ಹಿರಿಯ ನಟ ಉಣ್ಣಿಕೃಷ್ಣನ್ ನಂಬೂದಿರಿ(97) ಬುಧವಾರ ಮೃತಪಟ್ಟಿದ್ದಾರೆ. ಕೊರೋನಾದಿಂದಾಗಿ ಗುಣಮುಖರಾದ ಕೆಲವೇ ದಿನಗಳ ನಂತರ ನಟ ಪಯ್ಯನ್ನೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಾಲಿವುಡ್‌ನ ಸ್ಟಾರ್ ಅಜ್ಜ ಎಂದೇ ಫೇಮಸ್ ಆಗಿದ್ದ ಇವರನ್ನು ಫಿಲ್ಮ್ ಸ್ಟಾರ್ ಗ್ರಾಂಡ್‌ಫಾದರ್ ಎಂದೇ ಕೇರಳದ ಜನ ಕರೆಯುತ್ತಿದ್ದರು. ಕೇರಳದ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ನಟ ಒಂದುವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ನಟನ ಕೊರೋನಾ ಪರೀಕ್ಷೆ ವರದಿ ನೆಗೆಟಿವ್ ಬಂದಿತ್ತು, ನಂತರ ಡಿಸ್ಚಾರ್ಜ್‌ ಮಾಡಿ ಮನೆಗೆ ಕಳುಹಿಸಲಾಗಿತ್ತು.

ಈ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದವರ ಜೊತೆ ಡೇಟ್‌ ಮಾಡುತ್ತಿಲ್ಲಂತೆ ತಾಪ್ಸೀ!

ಕೆಲವು ವಾರದ ಹಿಂದೆ ನ್ಯುಮೋನಿಯಾಗೂ ಚಿಕಿತ್ಸೆ ನೀಡಲಾಗಿತ್ತು. ನಂತರ ಪಯ್ಯನ್ನೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾ ಚಿಕಿತ್ಸೆ ನಂತರ ಮತ್ತೊಮ್ಮೆ ಜ್ವರ ಬಂದು ನಟನನ್ನು ಚಿಕಿತ್ಸೆಗೆ ಒಳಪಡಿಸಲಾಯಿತು. ಆ ಸಂದರ್ಭ ಕೊರೋನ ಪರೀಕ್ಷೆ ಮಾಡಿದಾಗ ವರದಿ ಪಾಸಿಟಿವ್ ಬಂದಿದೆ. ಎರಡು ದಿನ ಐಸಿಯುವಿನಲ್ಲಿದ್ದರೂ ನಿಧಾನಕ್ಕೆ ನಟ ಗುಣಮುಖರಾಗುತ್ತಿದ್ದರು. ಆದರೆ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಕೊರೋನಾ ಬಂದಾಗಿನಿಂದ ನಟ ತಮ್ಮ ಹಿರಿಯರ ಮನೆಯಲ್ಲಿಯೇ ವಾಸವಿದ್ದರು. ಸಿಎಂ ಪಿಣರಾಯ್ ವಿಜಯನ್, ಆರೋಗ್ಯ ಸಚಿವೆಯೂ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ದಿಲೀಪ್ ಅಭಿನಯದ ಕಲ್ಯಾಣ ರಾಮನ್ ಸಿನಿಮಾ ಮೂಲಕ ಹಿಟ್ ಆಗಿದ್ದರು ಈ ನಟ.