ಅಲ್ಲು ಅರ್ಜುನ್‌ ನಟನೆಯ ʼಆರ್ಯʼ ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆಗಿದೆ. ಈ ಸಿನಿಮಾ ಹೀರೋಯಿನ್‌ ಅನು ಮೆಹ್ತಾ ಅವರಂತೂ ಭೂಗತರಾಗಿದ್ದಾರೆ. ಹಾಗಾದರೆ ಅವರು ಎಲ್ಲಿದ್ದಾರೆ?

ಅಲ್ಲು ಅರ್ಜುನ್‌ ಸಿನಿಮಾರಂಗದಲ್ಲಿ ದೊಡ್ಡ ತಿರುವು ಕೊಟ್ಟಂತಹ ʼಆರ್ಯʼ ಸಿನಿಮಾ ಇಂದು ರೀ ರಿಲೀಸ್‌ ಆದರೂ ಕೂಡ ಒಳ್ಳೆಯ ಕಲೆಕ್ಷನ್‌ ಮಾಡುವುದು. ಇಂದು ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್‌ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಈ ಸಿನಿಮಾದ ನಾಯಕಿ ಅನು ಮೆಹ್ತಾ ಮಾತ್ರ ನಾಪತ್ತೆ ಆಗಿದ್ದಾರೆ. 

ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟನೆ!
ಅನು ಮೆಹ್ತಾಗೂ ಈ ಸಿನಿಮಾ ಮೊದಲ ಚಿತ್ರವಾಗಿತ್ತು. ಅನು ಪಕ್ಕಾ ಆಂಧ್ರದವರು. ದೆಹಲಿಯಲ್ಲಿ ಓದಿದ್ದ ಅನು ಮಾಡೆಲ್‌ ಕೂಡ ಹೌದು. ತೆಳ್ಳಗೆ, ಬೆಳ್ಳಗೆ, ಮನೆ ಮಗಳು ಎನ್ನುವಂತೆ ಕಾಣುತ್ತಿದ್ದ ಅನು ಅವರನ್ನು ಕನ್ನಡಿಗರು ಕೂಡ ನಮ್ಮ ರಾಜ್ಯದವಳು ಎನ್ನುವಷ್ಟರ ಮಟ್ಟಿಗೆ ಭಾವಿಸಿದ್ದರು. ಮೊದಲ ಸಿನಿಮಾ ಯಶಸ್ಸು ತಂದುಕೊಟ್ಟ ಬಳಿಕ ಅವರು ʼನುವ್ವಂಟೆ ನಾಕಿಷ್ಟಂʼ ಚಿತ್ರದಲ್ಲಿ ಅವರು ನಟಿಸಿದ್ದರು. 

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಪುಷ್ಪ-2 ನಟ ಅಲ್ಲು ಅರ್ಜುನ್

ಸೋಶಿಯಲ್‌ ಮೀಡಿಯಾದಲ್ಲಿಯೂ ಇಲ್ಲ! 
ʼಅಜಯ್ʼ‌ ಸಿನಿಮಾದಲ್ಲಿಯೂ ಅನು ನಟಿಸಿದ್ದರು. ಈ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಹೀರೋ ಆಗಿದ್ದರು. ಪ್ರಕಾಶ್‌ ರಾಜ್‌ ಈ ಚಿತ್ರದಲ್ಲಿ ವಿಲನ್‌ ಆಗಿದ್ದರು. ಕಬಡ್ಡಿ ಆಟದ ಕುರಿತು ಕೂಡ ಈ ಸಿನಿಮಾ ಇತ್ತು. ʼಮಹರಾಜಶ್ರೀʼ, ʼವೇದುಕʼ, ʼಹೊಂಗನಸುʼ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನೆನಪಿರಲಿ ಪ್ರೇಮ್‌ ನಟನೆಯ ʼಹೊಂಗನಸುʼ ಸಿನಿಮಾ ಆದ್ಮೇಲೆ ಅನು ಪತ್ತೆಯೇ ಇಲ್ಲ ಎನ್ನಬಹುದು. ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಅನು ಅವರ ಅಕೌಂಟ್‌ ಕಾಣುತ್ತಿಲ್ಲ. 

ಚೆನ್ನೈನಲ್ಲಿ ವಿವಾದ! 
ಒಮ್ಮೆ ಚೆನ್ನೈನ ರೆಸಾರ್ಟ್‌ನಲ್ಲಿ ಅನು ಅವರು ಕುಡಿದು ಜಗಳ ಮಾಡಿದ್ದರಂತೆ. ಆಮೇಲೆ‌ ಆ ರೆಸಾರ್ಟ್ ಮ್ಯಾನೇಜರ್‌ ಅನು ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದರು. ಇದಾದ ನಂತರ ಅನು ಪತ್ತೆಯೇ ಇಲ್ಲ. 

ರಾಜಮೌಳಿಗೆ ಪೈಪೋಟಿ ನೀಡುವ ಏಕೈಕ ನಿರ್ದೇಶಕ ಇವರೇ ಅಂತೆ: ಕನ್ನಡಿಗ ಡೈರೆಕ್ಟರ್‌ ಟಫ್‌ ಕಾಂಪಿಟೇಷನ್‌ ಕೊಡ್ತಿದ್ದಾರಾ?

ಮದುವೆ ಆಯ್ತಾ?
ಅನು ಮೆಹ್ತಾ ಅವರಿಗೆ ಮದುವೆ ಆಗಿದ್ಯಾ? ಅವರೀಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಕೂಡ ಮಾಹಿತಿ ಇಲ್ಲ. ಒಟ್ಟಿನಲ್ಲಿ ಹಿರಿತೆರೆ, ಕಿರುತೆರೆ ಎಲ್ಲಿಯೂ ಕಾಣಿಸಿಕೊಳ್ಳದೆ ಅವರು ನಿಗೂಢರಾಗಿ ಬದುಕುತ್ತಿದ್ದಾರೆ. 

ಅಲ್ಲು ಅರ್ಜುನ್‌ಗೂ ಗೊತ್ತಿಲ್ಲ
2024 ನವೆಂಬರ್‌ನಲ್ಲಿ ʼಆರ್ಯʼ ಸಿನಿಮಾ ರಿಲೀಸ್‌ ಆಗಿ ಇಪ್ಪತ್ತು ವರ್ಷ ಆಗಿದ್ದಕ್ಕೆ ವಿಶೇಷ ಕೂಟ ಆಯೋಜಿಸಲಾಗಿತ್ತು. ಆಗ ಎಲ್ಲರೂ ಆಗಮಿಸಿದ್ದರೂ ಕೂಡ ಅನು ಪತ್ತೆ ಇರಲಿಲ್ಲ. ಅನು ಮೆಹ್ತಾ ಎಲ್ಲಿದ್ದಾರೆ ಎಂದು ನಮಗೆ ಕೂಡ ಗೊತ್ತಿಲ್ಲ ಎಂದು ಸ್ವತಃ ಅಲ್ಲು ಅರ್ಜುನ್‌ ಅವರೇ ಹೇಳಿದ್ದರು. ಕೆಲ ನಟ, ನಟಿಯರು ಚಿತ್ರರಂಗದಿಂದ ದೂರ ಇದ್ರೂ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೂಬಹುದು. ಆದರೆ ಅನು ಮಾತ್ರ ಪತ್ತೆ ಇಲ್ಲ.