KGF ಸ್ಟಾರ್ ಯಶ್‌ಗೆ ಮಿ. ಶೋ ಆಫ್ ಎಂದಿದ್ದ ರಶ್ಮಿಕಾ; ಮತ್ತೆ ವೈರಲ್ ಆದ ಹಳೆ ಹೇಳಿಕೆ
ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಯಶ್ ಅವರಿಗೆ ಶೋ ಆಫ್ ಎಂದಿದ್ದರು. ಕಿರಿಕ್ ಪಾರ್ಟಿ ಚಿತ್ರದ ಬಿಡುಗಡೆಗೂ ಮುನ್ನ ನೀಡಿದ ಸಂದರ್ಶನ ಅದಾಗಿತ್ತು. ರ್ಯಾಪಿಕ್ ಫೈರ್ ಸುತ್ತಿನಲ್ಲಿ ರಶ್ಮಿಕಾಗೆ ನಿರೂಪಕರು ಕನ್ನಡದ ಯಾವ ನಟ ಮಿಸ್ಟರ್ ಶೋ ಆಫ್ ಅಂತ ನಿಮಗೆ ಅನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ರಶ್ಮಿಕಾ, ಯಶ್ ಹೆಸರು ಹೇಳಿದ್ದರು. ರಶ್ಮಿಕಾ ಈ ಪ್ರತಿಕ್ರಿಯೆ ಯಶ್ ಅಭಿಮಾನಿಗಳನ್ನು ಕೆರಳಿಸಿತ್ತು. ರೊಚ್ಚಿಗೆದ್ದಿದ್ದ ಅಭಿಮಾನಿಗಳು ಯಶ್ ಅವರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ.
ಕಿರಿಕ್ ಪಾರ್ಟಿ(Kirik Party), 2016ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಟಿ ರಶ್ಮಿಕಾ ಮಂದಣ್ಣ(Rashmika Mandanna) ಆಗಿನ್ನೂ ನಟಿಯಾಗಿ ಎಂಟ್ರಿ ಕೊಟ್ಟ ದಿನಗಳು. ರಶ್ಮಿಕಾಗೆ ಮೊದಲ ಸಿನಿಮಾನೇ ದೊಡ್ಡ ಮಟ್ಟದ ಹಿಟ್ ಸಿಕ್ಕಿತು. ಕಿರಿಕ್ ಪಾರ್ಟಿ ಬಳಿಕ ರಶ್ಮಿಕಾ ಕ್ರೇಜ್ ಹೆಚ್ಚಾಯಿತು. ಅದೇ ಸಮಯದಲ್ಲಿ ರಶ್ಮಿಕಾ, ಸ್ಯಾಂಡಲ್ ವುಡ್‌ನ ರಾಕಿಂಗ್ ಸ್ಟಾರ್ ಯಶ್(Yash) ಬಗ್ಗೆ ಮಾತನಾಡಿ ದೊಡ್ಡ ಮಟ್ಟದ ವಿವಾದ ಮೈಮೇಲೆ ಎಳೆದು ಕೊಂಡಿದ್ದರು. ಹೌದು, ಯಶ್‌ಗೆ ಮಿಸ್ಟರ್ ಶೋ ಆಫ್ ಎಂದು ಕರೆಯುವ ಮೂಲಕ ರಾಕಿಂಗ್ ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಯಶ್‌ಗೆ ಶೋ ಆಫ್ ಎಂದಿದ್ದ ರಶ್ಮಿಕಾ
ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಯಶ್ ಅವರಿಗೆ ಶೋ ಆಫ್ ಎಂದಿದ್ದರು. ಕಿರಿಕ್ ಪಾರ್ಟಿ ಚಿತ್ರದ ಬಿಡುಗಡೆಗೂ ಮುನ್ನ ನೀಡಿದ ಸಂದರ್ಶನ ಅದಾಗಿತ್ತು. ರ್ಯಾಪಿಕ್ ಫೈರ್ ಸುತ್ತಿನಲ್ಲಿ ರಶ್ಮಿಕಾಗೆ ನಿರೂಪಕರು ಕನ್ನಡದ ಯಾವ ನಟ ಮಿಸ್ಟರ್ ಶೋ ಆಫ್ ಅಂತ ನಿಮಗೆ ಅನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ರಶ್ಮಿಕಾ, ಯಶ್ ಹೆಸರು ಹೇಳಿದ್ದರು. ರಶ್ಮಿಕಾ ಈ ಪ್ರತಿಕ್ರಿಯೆ ಯಶ್ ಅಭಿಮಾನಿಗಳನ್ನು ಕೆರಳಿಸಿತ್ತು. ರೊಚ್ಚಿಗೆದ್ದಿದ್ದ ಅಭಿಮಾನಿಗಳು ಯಶ್ ಅವರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಯಶ್ ಮಿ.ಶೋ ಆಫ್ ಅಲ್ಲಾ, ಮಿ. ಶೋ ಆಫ್. ಯಶ್ ಬಾಸ್‌ಗೆ ರಶ್ಮಿಕಾ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
Rap ಮೇಲೆ ಮುಜಗರ ಮೂಡಿಸಿದ ರಶ್ಮಿಕಾ ಡ್ರೆಸ್, ಟ್ರೋಲ್ ಆದ್ರು ಕಿರಿಕ್ ಬೆಡಗಿ!
ಅಭಿಮಾನಿಗಳಿಗೆ ಯಶ್ ಮನವಿ
ವಿವಾದ ದೊಡ್ಡದಾಗುತ್ತಿದ್ದಂತೆ ಸ್ವತಃ ಯಶ್ ಪ್ರತಿಕ್ರಿಯೆ ನೀಡಿದ್ದರು. ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ನಾನು, ಕೆಲವೊಮ್ಮೆ ಎದುರಾಗುವ ಅನಗತ್ಯ ಎನಿಸುವ ವಿಷಯಗಳನ್ನು ನಿರ್ಲ್ಯಕ್ಷಿಸುವ ಸ್ವಭಾವವನ್ನು ರೂಢಿಸಿಕೊಂಡಿದ್ದೇನೆ. ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತರಲ್ಲ, ಇದುವರೆಗೂ ಭೇಟಿಯು ಮಾಡಿಲ್ಲ. ಮಾತು ಸಹ ಆಡಿಲ್ಲ. ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಆಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು, ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ. ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದರು.
ರಶ್ಮಿಕಾ ಪ್ರತಿಕ್ರಿಯೆ
ಬಳಿಕ ರಶ್ಮಿಕಾ ಮಂದಣ್ಣ ಸಹ ತಮ್ಮ ಫೇಸ್‌ಬುಕ್‌ನಲ್ಲಿ ವಿವಾದದ ಕುರಿತು ಪೋಸ್ಟ್ ಪ್ರತಿಕ್ರಿ ನೀಡಿದ್ದರು. '7 ತಿಂಗಳ ಹಿಂದೆ ನಡೆದ ಒಂದು ಟಾಕ್ ಶೋ, ಇದೀಗ ಒಮ್ಮೆಲೆ ಸುದ್ದಿಯಾಗುತ್ತಿರುವುದು ನಿಜಕ್ಕೂ ಮನಸ್ಸಿಗೆ ಬೇಸರ ತಂದಿದೆ. ಉದ್ದೇಶಪೂರ್ವಕವಾಗಿ ನಾನು ಯಶ್ ಬಗ್ಗೆ ಈ ತರಹ ಮಾತನಾಡಿಲ್ಲ. ರ್ಯಾಪಿಡ್ ಫೈರ್ ಗೇಮ್‌ನ ಒಂದು ಭಾಗವಾಗಿ ಹೇಳಿದ್ದೇನೆಯೇ ಹೊರತು ಬೇರೆ ಯಾವುದೇ ಕಾರಣಕ್ಕೂ ಅಲ್ಲ. ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸುವುದು ಅನಿವಾರ್ಯ ವಾಗಿತ್ತು. ನನ್ನಿಂದ ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಮಾಧ್ಯಮಗಳು ಇದನ್ನು ಇಲ್ಲಿಗೆ ಬಿಟ್ಟು ಬಿಡಿ' ಎಂದು ರಶ್ಮಿಕಾ ಬರೆದುಕೊಂಡಿದ್ದರು.
ನಂತರ 'ನನಗೆ ಯಶ್ ಬಗ್ಗೆ ಗೌರವವಿದೆ. ಹಲವಾರು ಸಂದರ್ಭಗಳಲ್ಲಿ ನಾನು ಯಶ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದೇನೆ. ನಿಮ್ಮಂತೆಯೇ ನಾನು ಸಹ ಅವರ ಪ್ರತಿಭೆ ಮತ್ತು ಕೆಲಸಗಳಿಂದ ಸ್ಪೂರ್ತಿಗೊಂಡಿದ್ದೇನೆ' ಎಂದಿದ್ದರು. ಇಷ್ಟಾದರೂ ರಶ್ಮಿಕಾ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದರು.
ಗೆಳತಿಯ ವಿವಾಹ ಸಂಭ್ರಮದಲ್ಲಿ ರಶ್ಮಿಕಾ; ಮದುವೆ ಬಳಿಕ ಮುಂಬೈ ಪಾರ್ಟಿಯಲ್ಲಿ ಕಾಣಿಸಿಕೊಂಡ ನಟಿ
ಮತ್ತೆ ಟ್ರೋಲ್ ಆಗುತ್ತಿದೆ ರಶ್ಮಿಕಾ ಹೇಳಿಕೆ
ಅಂದಹಾಗೆ ಈ ಘಟನೆ ನಡೆದು ವರ್ಷಗಳೇ ಕಳೆದು ಹೋಗಿವೆ. ಇಂದು ರಶ್ಮಿಕಾ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ತಮಲು, ತಮಳು ಮತ್ತು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಮೊಮ್ಮಿದ್ದಾರೆ. ವಿಶ್ವವೇ ಬೆರಗಾಗುವಂತ ಸಿನಿಮಾ ಮಾಡಿದ್ದಾರೆ. ಇಂಥ ಸಮಯದಲ್ಲಿ ಈ ಸುದ್ದಿ ಮತ್ತೆ ವೈರಲ್ ಆಗುತ್ತಿದೆ. ರಶ್ಮಿಕಾ ಹೇಳಿಕೆ ಇದೀಗ ಮತ್ತೆ ಟ್ರೋಲ್ ಆಗುತ್ತಿದೆ. ಆದರೆ ಇದ್ಯಾವುಕ್ಕೂ ರಶ್ಮಿಕಾ ತಲೆಕೊಂಡಿಲ್ಲ. ತನ್ನ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ.