ಬಾಲಿವುಡ್‌ನ ಎಲ್ಲರ ಬೇಡಿಕೆಯ ಹೀರೋ ಸಲ್ಮಾನ್ ಖಾನ್ ಜೊತೆ ನಟಿಸೋಕೆ ಹೀರೋಯಿನ್‌ಗಳು, ನಟಿಯರು ಕ್ಯೂನಲ್ಲಿ ನಿಂತಿರಬಹುದು ಎಂದು ನೀವು ಅಂದುಕೊಂಡಿದ್ದರೆ ತಪ್ಪು. ಕೆಲವರು ಆತನ ಜೊತೆ ನಟಿಸೋಕೆ ಬರುತ್ತಾರೆ ಎಂಬುದು ನಿಜ. ಆದರೆ, ಅವನ ಹಿಸ್ಟರಿ ಗೊತ್ತಿದ್ದವರು ಯಾರೂ ತನ್ನ ಮೊದಲ ಫಿಲಂ ಸಲ್ಮಾನ್ ಜೊತೆ ಆಗಲಿ ಎಂದು ಬಯಸುವುದೇ ಇಲ್ಲ. ಸಲ್ಮಾನ್ ಲೈಂಗಿಕ ಕಿರುಕುಳ ಕೊಡುತ್ತಾನೆ ಎಂದು ಇದರ ಅರ್ಥವಲ್ಲ. ಆತ ತಾನು ಬ್ರಹ್ಮಚಾರಿ ಎಂದೇ ಹೇಳಿಕೊಂಡಿದ್ದಾನೆ.

ಎಂಥ ಬ್ರಹ್ಮಚಾರಿಯೇ ಆತನಿಗೇ ಗೊತ್ತು. ಆದರೆ ನಟಿಯರು ಈತನ ಜೊತೆ ನಟಿಸಲು ಹಿಂದೇಟು ಹಾಕಲು ಕಾರಣವೆಂದರೆ- ಕೆಟ್ಟ ಕಾಲ್ಗುಣ. ಸಲ್ಮಾನ್ ಜೊತೆ ನಟಿಸಿದ ನಟಿಯರೆಲ್ಲಾ ಒಂದಲ್ಲ ಒಂದು ಕಾರಣದಿಂದ ಬರ್ಬಾದ್ ಆಗಿದ್ದಾರೆ; ಅಥವಾ ಉದ್ಧಾರ ಆಗಿಲ್ಲ. ಹಾಗೆಂದು ಹಲವಾರು ಹೊಸ ಹುಡುಗಿಯರನ್ನು ಈತ ಪರಿಚಯಿಸಿದ್ದಾನೆ. ಆದರೆ ಅವರ್ಯಾರೂ ಒಂದು ಎವರೇಜ್‌ಗಿಂತ ಮೇಲೆ ಹೋಗಿಲ್ಲ. ಬೇಕಿದ್ದರೆ ಉದಾಹರಣೆ ಕೊಡುತ್ತೀವಿ, ನೀವೇ ನೋಡಿಕೊಳ್ಳಿ.

ಭಾಗ್ಯಶ್ರೀ

1989ರಲ್ಲಿ ಸಲ್ಮಾನ್ ಖಾನ್ನ ಮೊದಲ ಫಿಲಂ ಮೈನೇ ಪ್ಯಾರ್ ಕಿಯಾ ಬಂತು. ಅದರಲ್ಲಿ ಭಾಗ್ಯಶ್ರೀ ಹೀರೋಯಿನ್ ಆಗಿ ನಟಿಸಿದ್ದಳು. ಅದೊಂದೇ ಫಿಲಂ ಆಕೆ ನಟಿಸಿರೋದು ಹಿಟ್ ಆಗಿದ್ದು. ಬಳಿಕ ಆಕೆ ನಟಿಸಿದ್ದೆಲ್ಲಾ ಒಂದರ ಹಿಂದೆ ಒಂದರಂತೆ ತೋಪಾದವು. ಸಲ್ಮಾನೇನೋ ಬೆಳೆದ. ಆದರೆ ಭಾಗ್ಯಶ್ರೀ ಟಿವಿ ಶೋಗಳನ್ನು ಮಾಡುತ್ತಾ ಕಾಲ ಕಳೆದಳು.

ಸನ್ನಿ ಲಿಯೋನ್ ಗೌನ್‌ ಹಿಂದೆ ಬಚ್ಚಿಟ್ಟ ಬಾಲಿವುಡ್ ನಟ: ರೀಸನ್ ಏನು..? ...

ನಗ್ಮಾ

ಸಲ್ಮಾನ್‌ನ ಎರಡನೇ ಫಿಲಂ ಭಾಗಿ. ಇದರಲ್ಲಿ ಆತನಿಗೆ ಹೀರೋಯಿನ್ ಆಗಿದ್ದವಳು ನಗ್ಮಾ. ಇದರ ನಂತರ ಯಾವುದೇ ಹಿಂದಿ ಫಿಲಂನಲ್ಲಿ ನಗ್ಮಾಗೆ ಸರಿಯಾದ ಅವಕಾಶ ಸಿಗಲಿಲ್ಲ. ದಕ್ಷಿಣ ಭಾರತದ ಕೆಲವು ಫಿಲಂಗಳಲ್ಲಿ ನಟಿಸಿದಳು ಅಷ್ಟೇ.

ಅಯೇಷಾ ಜುಲ್ಕಾ

1991ರಲ್ಲಿ ಸಲ್ಮಾನ್‌ನ ಕುರ್ಬಾನ್ ಫಿಲಂನಲ್ಲಿ ನಟಿಸಿದವಳು ಅಯೇಷಾ ಜುಲ್ಕಾ. ನಂತರ ಈಕೆ ಅಮೀರ್ ಖಾನ್ ಜೊತೆ ಒಂದೆರಡು ಫಿಲಂಗಳಲ್ಲಿ ನಟಿಸಿದಳು. ದೊಡ್ಡ ಹೆಸರು ಮಾಡಲೇ ಇಲ್ಲ.

ರೇವತಿ

1991ರಲ್ಲಿ ಲವ್ ಎಂಬ ಫಿಲಂ ಬಂತು. ಇದರಲ್ಲಿ ಸಲ್ಮಾನ್ ಜೊತೆ ನಟಿಸಿದವಳು ರೇವತಿ. ಆಗಲೇ ಮಲೆಯಾಳಂನಲ್ಲಿ ಹೆಸರು ಮಾಡಿದ ನಟಿಯಾಗಿದ್ದ ರೇವತಿ, ಮುಂದೆಯೇನೂ ಹಿಂದಿಯಲ್ಲಿ ಹೆಸರು ಮಾಡಲಿಲ್ಲ. ಮರಳಿ ಮಲೆಯಾಳಂಗೇ ಬಂದು ಇಲ್ಲೇ ಉಳಿದಳು.

ಕರೀನಾ ಕಪೂರ್ ಸೆಲ್ಫೀಗೆ ಆಂಟಿ, ಅಜ್ಜಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು! ...

ಭೂಮಿಕಾ ಚಾವ್ಲಾ

2003ರಲ್ಲಿ ಭೂಮಿಕಾ ಚಾವ್ಲಾ, ಸಲ್ಮಾನ್ ಖಾನ್ ಜೊತೆಗೆ ತೇರೆ ನಾಮ್ ಫಿಲಂನಲ್ಲಿ ನಟಿಸಿದಳು. ನಂತರ ಒಂದೆರಡು ಫಿಲಂಗಳಲ್ಲಿ ನಟಿಸಿ ತೆರೆಯ ಮರೆಗೆ ಸರಿದುಹೋದಳು.

ಚಾಂದನಿ

1991ರಲ್ಲಿ ಸನಂ ಬೇವಫಾ ಫಿಲಂನಲ್ಲಿ ಸಲ್ಮಾನ್‌ ಜೊತೆಗೆ ಹೀರೋಯಿನ್ ಆಗಿ ನಟಿಸಿದವಳು ಚಾಂದನಿ. ನಂತರ ಒಂದೆರಡು ಫಿಲಂಗಳಲ್ಲಿ ನಟಿಸಿದಳಾದರೂ, ಫಿಲಂ ಅನ್ನು ಫುಲ್‌ಟೈಮ್ ಕೆರಿಯರ್ ಆಗಿ ತೆಗೆದುಕೊಳ್ಳುವುದು ಈಕೆಗೆ ಸಾಧ್ಯವಾಗಲೇ ಇಲ್ಲ.

ಸ್ನೇಹಾ ಉಳ್ಳಾಲ್

2005ರಲ್ಲಿ ಲಕ್ಕಿ ಎಂಬ ಫಿಲಂನಲ್ಲಿ ಸ್ನೇಹಾ ಉಳ್ಳಾಲ್ ಎಂಬಾಕೆಯನ್ನು ಪರಿಚಯಿಸಲಾಯಿತು. ಈಕೆ ಒಂದು ಕೋನದಿಂದ ಐಶ್ವರ್ಯಾ ರೈಯಂತೆಯೇ ಕಾಣುತ್ತಿದ್ದುದರಿಂದ ಹೆಚ್ಚು ಪ್ರಚಾರವೂ ಸಿಕ್ಕಿತು. ಆದರೆ ಆಕೆ ನಟಿಸಿದ ಎರಡನೇ ಫಿಲಂ ಯಾವುದು ಅಂತ ಯಾರಿಗೂ ತಿಳಿಯಲೇ ಇಲ್ಲ.

69ರ ನಟಿಯ ಹಾಟ್ ಫೋಟೋ ಶೂಟ್ : ಹೀಗಿತ್ತು ನೆಟ್ಟಿಗರ ರಿಯಾಕ್ಷನ್ ...

ಸಾಯಿ ಮಾಂಜ್ರೇಕರ್‌

ದಬಾಂಗ್-3ಯಲ್ಲಿ ಸಲ್ಮಾನ್‌ ಖಾನ್‌ನ ಹೀರೋಯಿನ್ ಆಗಿ ಕಾಣಿಸಿಕೊಂಡಾಕೆ ಸಾಯಿ ಮಾಂಜ್ರೇಕರ್. ಆಮೇಲೇನಾದಳು ಎಂಬ ವಿವರವೇ ಇಲ್ಲ.

ಡೈಸಿ ಶಾ

ಈಕೆ ಮೊದಲು ಭದ್ರ ಎಂಬ ಕನ್ನಡ ಫಿಲಂನಲ್ಲಿ ನಟಿಸಿದ್ದಳು. ನಂತರ ಸಲ್ಮಾನ್‌ನ ಜೈ ಹೋ ಫಿಲಂನಲ್ಲಿ ನಟಿಸಿದಳು. ಅಷ್ಟೇ, ಆಮೇಲೇನಾದಳು ಎಂಬ ಅಡ್ರೆಸ್ಸೇ ಇಲ್ಲ.

ಜರೀನ್ ಖಾನ್

2010ರಲ್ಲಿ ವೀರ್ ಎಂಬ ಫಿಲಂ ಬಂತು. ಅದರಲ್ಲಿ ಜರೀನ್ ಖಾನ್ ಎಂಬ ಹೊಸ ಹುಡುಗಿ ಸಲ್ಮಾನ್‌ಗೆ ನಾಯಕಿಯಾಗಿ ನಟಿಸಿದ್ದಳು. ಈಕೆಯೂ ನೋಡುವುದಕ್ಕೆ ಒಂದು ಕೋನದಿಂದ ಕತ್ರಿನಾ ಕೈಫ್ ಥರಾ ಕಾಣುತ್ತಿದ್ದುದು ವಿಶೇಷ. ಆದರೆ ಈಕೆಯೂ ಮತ್ಯಾವುದೇ ಒಳ್ಳೆಯ ಫಿಲಂ ಕೊಟ್ಟದ್ದು ಯಾರಿಗೂ ನೆನಪಿಲ್ಲ.