ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ 'ಲವ್‌ ಸ್ಟೋರಿ' ಚಿತ್ರದ ಟೀಸರ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ, 'ವಿರಾಟ ಪರ್ವಂ' ಚಿತ್ರದ ಪೋಸ್ಟರ್ ಅನ್ನೂ ಸಹ ಬಿಡುಗಡೆ ಮಾಡಲಾಗಿದೆ. ಹೊಸ ವರ್ಷದಲ್ಲಿ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಗಳು ಸಿಗುತ್ತಿವೆ.....

ಅಲ್ಲು ಅರ್ಜುನ್‌ಗೆ ತಂಗಿಯಾಗಲು ಒಪ್ಪಿಕೊಂಡ್ರಾ ಸಾಯಿ ಪಲ್ಲವಿ? 

ಸಂಕ್ರಾಂತಿ ಹಬ್ಬಕ್ಕೆ ಒಂದು ದಿನ ಮುನ್ನವೇ ವಿರಾಟ ಪರ್ವಂ ಸಿನಿಮಾ ಫೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಸಾಯಿ ಪಲ್ಲವಿ ರಾಣಾ ಕೈ ಹಿಡಿದು ನಡೆಯುತ್ತಿರುವ ಪಲ್ಲವಿ ಪಕ್ಕಾ ಹಳ್ಳಿ ಹುಡುಗಿ ಲುಕ್‌ನಲ್ಲಿ ಮಿಂಚಿದ್ದಾರೆ. ಅತಿ ಹೆಚ್ಚು ಕುತೂಹಲ ಹುಟ್ಟಿಸುತ್ತಿರುವ ರಾಣಾ ನಕ್ಸಲೈಟ್‌ ವಸ್ತ್ರ. ರಾಣಾ ಒಂದುವೇಳೆ ನಕ್ಸಲ್‌ ಆಗಿದ್ದರೂ ಇದೇ ಮೊದಲ ಬಾರಿ ಇಂತಹ ಪಾತ್ರ ಒಪ್ಪಿಕೊಂಡಿರುವುದು ಎನ್ನಬಹುದು.

ಇನ್ನು ಚಿತ್ರದಲ್ಲಿ ಬಾಲಿವುಡ್‌ ನಟಿ ಟಬು, ಪ್ರಿಯಾಮಣಿ, ಈಶ್ವರಿ, ನಂದಿತಾ ದಾಸ್ ಸೇರಿದಂತೆ ಅನೇಕ ಸ್ಟಾರ್‌ಗಳು ಅಭಿನಯಿಸುತ್ತಿದ್ದಾರೆ. 1980-90ರ ಸಮಯದಲ್ಲಿ ತೆಲಂಗಾಣದಲ್ಲಿದ್ದ ಸಾಮಾಜಿಕ ಪರಿಸ್ಥಿತಿ ಹಾಗೂ ಆಗ ನಡೆದ ಘಟನೆಗಳನ್ನು ಆಧರಿಸಿ ಚಿತ್ರಕಥೆ ಬರೆಯಲಾಗಿದೆ.  ಹಾರ್ಥಿ ಸಾಥಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ರಾಣಾ ವಿರಾಟ ಪರ್ವಂ ನಂತರ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.