Asianet Suvarna News Asianet Suvarna News

ರಾಮ್ ಗೋಪಾಲ್ ವರ್ಮಾ Dangerous cinema ಪೋಸ್ಟ್‌ಪೋನ್‌, ಅತಿ ಪ್ರಚೋದಕತೆ ಇದಕ್ಕೆ ಕಾರಣವಾ?

Ram Gopal Verma new movie dangerous: ರಾಮ್‌ಗೋಪಾಲ್ ವರ್ಮಾ ಇಬ್ಬರು ಹುಡುಗಿಯರ ಪ್ರೇಮದ ಕಥೆ ಉಳ್ಳ 'ಡೇಂಜರಸ್' (Lesbian Movie) ಅನ್ನೋ ಸಿನಿಮಾ ಮಾಡಿದ್ದು, ಇಂದು ರಿಲೀಸ್ ಆಗಬೇಕಿತ್ತು. ಆದರೆ ರಿಲೀಸ್ ಮುಂದಕ್ಕೆ ಹೋಗಿದೆ. ಹೆಣ್ಮಕ್ಕಳನ್ನು ಅತಿ ಪ್ರಚೋದಕವಾಗಿ ತೋರಿಸಿದ್ದೇ ಸಿನಿಮಾ ರಿಲೀಸ್ ಗೆ ಅಡ್ಡಿಯಾಯ್ತಾ?

 

Why RGV's lesbian Film postponed is because of vulgarity
Author
Bengaluru, First Published Apr 8, 2022, 3:01 PM IST

ದಶಕದ ಹಿಂದೆ ರಾಮ್ ಗೋಪಾಲ್ ವರ್ಮಾ (Ramgopal Varma) ಸಿನಿಮಾ ಅಂದರೆ ಜನರ ಕುತೂಹಲ ಹೆಚ್ಚಿರುತ್ತಿತ್ತು. ರಾಜಕೀಯದ ಕತೆಯುಳ್ಳ ಚಿತ್ರಗಳು, ಇಂಡಿಯನ್‌ ಗ್ಯಾಂಗ್‌ಸ್ಟರ್‌ (Gangster) ಟ್ರಯಾಲಜಿಗಳ ಮೂಲಕ ಸಿನಿಮಾ ಪ್ರಿಯರು ಮಾತ್ರ ಅಲ್ಲ, ಸಿನಿಮಾ ಕ್ರಿಟಿಕ್‌ಗಳ ಮೆಚ್ಚುಗೆಗೂ ವರ್ಮಾ ಪಾತ್ರರಾದವರು. ಇವರ ಸತ್ಯ (Satya), ರಕ್ತ ಚರಿತ್ರ, ದಿ ಅಟ್ಯಾಕ್ 26/11, ಆಪರೇಶನ್‌ ಕೊಕೂನ್ ಸೇರಿದಂತೆ ಹಲವು ಒಳ್ಳೊಳ್ಳೆ ಸಿನಿಮಾಗಳನ್ನು ಆರ್‌ಜಿವಿ ಕೊಟ್ಟಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಕೆಲಸಕ್ಕಿಂತ ಮಾತುಗಳೇ ಹೆಚ್ಚಾಗ್ತಿವೆ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ (Social media) ನಡೀತಿದೆ. ಅಸಹಜ, ವಿಚಿತ್ರ ಹೇಳಿಕೆಗಳ ಮೂಲಕ ಇವರು ಸುದ್ದಿಯಲ್ಲಿದ್ದದ್ದೇ ಹೆಚ್ಚು. ಇನ್ನೊಂದು ಕಡೆ ಸೆಕ್ಸ್ (Sex) ವೈಭವೀಕರಣದ ಥರ್ಡ್ ಗ್ರೇಡ್ ಸಿನಿಮಾ ಮಾಡಿ ಹೆಸರು ಕೆಡಿಸಿಕೊಂಡಿದ್ದೂ ಇದೆ. ನೀಲಿಚಿತ್ರಗಳ ನಟಿರೊಟ್ಟಿಗೆ ಸಿನಿಮಾ ಮಾಡಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಹಣ ಗಳಿಸುತ್ತಿದ್ದಾರೆ. ಕೆಲವು ವರ್ಷದ ಹಿಂದೆ ಚಿತ್ರೀಕರಣದಲ್ಲಿ ನಗ್ನವಾಗಿ ಹುಡುಗಿಯನ್ನು ಶೂಟಿಂಗ್ ಮಾಡಿದ್ದು ಸುದ್ದಿಯಾಗಿತ್ತು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಅವರ ಹೊಸ ಸಿನಿಮಾ ಡೇಂಜರಸ್ (Dangerous).

 

ಡೇಂಜರಸ್ ಚಿತ್ರ ರಾಮ್‌ಗೋಪಾಲ್ ವರ್ಮಾ ಅವರೇ ಹೇಳಿರುವಂತೆ ಇದು ಲೆಸ್ಬಿಯನ್ (Lesbian) ಕತೆ. 2018ರಲ್ಲಿ ಸುಪ್ರೀಂ ಕೋರ್ಟ್ (Supreme court) ಲೆಸ್ಬಿಯನ್ ಪರವಾಗಿ ತೀರ್ಪು ನೀಡುತ್ತೆ. ಹೆಣ್ಣು ಹೆಣ್ಣಿನ ನಡುವಿನ ಪ್ರೇಮ, ಕಾಮ ಕಾನೂನಿಗೆ ವಿರುದ್ಧವಲ್ಲ ಅನ್ನೋ ತೀರ್ಪು ಇದು. ಈ ವಿಷಯ ಆರ್‌ಜಿವಿ ಅವರನ್ನು ಬಹಳ ಸೆಳೆದಿದ್ದಂತೆ. ಲೆಸ್ಬಿಯನ್ ಹಕ್ಕುಗಳ ಬಗೆಗೆ ಎಲ್ಲರಿಗೂ ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಅವರು ಈ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾದ ಕೆಲಸಗಳೆಲ್ಲ ಪೂರ್ಣಗೊಂಡಿದ್ದು ಇತ್ತೀಚೆಗೆ ಬೆಂಗಳೂರು, ಮುಂಬೈ ಹಾಗೂ ದಕ್ಷಿಣ ಭಾರತೀಯ ಸಿಟಿಗಳಲ್ಲಿ ಸಿನಿಮಾ ಪ್ರಚಾರ ಮಾಡಿದ್ದರು. ಎಲ್ಲ ಅಂದುಕೊಂಡ ಹಾಗೇ ಆಗಿದ್ದರೆ ಸಿನಿಮಾ ಇವತ್ತು ಬಿಡುಗಡೆ ಆಗಬೇಕಿತ್ತು. ಆದರೆ ಹಠಾತ್ ಸಿನಿಮಾ ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ಚಿತ್ರಮಂದಿರಗಳು. 'ಡೇಂಜರಸ್' ಸಿನಿಮಾ ಪ್ರದರ್ಶನ ಮಾಡುವುದಿಲ್ಲ ಎಂದು ಹಲವು ಚಿತ್ರಮಂದಿರ ಮಾಲೀಕರು ಪ್ರತಿರೋಧ ವ್ಯಕ್ತಪಡಿಸಿದ್ದು, ಈ ಕಾರಣಕ್ಕಾಗಿ ರಾಮ್ ಗೋಪಾಲ್ ವರ್ಮಾ, ತಮ್ಮ ಸಿನಿಮಾ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಆಲಿಯಾ ಭಟ್- ರಣಬೀರ್ ಕಪೂರ್ ವೈವಾಹಿಕ ಜೀವನ ಹೇಗಿರಲಿದೆ? ಜ್ಯೋತಿಷ್ಯ ಏನನ್ನುತ್ತದೆ?

ಸಿನಿಮಾದಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೇಮಿಸುವ ಸನ್ನಿವೇಶಗಳು ಪೋಸ್ಟರ್, ಟ್ರೇಲರ್ ಗಳಲ್ಲಿ ರಿವೀಲ್ ಆಗಿದೆ. ಇವು ಬಹಳ ಪ್ರಚೋದಕ ಭಂಗಿಯಲ್ಲಿವೆ. ಈ ಹುಡುಗಿಯರ ಪ್ರೀತಿಗೆ ವಿಲನ್‌ಗಳಿಂದ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಧೀರೆಯರು ವಿಲನ್‌ಗಳನ್ನು ಎದುರಿಸಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ. ಇದು ಸಿನಿಮಾದ ಕತೆ. ಚಿತ್ರದಲ್ಲಿ ಇಬ್ಬರು ನಾಯಕಿಯರ ನಡುವೆ ಹಸಿಬಿಸಿ ಪ್ರೇಮ, ಕಾಮದ ದೃಶ್ಯಗಳಿವೆ. ಇದು ಪ್ರದರ್ಶಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಕಾರಣಕ್ಕೇ ಸಿನಿಮಾ ಪ್ರದರ್ಶಕರು ಈ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ. 

'KGF 2'; ಹಿಂದಿಯಲ್ಲಿ 12 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್

ಈ ಬಗ್ಗೆ ವರ್ಮಾ ತಮ್ಮ ಹೇಳಿಕೆ ಟ್ವೀಟ್ (Tweet) ಮಾಡಿದ್ದಾರೆ. 'ಸುಪ್ರಿಂಕೋರ್ಟ್‌ ಸಲಿಂಗ ಪ್ರೇಮ ಅಪರಾಧವಲ್ಲ ಎಂದು ತೀರ್ಪು ಬಂದ ಮೇಲೆ ಲೆಸ್ಬಿಯನ್ಸ್ ಕುರಿತ ಸಿನಿಮಾ ಮಾಡುವ ಆಲೋಚನೆ ನನಗೆ ಬಂದಿತು. ನನಗಿಂತಲೂ ಮುಂಚೆ ಹಲವರು ಲೆಸ್ಬಿಯನ್ಸ್‌ಗಳ ಬಗ್ಗೆ ಸಿನಿಮಾ ಮಾಡಿದ್ದಾರೆ. ಆದರೆ ಅವೆಲ್ಲ ಶಕ್ತಿಹೀನರೆಂದು, ಪಾಪದವರೆಂಬಂತೆಯೂ ಚಿತ್ರಿಸಿದ್ದಾರೆ. ಆದರೆ ನಾನು ಅವರನ್ನು ಫವರ್‌ಫುಲ್ ವ್ಯಕ್ತಿಗಳಾಗಿ ಚಿತ್ರಿಸಿ, ಸಮಾಜ ಲೆಸ್ಬಿಯನ್ಸ್‌ಗಳ ಕುರಿತು ಹೆಚ್ಚು ಸಹಿಷ್ಣುವಾಗಲಿ ಎಂದು ಮಸಾಲೆ ಸಿನಿಮಾದಲ್ಲಿ ಇರಬಹುದಾದ ಕತೆಯನ್ನೇ ಇಟ್ಟುಕೊಂಡು, ನಾಯಕ-ನಾಯಕಿ ಬದಲಿಗೆ ನಾಯಕಿ-ನಾಯಕಿ ಇಟ್ಟುಕೊಂಡಿದ್ದೇನೆ. ನಾನು ಏನೋ ತೋರಿಸಬಾರದುದ್ದನ್ನು ತೋರಿಸಲು ಹೊರಟಿದ್ದೇನೆ ಎಂಬಂತೆ ಚಿತ್ರಮಂದಿರಗಳು ನಮ್ಮ ಸಿನಿಮಾವನ್ನು ಪ್ರದರ್ಶಿಸುವುದಿಲ್ಲ ಎಂದಿದ್ದಾರೆ. ಆದರೆ ನಾವು ಇದರ ವಿರುದ್ಧ ಹೊರಾಡಲಿದ್ದೇವೆ. ನಮ್ಮ ಸಿನಿಮಾ ಪ್ರದರ್ಶನಗೊಳ್ಳುವಂತೆ ಮಾಡಲು ಅಗತ್ಯ ಕಾನೂನು ಹೋರಾಟಕ್ಕೆ ನಾವು ಮುಂದಾಗಿದ್ದೇವೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ' ಎಂದಿದ್ದಾರೆ. 'ಡೇಂಜರಸ್' ಸಿನಿಮಾದಲ್ಲಿ ವರ್ಮಾರ ಮೆಚ್ಚಿನ ನಟಿ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್, ಟೀಸರ್‌ಗಳು ಹಸಿ-ಬಿಸಿ ದೃಶ್ಯಗಳನ್ನು ಒಳಗೊಂಡಿವೆ. ಜೊತೆಗೆ ಆಕ್ಷನ್ ದೃಶ್ಯಗಳು ಸಹ ಇವೆ.

ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ
 

Follow Us:
Download App:
  • android
  • ios