ಸ್ವಾತಂತ್ರ್ಯ ಸೇನಾನಿಯನ್ನು ನೆನೆದ ಕಂಗನಾ ರಣಾವತ್/ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್  113 ನೇ ಜನ್ಮ ದಿನಾಚರಣೆ/ ಗೀತೆಯ ಸಾಲುಗಳನ್ನು ಶೇರ್ ಮಾಡಿಕೊಂಡ ನಟಿ/ ಲತಾ ಮಂಗೇಶ್ಕರ್  ಅವರಿಗೂ ಶುಭಾಶಯ

ಮುಂಬೈ(ಸೆ. 28) ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ 113 ನೇ ಜನ್ಮ ದಿನಾಚರಣೆಯ ಸಂದರ್ಭ ನಟಿ ಕಂಗನಾ ರಣಾವತ್ ಗೌರವ ಸಲ್ಲಿಕೆ ಮಾಡಿದ್ದಾರೆ.

'ಮೇರಾ ರಂಗ್ ದೇ ಬಸಂತಿ ಚೋಲಾ ಓ ಮೇರಾ ರಂಗ್ ದೇ ಬಸಂತಿ' ಎಂಬ ಗೀತೆಯ ಸಾಲುಗಳನ್ನು ಹಂಚಿಕೊಂಡು ನಮನ ಸಲ್ಲಿಸಿದ್ದಾರೆ. ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರಿಗೂ ಜನ್ಮದಿನದ ಶುಭಾಶಯ ಕೋರಿದ್ದಾರೆ. 

ರೈತರ ಬಗ್ಗೆ ಹೇಳಿಕೆ ನೀಡಿದ ಕಂಗನಾ ವಿರುದ್ಧ ಕ್ರಿಮಿನಲ್ ಕೇಸ್

ಲತಾ ಅವರಿಗೆ ಜನ್ಮದಿನದ ಶುಭಾಶಯ. ಕೆಲವರು ತಮ್ಮ ಕೆಲಸದಿಂದ ಮಾತ್ರ ಜನಮನ್ನಣೆ ಗಳಿಸುವುದಿಲ್ಲ. ಆ ಕೆಲಸದ ಮೇಲಿನ ಶ್ರದ್ಧೆ ಮತ್ತು ಪರಿಶ್ರಮ ಅವರನ್ನು ಅಲ್ಲಿಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಕಂಗನಾ ಸುಶಾಂತ್ ಸಿಂಗ್ ರಜಪೂತ್ ಮತ್ತು ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡಿದ್ದರು.

Scroll to load tweet…
Scroll to load tweet…