ನಟಿ ಜಾನ್ವಿ ಕಪೂರ್ ಅವರ "ಗುಡ್ ಲಕ್ ಜೆರ್ರಿ" ಚಿತ್ರದ ಶೂಟಿಂಗ್ ಪಂಜಾಬ್‌ನ ಬಾಸ್ಸಿ ಪಥಾನಾದಲ್ಲಿ ತಡೆಯಲಾಗಿದೆ. ರೈತರ ಗುಂಪೊಂದು ಅವರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸಿದ ನಂತರ ಶೂಟಿಂಗ್ ಸ್ಥಗಿತವಾಗಿದೆ.

ಚಿತ್ರ ನಿರ್ಮಾಪಕ ಆನಂದ್ ಎಲ್ ರಾಯ್ ಅವರ ಕಲರ್ ಯೆಲ್ಲೊ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು ಸಿದ್ಧಾರ್ಥ್ ಸೇನ್‌ಗುಪ್ತಾ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪಂಜಾಬ್‌ನಲ್ಲಿ ನಡೆಸುತ್ತಿತ್ತು.

ರಾಣಾ ದಗ್ಗುಬಾಟಿ ಕೈ ಹಿಡಿದು ನಡೆದ ಸಾಯಿ ಪಲ್ಲವಿ; ಇದು 'ವಿರಾಟ ಪರ್ವಂ'!

"ಶಾಂತಿಯುತ" ಪ್ರತಿಭಟನೆಗಾಗಿ 20-30 ರೈತರು ಚಲನಚಿತ್ರ ಸೆಟ್‌ನ್ನು ತಲುಪಿದ ನಂತರ ಈ ಘಟನೆ ನಡೆದಿದೆ ಎಂದು ಬಸ್ಸಿ ಪಥಾನಾದ ಡಿಎಸ್ಪಿ ಸುಖ್ಮಿಂದರ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ರೈತರು ನಟರ ಬೆಂಬಲದ ಭರವಸೆಯನ್ನು ಕೇಳಿದ್ದರಯ. ಅವರು ಹಾಗೆ ಮಾಡಿದಾಗ, ಚಿತ್ರೀಕರಣ ಪುನರಾರಂಭವಾಯಿತು. ಇದನ್ನು ಪರಸ್ಪರ ಮಾತನಾಡಿ ಬಗೆಹರಿಸಲಾಯಿತು. ಈಗ ಚಿತ್ರೀಕರಣ ಸುಗಮವಾಗಿ ನಡೆಯುತ್ತಿದೆ ಎಂದು ಚೌಹಾಣ್ ತಿಳಿಸಿದ್ದಾರೆ.