ಮೆಲ್ಬರ್ನ್‌(ಜೂ.09): ಸೂಪರ್‌ಕಾ​ರ್‍ಸ್ನ ಮಾಜಿ ರೇಸರ್‌ ಆಸ್ಪ್ರೇ​ಲಿ​ಯಾದ ರೀನೆ ಗ್ರಾಸಿಯಾ ಈ ಪೋರ್ನ್‌ ಸ್ಟಾರ್‌ (ನೀಲಿ ಚಿತ್ರ ನಟಿ)ಯಾಗಿ​ದ್ದು, ವಾರಕ್ಕೆ 18.8 ಲಕ್ಷ ರು. ಸಂಪಾ​ದನೆ ಮಾಡು​ತ್ತಿ​ರು​ವಾಗಿ ಹೇಳಿ​ಕೊಂಡಿ​ದ್ದಾರೆ.

2015ರಲ್ಲಿ ವೃತ್ತಿ​ಪರ ರೇಸರ್‌ ಆಗಿ ಪಾದಾ​ರ್ಪಣೆ ಮಾಡಿದ್ದ ರೀನೆ, 2017ರಲ್ಲಿ ಕಳಪೆ ಪ್ರದ​ರ್ಶ​ನದ ಕಾರಣ ರೇಸಿಂಗ್‌ ನಿಲ್ಲಿ​ಸಿ​ದ್ದರು. 25 ವರ್ಷದ ರೀನೆ ಇತ್ತೀ​ಚೆ​ಗಷ್ಟೇ ಪೋರ್ನ್‌ ಸ್ಟಾರ್‌ ಆಗಿ ಬದ​ಲಾ​ಗಿ​ದ್ದರು.

5ನೇ ಬಾರಿ INRC ಚಾಂಪಿಯನ್ಸ್ ಪಟ್ಟ ಗೆದ್ದ ಗೌರವ್ ಗಿಲ್‌!

‘ರೇಸಿಂಗ್‌ನಲ್ಲಿ ನಿರೀ​ಕ್ಷಿತ ಯಶಸ್ಸು ಸಿಗದ ಕಾರಣ, ಪೋರ್ನ್‌ ಸ್ಟಾರ್‌ ಆಗಲು ಇಚ್ಛಿ​ಸಿ​ದೆ. ನಾನು ಊಹಿ​ಸದೆ ಇರು​ವಷ್ಟುಹಣ ಸಿಗು​ತ್ತಿದೆ. 30 ವರ್ಷದ ಗೃಹ ಸಾಲವನ್ನು ಕೇವಲ 12 ತಿಂಗ​ಳಲ್ಲಿ ತೀರಿ​ಸ​ಲಿ​ದ್ದೇನೆ. ನನ್ನ ಹೊಸ ವೃತ್ತಿಬದುಕಿಗೆ ಪೋಷ​ಕರ ಬೆಂಬ​ಲವೂ ಇದೆ’ ಎಂದು ರೀನೆ ಹೇಳಿ​ಕೊಂಡಿ​ದ್ದಾರೆ.