಸ್’ ಕಂಡರೆ ಆಗಲ್ಲ ಅಂತ ಮಾತಾಡಿ ರೇಸಿಸ್ಟ್ ಅಂತ ಉಗಿಸಿಕೊಂಡಿರುವಾಕೆ ರೀನೆ ಗ್ರೇಸಿ. ಆಸ್ಟ್ರೇಲಿಯಾದ ೨೫ರ ಹರೆಯದ ಈಕೆ ಪೋರ್ನ್ ದಂಧೆಗೆ ಇಳಿದಿದ್ದಾಳೆ. ಮೊದಲು ಆಸ್ಟ್ರೇಲಿಯಾದ ಮೊದಲ ಮಹಿಳಾ ಸೂಪರ್ ಕಾರ್ ಡ್ರೖವರ್ ಅಂತ ಗುರುತಿಸಿಕೊಂಡಿದ್ದಳು. ಸಾಕಷ್ಟು ಪ್ರಚಾರಕ್ಕೂ ಬಂದಿದ್ದಳು.

ಆದರೆ ತಾನು ಸೂಪರ್ ಕಾರ್ ರೇಸರ್ ಆಗಿರೋದಕ್ಕಿಂತ ಎಷ್ಟೋ ಹೆಚ್ಚು ಹಣ ಈ ಪೋರ್ನ್ ಇಂಡಸ್ಟ್ರಿಯಲ್ಲಿ ಮಾಡಬಹುದು ಅಂತನಿಸಿದ್ದೇ ಹಿಂದೆ ಮುಂದೆ ನೋಡದೇ ಸೋಷಲ್ ಮೀಡಿಯಾದಲ್ಲಿ ಆಕ್ಟಿವ್ ಆದಳು. ಮಾದಕ ಭಂಗಿಯಲ್ಲಿರುವ ತನ್ನ ಬೆತ್ತಲೆ ಫೋಟೋಗಳನ್ನು ಆನ್ಲೈನ್ ನಲ್ಲಿ ಮಾರಾಟಕ್ಕಿಟ್ಟಳು. ವಿಶ್ವಾದ್ಯಂತದ ಜನ ಹುಚ್ಚಿಗೆದ್ದು ಈಕೆಯ ಬೆತ್ತಲೆ ಮೈಮಾಟವನ್ನು ಆಸ್ವಾದಿಸತೊಡಗಿದರು. ಈಕೆಗಾಗಿ ಡಾಲರ್ ಗಟ್ಟಲೆ ಹಣ ಸುರಿಯಲು ಹಿಂದೆಮುಂದೆ ನೋಡಲಿಲ್ಲ. ಸದಾ ಹೊಸತನ ಬಯಸುವ ಪೋರ್ನ್ ಉದ್ಯಮದಲ್ಲಿ ಈ ಫ್ರೆಶ್ ಫೇಸ್ ಈ ಮಟ್ಟಿನ ಬೇಡಿಕೆ ಪಡೆದದ್ದು ಪೋರ್ನ್ ಜಗತ್ತಿನ ಇತರರು ಅಸೂಯೆ ಪಡುವ ಹಾಗೆ ಮಾಡಿತು. ಈ ರೇಸ್ ಹುಡುಗಿ ಬಂದು ಇನ್ನೂ ಏಳು ತಿಂಗಳು ಆಯಿತಷ್ಟೇ.ಆಗಲೇ ಜಗತ್ತಿನ ಲಕ್ಷಾಂತರ ಜನ ಈಕೆಯ ಬೆತ್ತಲೆ ಚಿತ್ರ ನೋಡಿ ಎನ್ ಜಾಯ್ ಮಾಡಿದ್ದಾರಂತೆ. ಒಂದು ವಾರಕ್ಕೆ ೨೫,೦೦೦ ಡಾಲರ್ ಗೂ ಅಧಿಕ ಹಣ ಸಂಪಾದಿಸಿದ್ದು ಈಕೆಯ ಪೋರ್ನ್ ಉದ್ಯಮದಲ್ಲಿ ಯಾವ ಬಗೆಯ ಜನಪ್ರಿಯತೆ ಸಾಧಿಸಿದ್ದಾಳೆ ಅನ್ನೋದಕ್ಕೆ ಸಾಕ್ಷಿ.

ರೇಸರ್ ಸ್ಪೀಡ್ ನಲ್ಲಿ ನೀಲಿ ಚಿತ್ರೋದ್ಯಮಕ್ಕೆ ಭಾರೀ ಹೆಸರು ಮಾಡಿದ ಈ ಮಾನಿನಿ ಸಡನ್ನಾಗಿ ವಿವಾದವನ್ನೂ ತನ್ನ ಮೈಮೇಲೆ ಎಳೆದುಕೊಂಡಳು. ಇದರಿಂದ ವರ್ಣ ದ್ವೇಷದ ಸೀಲು ಬಿದ್ದರೂ ಜನಪ್ರಿಯತೆಯೂ ಭಾರೀ ಹೆಚ್ಚಾಯ್ತು. ಇದಕ್ಕೆ ಕಾರಣ ಏನು, ಈ ಹೆಣ್ಣಿಗೆ ಇಂಡಿಯನ್ಸ್ ಕಂಡರೆ ಯಾಕೆ ಅಂಥಾ ಸಿಟ್ಟು ಅಂತ ಕೇಳಿದರೆ ಅದಕ್ಕೂ ಕಾರಣವಿದೆ. ಹಲವು ಮಂದಿ ಭಾರತೀಯರು ಈಕೆಯ ಬೆತ್ತಲೆ ಚಿತ್ರವನ್ನು ಕದ್ದುಬಿಟ್ಟಿದ್ದಾರೆ. ವಿಶ್ವದ ಜನರೆಲ್ಲ ತನ್ನ ಬೆತ್ತಲೆ ಚಿತ್ರವನ್ನು ಅಷ್ಟು ದುಡ್ಡುಕೊಟ್ಟು ಖರೀದಿಸುತ್ತಿರುವಾಗ ಅದನ್ನು ಕದಿಯಲು ಹೊರಟ ಭಾರತೀಯರ ಬಗ್ಗೆ ಈಕೆಗೆ ಸಿಟ್ಟು ಬಂದಿದೆ. ಅದಕ್ಕಾಗಿ ತನ್ನ ಪೇಜ್ ಗೆ ಯಾವ ಭಾರತೀಯರಿಗೂ ಎಂಟ್ರಿ ಇಲ್ಲ ಅಂತ ಘಂಟಾಘೋಷವಾಗಿ ಸಾರಿ ಬಿಟ್ಟಿದ್ದಾಳೆ. ಇದಕ್ಕೆ ವರ್ಣ ದ್ವೇಷದ ಲೇಬಲ್ ಹಚ್ಚಿದ್ದಕ್ಕೂ ಈಕೆಗೆ ಬೇಜಾರಿಲ್ಲ. ಈ ಬಗೆಯ ಸ್ಟೇಟ್ ಮೆಂಟ್ ಇನ್ನಷ್ಟು ಪ್ರಚಾರ ತಂದುಕೊಟ್ಟು, ಈಕೆಯ ಚಿತ್ರಗಳು ಹೆಚ್ಚು ಹೆಚ್ಚು ಸೇಲ್ ಆಗಿವೆ. ‘ನನ್ನ ಪೇಜ್ ನಲ್ಲಿರುವ ನನ್ನ ಚಿತ್ರಗಳನ್ನು ಕದಿಯೋದನ್ನು ಮೊದಲು ನಿಲ್ಲಿಸಿ. ಆ ಚಿತ್ರಕ್ಕೆ ಕಾಪಿರೈಟ್ ಇದೆ. ಅವು ನನ್ನ ಚಿತ್ರಗಳು. ನಿಮಗೆ ಅವುಗಳ ಮೇಲೆ ಯಾವ ಅಧಿಕಾರವೂ ಇಲ್ಲ’ ಎನ್ನುವ ಜೊತೆಗೆ ಅಶ್ಲೀಲ ಬೈಗುಳವನ್ನೂ ಹರಿಯಬಿಟ್ಟು ಈಕೆ ಸಿಟ್ಟು ಕಾರಿಕೊಂಡಿದ್ದಾಳೆ. ಜೊತೆಗೆ ತನ್ನ ಪೇಜ್ ನಿಂದ ಎಲ್ಲ ಭಾರತೀಯರನ್ನೂ ರಿಮೂವ್ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ.

ಪೋರ್ನ್‌ ಸೇರಿದ ರೇಸರ್ ರೆನೀ ಗ್ರೇಸಿಯ ಬಗ್ಗೆ ಜನ ಏನ್‌ ಸರ್ಚ್ ಮಾಡ್ತಿದಾರೆ ಗೊತ್ತಾ?

ರೀನೆ ತನ್ನ ಪೇಜ್ ನಲ್ಲಿ ಮಹಿಳೆಯರಿಗೆ ಈ ಉದ್ಯಮಕ್ಕೆ ಬರೋದು ಹೇಗೆ, ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿ ಹಣ ಗಳಿಸೋದು ಹೇಗೆ ಅನ್ನೋ ಬಗ್ಗೆಯೂ ಚಿಕ್ಕ ಚಿಕ್ಕ ಟಿಪ್ಸ್ ಕೊಡುತ್ತಾಳೆ. ‘ಎಕ್ಸ್ ರೇಟೆಡ್ ಅಂದರೆ ಟಾಪ್ ಲೆಸ್ ಆಗಿರುವ ಫೋಟೋಗಳಿಗಾಗಿ ಹೆಣ್ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಶ್ರಮ ಹಾಕಬೇಕಾಗುತ್ತದೆ. ಅವುಗಳಿಗೆ ಪ್ರೀಮಿಯಮ್ ರೇಟ್ ಇಡಬೇಕು.’ ಅಂತೆಲ್ಲ ಸಲಹೆ ಮಾಡುತ್ತಾಳೆ.

ಕಾರ್‌ ರೇಸರ್ ಇಂದು ಪೋರ್ನ್‌ ಸ್ಟಾರ್, 'ವಯಸ್ಕರ' ಲೋಕಕ್ಕೆ ಬರಲು ಅವರೇ ಕೊಟ್ಟ ಕಾರಣ

ಸೂಪರ್ ಕಾರ್ ರೇಸರ್ ಆಗಿದ್ದವಳು ಪೋರ್ನ್ ಸ್ಟಾರ್ ಆಗಿದ್ದಕ್ಕೆ ಹಲವರು ಈಕೆಯ ಬಳಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರಂತೆ. ಅದಕ್ಕೆಲ್ಲ ತಾನು ಕೇರ್ ಮಾಡಲ್ಲ. ತನ್ನ ಲೖಫ್, ತನ್ನ ನಿರ್ಧಾರಗಳು ತನ್ನಿಷ್ಟ ಅಂತ ನಿರ್ದಾಕ್ಷಿಣ್ಯವಾಗಿ ಹೇಳಿಕೊಂಡಿದ್ದಾಳೆ. ‘ನಾನೇನೂ ಪ್ರಾಸ್ಟಿಟ್ಯೂಟ್ ಅಲ್ಲ. ನಾನು ವ್ಯಭಿಚಾರ ಮಾಡಲ್ಲ. ಆದರೆ ನನ್ನ ಯೌವನವನ್ನು ಗಳಿಕೆಗೆ ಮೀಸಲಿಟ್ಟಿದ್ದೇನೆ. ತನ್ನ ದೇಹವನ್ನು ಆರ್ಟ್ ಪೀಸ್ ಅಂದುಕೊಂಡು ಅವುಗಳ ಚಿತ್ರವನ್ನು ಪೋಸ್ಟ್ ಮಾಡಿ ಹಣ ಗಳಿಸುತ್ತೇನೆ’ ಅನ್ನುವ ರೀನೆಗೆ ತನ್ನ ಕೆಲಸದ ಬಗ್ಗೆ ಕೀಳರಿಮೆಗಿಂತಲೂ ಹೆಚ್ಚು ಹೆಮ್ಮೆ ಇದೆ.

ರೇಸಿಂಗ್‌ ಬಿಟ್ಟು ಪೋರ್ನ್‌ ಸ್ಟಾರ್‌ ಆದವಳಿಗೆ ವಾರಕ್ಕೆ 19 ಲಕ್ಷ ರೂ ಸಂಭಾ​ವ​ನೆ!