ಮಡದಿ ಗೌರಿಯನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಶಾರುಖ್ ಖಾನ್‌ಗೆ, ಒಂದು ಸಲ ಮಾತ್ರ ಆಕೆಯ ಜೀವ ಹಾರಿಹೋಗಿ ಬಿಡುತ್ತೇನೋ ಅಂತ ಸಿಕ್ಕಾಪಟ್ಟೆ ಭಯ ಆಗಿತ್ತಂತೆ. ಅದು ಯಾವಾಗ?
ಮೊದಲ ಹೆರಿಗೆ, ಮೊದಲ ಮಗು ಅಂದರೆ ಒಂದು ಥರ ರೋಮಾಂಚನ, ಹಾಗೇ ಭಯ ಕೂಡ. ಗಂಡನಿಗೆ ರೋಮಾಂಚನ ಆದ್ರೆ, ಮಗು ಹೊತ್ತ ಪತ್ನಿಗೆ ನಲಿವಿನ ಜೊತೆ ನೋವನ್ನು ನುಂಗುವ ಕ್ಷಣಗಳೂ ಕೂಡ ಆಗಿರ್ತವೆ. ಇಬ್ಬರೂ ಜೊತೆಯಾಗಿ ತಾಯ್ತನ -ತಂದೆತನವನ್ನು ಪ್ರವೇಶಿಸ್ತಾ ಇರುತ್ತಾರೆ. ಮೊದಲ ಹೆರಿಗೆ ಕ್ಷಣದಲ್ಲಿ ಇಬ್ಬರೂ ಪರಸ್ಪರ ಕೈ ಕೈ ಹಿಡಿದುಕೊಂಡು ಮಗುವಿನ ನಿರೀಕ್ಷೆಯಲ್ಲಿರುವಾಗ, ಅಥವಾ ಮು ಬಂದ ಬಳಿಕ ಅದನ್ನು ನೋಡುತ್ತಾ ಸುಖದ ಕಣ್ಣೀರನ್ನು ಮಿಡಿಯುತ್ತಾ ಇರುವಾಗ- ಪೇರೆಂಟಿಂಗ್‌ನ ಮಧುರ ಭಾವನೆಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗೀಗ ಎಲ್ಲ ಅಪ್ಪಂದಿರೂ ತಮ್ಮ ಮಗು ಗಂಡಾಗಿರಲಿ ಹೆಣ್ಣಾಗಿರಲಿ ಅದರ ನ್ಯಾಪಿ ಬದಲಿಸುವುದರಿಂದ ಹಿಡಿದು ಸ್ನಾನ ಮಾಡಿಸುವವರೆಗೂ ಎಲ್ಲ ಕೆಲಸ ಮಾಡುತ್ತಾ ತಂದೆತನದ ಸುಖ ಅನುಭವಿಸುತ್ತಾರೆ. ಆದರೆ ಹೆರಿಗೆ ಕೋಣೆಯಲ್ಲಿ ಅವರ ಭಾವನೆ ಹೇಗಿರುತ್ತದೆ ಅಂತ ಹೆಚ್ಚಾಗಿ ದಾಖಲಾಗಿಯೇ ಇಲ್ಲ.

2997ರ ನವೆಂಬರ್ 13ರಂದು ಶಾರುಖ್ ಮತ್ತು ಗೌರಿಯರ ಮೊದಲ ಮಗ ಆರ್ಯನ್ ಹುಟ್ಟಿದ. ಅದೇನೂ ಸಹಜ ಹೆರಿಗೆ ಆಗಿರಲಿಲ್ಲ. ಅದು ಸಿಸೇರಿಯನ್ ಆಗಿತ್ತು. ಇಬ್ಬರೂ ಮೊದಲಿನಿಂದಲೂ ಸುಖ ದುಃಖದ ಕ್ಷಣಗಳಲ್ಲೆಲ್ಲಾ ಒಂದಾಗಿ ಇದ್ದವರು. ಸಿಸೇರಿಯನ್ ನಡೆಯುವ ಕೋಣೆಯಲ್ಲಿ ಗೌರಿಯನ್ನು ನೋಡಿದಾಗ ಶಾರುಖ್ ನಡುಗಿಬಿಟ್ಟನಂತೆ. ಟ್ಯೂಬ್‌ಗಳನ್ನು ಹಾಕಿಸಿಕೊಂಡು, ಚಳಿಗೆ ನಡುಗುತ್ತಾ ಮಲಗಿದ್ದ ಗೌರಿಯ ಕಲ್ಲಾಗಿಬಿಟ್ಟಿದ್ದಳಂತೆ. ತುಂಬಾ ಹೆರಿಗೆ ನೋವು ಬರುತ್ತಿತ್ತಂತೆ. ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿ, ಮುಂದೆಂದೂ ಇವಳನ್ನು ನೋಡಲು ಸಾಧ್ಯವೇ ಆಗದೇನೋ, ಶಾಶ್ವತವಾಗಿ ಈಕೆಯನ್ನು ಕಳೆದುಕೊಂಡು ಬಿಡುತ್ತೇನೇನೋ ಅಂತ ಶಾರುಖ್ ಭಯವಾಗಿ ತತ್ತರಿಸಿ ಹೋಗಿದ್ದನಂತೆ. ಈ ಭಯಕ್ಕೆ ಇನ್ನೊಂದು ಕಾರಣವೂ ಇತ್ತು. ಶಾರುಖ್‌ನ ತಂದೆ ತಾಯಿ ಇಬ್ಬರೂ ಆಸ್ಪತ್ರೆಯಲ್ಲೇ ತಮ್ಮ ಪ್ರಾಣ ಬಿಟ್ಟಿದ್ದರು. ಹೀಗಾಗಿ ಆಸ್ಪತ್ರೆ ಎಂದರೆ ಶಾರುಖ್‌ಗೆ ಮೊದಲಿನಿಂದಲೂ ಆತಂಕ ಮತ್ತು ಭಯ. ಆ ಹೊತ್ತನಲ್ಲಿ ಶಾರುಖ್‌ಗೆ ಮಗುವಿನ ಬಗ್ಗೆ ಏನೂ ಚಿಂತೆ ಇರಲಿಲ್ಲ. ಚಿಂತೆ ಇದ್ದುದೆಲ್ಲ ಗೌರಿಯ ಆರೋಗ್ಯದ ಬಗ್ಗೆಯೇ ಆಗಿತ್ತು.
ಬರ್ತ್‌ಡೇ ಬಾಯ್, ಶಾರುಖ್ ಮಗ ಅಬ್ರಾಮ್ ಬಗ್ಗೆ ಯಾಕೆ ಇಷ್ಟೆಲ್ಲಾ ರೂಮರ್? ...
ಸಿಸೇರಿಯನ್ ಆಗಿ, ಆರ್ಯನ್ ಹುಟ್ಟಿ ಎರಡೇ ವಾರಗಳಲ್ಲಿ ಶಾರುಖ್ ಮತ್ತು ಗೌರಿ ಟಿವಿಯಲ್ಲಿ ಸಿಮಿ ಗೆರೆವಾಲ್‌ಗೆ ಒಂದು ಸಂದರ್ಶನ ನೀಡಿದ್ದರು. ಅದರಲ್ಲಿ ಸಿಮಿ ಕೇಳಿದ ಪ್ರಶ್ನೆಗಳು ಹಾಗೂ ಶಾರುಖ್ ಮತ್ತು ಗೌರಿ ನೀಡಿದ ಉತ್ತರಗಳು ತಮಾಷೆಯಾಗಿವೆ. 'ನಿಂಗೂ ಹೆರಿಗೆ ನೋವು ಬಂತಾ?' ಅಂತ ಕೇಳಿದ್ದರು ಸಿಮಿ ಶಾರುಖ್‌ಗೆ. ಒಂದು ಹೆಣ್ಣಿಗೆ ಹೆರಿಗೆ ನೋವು ಹೇಗಿರುತ್ತೆ ಅಂತ ನಂಗೆ ಗೊತ್ತಿಲ್ಲ. ಆದ್ರೆ ಗೌರಿ ಹೇಗಿದ್ಳು ಅಂತ ಗೊತ್ತೇ ಆಗಲಿಲ್ಲ. ಅವಳು ಉಸಿರಾಡ್ತಾನೇ ಇರಲಿಲ್ಲ! ಅಂದಿದ್ದ ಶಾರುಖ್. 'ನಾನು ಉಸಿರಾಡ್ತಾ ಇರಲಿಲ್ಲ. ಆದ್ರೆ ನೋವಿನಿಂದ ಕಿರುಚ್ತಾ ಇದ್ದೆ' ಅಂತಾರೆ ಗೌರಿ ಖಾನ್. 'ಅವಳು ವಿಚಿತ್ರವಾಗಿ ಕಿರುಚ್ತಾ ಇದ್ಳು. ಸಿನಿಮಾಗಳಲ್ಲಿ ತೋರಿಸ್ತಾರಲ್ಲ, ಆ ಥರ ಇರಲಿಲ್ಲ!' ಅಂತಾರೆ ಶಾರುಖ್ ಖಾನ್! ನಿಜಕ್ಕೂ ನಂಗೆ ಸಹಜ ಹೆರಿಗೆಯಲ್ಲಿ ಆಗುವ ನೋವು ಆಗಿರಲಿಲ್ಲ. ಯಾಕೆಂದರೆ ಸಿಸೇರಿಯನ್ ಮಾಡಲಾಗಿತ್ತು. ಆದ್ರೆ ಅದನ್ನೇ ತಡೆಯಲು ಆಗಿರಲಿಲ್ಲ. ಶಾರುಖ್ ನನ್ನ ನೋಡಿ ಅಷ್ಟೊಂದು ಭಯಪಟ್ಟುಕೊಂಡಿದ್ದ ಅಂತ ನಂಗೆ ಗೊತ್ತೇ ಇರಲಿಲ್ಲ' ಅಂತಾಳೆ ಗೌರಿ.
ಬಾಯ್‌ಫ್ರೆಂಡ್ ಸೆಲೆಕ್ಟ್ ಮಾಡೋಕೆ ಮಗಳಿಗೆ ಟಿಪ್ಸ್ ಕೊಟ್ಟ ಶಾರೂಖ್..!
ಆರ್ಯನ್ ಹುಟ್ಟಿ, ಹೆರಿಗೆ ನೋವೂ ಮಾಯವಾಗಿ, ಮುಗುಳ್ನಗುತ್ತಾ ಇರಬೇಕಾದರೆ - ಇದೆಲ್ಲ ಒಂದು ಪವಾಡವೇ ಇರಬೇಕು ಅಂತ ಶಾರುಖ್‌ಗೆ ಅನಿಸಿತಂತೆ. 'ಹಾಯ್ ಹೌ ಆರ್ ಯು?' ಎಂದು ಗೌರಿಯೇ ಶಾರುಖ್‌ನನ್ನು ಮಾತನಾಡಿಸಬೇಕಾಯಿತಂತೆ!
