ಲುಂಗಿ ಡ್ಯಾನ್ಸ್ ಹಾಡು ಅಂದು, ಇಂದು, ಮುಂದೆಯೂ ಜನರ ನೆಚ್ಚಿನ ಹಾಡಾಗಿ ಉಳಿಯೋದ್ರಲ್ಲಿ ಡೌಟೇ ಇಲ್ಲ. ಭಾರೀ ಹವಾ ಸೃಷ್ಟಿಸಿದ್ದ ವಿಶೇಷ ಥೀಮ್‌ನ ಸಾಂಗ್ ಮಾಡಿದ್ದು ಯೋಯೋ ಹನಿಸಿಂಗ್.

ಇದೀಗ ಹನಿಸಿಂಗ್ ಹಾಡಿನ ಹಿಂದಿನ ಕಥೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಾಡಿನ ಕುರಿತ ಮೀಟಿಂಗ್‌ಗಾಗಿ 2.45 ಗಂಟೆ ಎಮಿರೇಟ್ಸ್ ಫ್ಲೈಟನ್ನೇ ನಟ ತಡ ಮಾಡಿಸಿದ್ದರ ಬಗ್ಗೆಯೂ ಹನಿಸಿಂಗ್ ಹೇಳಿದ್ದಾರೆ.

ಕೊರೋನಾ ಗೆದ್ದು ಬಂದ ಕೆಲವೇ ದಿನಗಳಲ್ಲಿ ಮಾಲಿವುಡ್ ಹಿರಿಯ ನಟ ನಿಧನ

ಇದು 2013ರಲ್ಲಿ ನಡೆದ ಘಟನೆ. ಗೋವಾದಲ್ಲಿ ಶೋ ಕೊಡ್ತಿದ್ದ ಹನಿಸಿಂಗ್‌ಗೆ ಮುಂಬೈನಿಂದ ಶಾರೂಖ್ ಕರೆ ಬಂದಿತ್ತು. ಶಾರೂಖ್‌ನನ್ನು ಭೇಟಿಯಾಗಲು ಬಂದಾಗ ನನ್ನ ಕಾಲುಗಳು ನಡುಗುತ್ತಿದ್ದವು. ನಂತರ ಜೊತೆಯಾಗಿ ಕುಳಿತು 30 ನಿಮಿಷ ಮಾತನಾಡಿದೆವು ಎಂದಿದ್ದಾರೆ ಹನಿಸಿಂಗ್.

ನಂತರ ನಟ ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಆ ಸಿನಿಮಾ ಥೀಮ್‌ಗೆ ಸರಿಯಾಗುವ ಹಾಡು ಮಾಡಿಕೊಡಬಹುದುದಾ ಎಂದು ಕೇಳಿದ್ದರು. 15 ನಿಮಿಷದ ಮೀಟಿಂಗ್ 2.45 ನಿಮಿಷ ಮುಂದುವರಿದಿತ್ತು. ನಾವು ದುಬೈ ಫ್ಲೈಟ್ ಮಿಸ್ ಮಾಡಿಕೊಳ್ತಿದ್ದೆವು.

ಜನಾಭಿಪ್ರಾಯಕ್ಕೆ ಬಗ್ಗಿದ ಟ್ವಿಟರ್, ಕಂಗನಾ 'ತಾಂಡವ' ನೃತ್ಯ!

ಆದರೆ ನಟ ನಮಗಾಗಿ ಫ್ಲೈಟನ್ನೇ ತಡ ಮಾಡಿದ್ದರು, ನಟ ಫ್ಲೈಟ್ ತಡ ಮಾಡಿದ್ದರು, ಕ್ಯಾನ್ಸಲ್ ಮಾಡಲಿಲ್ಲ. ಇದು ಶಾರೂಖ್ ಪವರ್ ಎಂದಿದ್ದಾರೆ ಹನಿಸಿಂಗ್. ನಾನು ಶಾರೂಖ್ ಜೊತೆ ಕೆಲವು ಶೋ ಮಾಡಿದ್ದೇನೆ. ಅರಬ್ ದೇಶ, ನ್ಯೂಝಿಲೆಂಡ್, ಅಮೆರಿಕಾದಲ್ಲಿ ಶಾರೂಖ್‌ಗೆ ಭಾರೀ ಫ್ಯಾನ್ಸ್ ಇದ್ದಾರೆ ಎಂದಿದ್ದಾರೆ ಹನಿ ಸಿಂಗ್