ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆಯ ಬಳಿಕ ಕಂಗನಾ ಬಹಳ ಸುದ್ದಿಯಲ್ಲಿದ್ದಾಳೆ. ಸುಶಾಂತ್‌ನದು ಆತ್ಮಹತ್ಯೆಯಲ್ಲ, ಕೊಲೆ ಅಂತ ಬಿಂಬಿಸೋಕೆ ಈಕೆ ಬಹಳ ಪ್ರಯತ್ನ ಪಟ್ಟಳು. ಕೊಲೆ ಮಾಡಿದ್ಯಾರು ಅಂತ ಕೇಳಿದರೆ ಆತನ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಮುಂತಾದವರ ಕಡೆ ಕೈ ತೋರಿಸಿದಳು. ಆದರೆ ಇದು ಪ್ರೂವ್ ಆಗಲಿಲ್ಲ. ದಿಲ್ಲಿಯ ಏಮ್ಸ್, ಸುಶಾಂತ್‌ನದು ಕೊಲೆಯಲ್ಲ ಆತ್ಮಹತ್ಯೆ ಅಂತ ಸ್ಪಷ್ಟವಾಗಿ ಹೇಳಿತು. ಇದಕ್ಕೂ ಮೊದಲೇ ಕಂಗನಾ ದೊಡ್ಡ ಸ್ಟಾರ್‌ಗಳನ್ನು ತಡವಿಕೊಂಡಳು. ಸಲ್ಮಾನ್‌ ಖಾನ್‌, ಕರಣ್‌ ಜೋಹರ್‌ ಮುಂತಾದವರ ನೆಪೊಟಿಸಂ ಬಗ್ಗೆ ಮಾತಾಡಿದಳು. ಆದರೆ ಅವರ ಕೂದಲೂ ಕೊಂಕಲಿಲ್ಲ. ಆದರೆ ಎಲ್ಲರ ಬಗ್ಗೆಯೂ ಒಂದಲ್ಲ ಒಂದು ಬರಿ ಈಕೆ ಕೊಂಕು ಮಾತಾಡಿದ್ದಾಳೆ. 

ಉದಾಹರಣೆಗೆ ಇತ್ತೀಚೆಗೆ ಊರ್ಮಿಳಾ ಮಾತೋಂಡ್ಕರ್ ಬಗ್ಗೆ ಈಕೆ ಹೇಳಿರುವ ಮಾತು. ಊರ್ಮಿಳಾ ಸಾಫ್ಟ್ ಪೋರ್ನ್ ಸ್ಟಾರ್ ಎಂಬುದು ಈಕೆಯ ಮಾತು. ನಿಜಕ್ಕೂ ಈ ಮಾತಿನಲ್ಲಿ ಅರ್ಥ ಇದೆಯಾ? ಹಾಗೆ ನೋಡಿದರೆ ಕಂಗನಾ ಕೂಡ ತನ್ನ ಫಿಲಂಗಳಲ್ಲಿ ಸಾಕಷ್ಟು ಮೈ ತೋರಿಸಿಲ್ಲವಾ? ಕಿಸ್ಸಿಂಗ್ ಮುಂತಾದ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲವಾ? ನಿಜಕ್ಕೂ ಕಂಗನಾಗೆ ಏನಾಗಿದೆ? ಯಾಕೆ ಹೀಗೆ ಮಾತಾಡ್ತಿದ್ದಾಳೆ ಮತ್ತು ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತಿದ್ದಾಳೆ. ಕಂಗನಾ ಯಾವುದಾದರೂ ಮಾನಸಿಕ ಸಮಸ್ಯೆಯಿಂದ ನರಳುತ್ತಿರಬಹುದು ಎಂಬುದು ಕೆಲವರ ಅಂದಾಜು. ಆಕೆ ತನ್ನ ಇಗೋವನ್ನು ಬಹಳ ಬೂಸ್ಟ್ ಮಾಡಿಕೊಳ್ಳುತ್ತಾಳೆ. ತನ್ನ ಮುಂದೆ ತನ್ನಷ್ಟು ಸಾಚಾ ಇನ್ಯಾರೂ ಇಲ್ಲ ಎಂದು ಭಾವಿಸುತ್ತಾಳೆ. ಎಲ್ಲರಲ್ಲಿಯೂ ತಪ್ಪು ಕಂಡುಹಿಡಿಯುತ್ತಾಳೆ. ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಖಳನಾಯಕರಂತೆ ಆಕೆಗೆ ಕಾಣುತ್ತಾರೆ.

ಮೊದಲು ಈಕೆ ಹೃತಿಕ್‌ ರೋಶನ್‌ನನ್ನು ತಡವಿಕೊಂಡಳು. ಹೃತಿಕ್‌ ಮತ್ತು ಸೂಸನ್‌ ಬೇರೆ ಬೇರೆಯಾಗಿದ್ದಾಗ, ಆತನಿಗೆ ಆಪ್ತಳಾಗಲು ಯತ್ನಿಸಿದಳು ಕಂಗನಾ. ಆತನನ್ನು ಸಂಬಂಧದಲ್ಲಿ ಹಿಂಡಿ ಹಿಪ್ಪೆ ಮಾಡಿದಳು. ಇವಳ ಸಹವಾಸ ಸಾಕೋ ಸಾಕು ಅನಿಸುವಂತಾಯಿತು ಆತನಿಗೆ, ಕಡೆಗೆ ಈಕೆಯನ್ನು ಸೈಲೆಂಟಾಗಿ ಕೈಬಿಟ್ಟ. ಅದನ್ನೇ ದೊಡ್ಡ ಇಶ್ಯೂ ಮಾಡಿದಳು ಈಕೆ. ಹೃತಿಕ್ ತನಗೆ ವಂಚನೆ ಮಾಡಿದ್ದಾನೆ ಎಂದೆಲ್ಲ ದೂರಿದಳು, ಕಿರುಚಾಡಿದಳು. ಪ್ಯಾರಿಸ್‌ನ ಐಫೆಲ್ ಟವರ್‌ ಮುಂದೆ ಹೃತಿಕ್ ತನಗೆ ಪ್ರಪೋಸ್ ಮಾಡಿದ್ದಾನೆ ಎಂದೆಲ್ಲ ಹೇಳಿದಳು. ಆದರೆ ಆಕೆ ಹೇಳಿದ ಆ ಸಮಯದಲ್ಲಿ ಹೃತಿಕ್ ಎಲ್ಲಿಗೂ ಹೋಗಿರಲಿಲ್ಲ, ಮುಂಬಯಿಯಲ್ಲೇ ಇದ್ದ. ಕಂಗನಾ ಹಸಿ ಸುಳ್ಳು ಹೇಳಿದ್ದಳು. ಬಾಲಿವುಡ್‌ನ ದೊಡ್ಡ ದೊಡ್ಡವರೆಲ್ಲ ಕಂಗನಾನ ಸುಳ್ಳು ಬುರುಕತನವನ್ನೂ ಬಯಲು ಮಾಡಿದರು. ಸ್ವತಃ ಹೃತಿಕ್‌ನ ಮಾಜಿ ಪತ್ನಿ ಸೂಸನ್‌ ಕೂಡ, ಹೃತಿಕ್ ಅಂಥವನಲ್ಲ ಎಂದಳು.

ಡಾಲಿ ಧನಂಜಯ್ ಗರ್ಲ್ ಫ್ರೆಂಡ್ ಕತೆ ಗೊತ್ತಾ! ...

ನಂತರ ಈಕೆ ಕರಣ್‌ ಜೋಹರ್‌ನ ಕಾಫಿ ವಿತ್‌ ಕರಣ್ ಶೋದಲ್ಲಿ ಬಂದು ಕೂತು, ತನಗೆ ಆಗದವರನ್ನು ಒಬ್ಬೊಬ್ಬರನ್ನಾಗಿ ಉಲ್ಲೇಖಿಸಿ ಬಾಯಿಗೆ ಬಂದಂತೆ ಬೈದಳು, ಕರಣ್ ನೋಡುವಷ್ಟು ನೋಡಿದ. ಕಡೆಗೆ, ಇನ್ನಿವಳ ಬಾಯಿ ಬಂದ್ ಆಗುವುದಿಲ್ಲ ಎಂದು ಗೊತ್ತಾದ ಬಳಿಕ, ಹೋಗ್ಗತ್ಲಾಗೆ ಎಂದು ಕಳಿಸಿದ, ಇನ್ನೆಂದೂ ಈಕೆಯನ್ನು ತನ್ನ ಶೋಗೆ ಕರೆಯುವುದಿಲ್ಲ ಎಂದು ನಿರ್ಧಾರ ಮಾಡಿದ, ಕಂಗನಾ ಕರಣ್‌ನನ್ನೂ ತಡವಿಕೊಂಡಳು. ಆತನೂ ನೆಪಟಿಸಂ ಮಾಡ್ತಾನೆ ಎಂದು ದೂರಿದಳು.

ಸೌದೆ ಒಲೆ ಉರಿಸಿ ಜೋಳದ ರೊಟ್ಟಿ ಮಾಡ್ತಾರೆ ಕಂಗನಾ ಅಮ್ಮ..! ...

ನಂತರ ಬಾಲಿವುಡ್‌ ಮೂರೂ ಜನ ಪ್ರಭಾವಿ ಖಾನ್‌ಗಳನ್ನು ಬೈದಳು. ಅಮೀರ್ ಖಾನ್‌, ಸಲ್ಮಾನ್ ಖಾನ್‌, ಶಾರುಕ್ ಖಾನ್‌ರನ್ನು ನೇರವಾಗಿಯೇ ಹೆಸರಿಸಿ, ಅವರ ಜೊತೆಗೆ ನಟಿಸುವುದರಿಂದ ತನಗೇನೂ ಹೆಚ್ಚಿನ ಹೆಸರು ಬರೋಲ್ಲ, ಬರಬೇಕಾಗಿಯೂ ಇಲ್ಲ ಎಂದಳು. ತಾನೀಗ ಸಾಕಷ್ಟು ಎತ್ತರ ತಲುಪಿದ್ದೇನೆ. ಖಾನ್‌ಗಳ ಜೊತೆಗೆ ನಟಿಸಿ ತನಗೇನೂ ಆಗಬೇಕಿಲ್ಲ ಎಂದಳು, ಅವಳು ಇಷ್ಟು ಹೇಳಿದ ಬಳಿಕ ಯಾರು ತಾನೆ ಆಕೆಯನ್ನು ಹಾಕಿಕೊಂಡು ಸಿನಿಮಾ ಮಾಡುತ್ತಾರೆ? ಹೀಗಾಗಿ ಆಕೆಗೆ ಖಾನ್‌ಗಳ ಸಿನಿಮಾ ಕೂಡ ಸಿಗದ ಹಾಗಾಯಿತು. ಇವಳ ಈ ಮಾತಿಗೆ ನಟ ಇರ್ಫಾನ್ ಖಾನ್ ಒಂದ್ಸಲ ಸಕತ್ ಉತ್ತರ ಕೊಟ್ಟಿದ್ದ- ಕಂಗನಾ ಈಗ ಬಹುಶಃ ನನ್ನಂಥವರಿಗೆಲ್ಲ ನಾಟ್ ರೀಚಬಲ್ ಆಗಿದ್ದಾಳೆ. ಆಕೆ ಹೀರೋ ಆಗಿ, ನನ್ನನ್ನು ಹೀರೋಯಿನ್ ಆಗಿ ಹಾಕಿಕೊಂಡು ಯಾವುದಾದ್ರೂ ಸಿನಿಮಾ ಮಾಡೋದಾದರೆ ನಾನು ಅದನ್ನು ಪ್ರೊಡ್ಯೂಸ್ ಮಾಡೋಕೆ ಸಿದ್ದ ಎಂದು ವ್ಯಂಗ್ಯ ಮಾಡಿದ.

ಇಂಥ ಕಂಗನಾ ನಾಳೆ ತನ್ನನ್ನೂ ಆಡಿಕೊಳ್ಳುವುದಿಲ್ಲ ಎಂದು ಏನು ಗ್ಯಾರಂಟಿ? ಹೀಗಾಗಿಯೇ ಎಲ್ಲರೂ ಆಕೆಯನ್ನು ದೂರ ಇಡುತ್ತಿದ್ದಾರೆ.

ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ