Rap ಮೇಲೆ ಮುಜಗರ ಮೂಡಿಸಿದ ರಶ್ಮಿಕಾ ಡ್ರೆಸ್, ಟ್ರೋಲ್ ಆದ್ರು ಕಿರಿಕ್ ಬೆಡಗಿ!
ನೇಮ್, ಫೇಮ್ ಎರಡೂ ಸಿಕ್ಕ ಮಾತ್ರಕ್ಕೆ ಓವರ್(over) ಆಗಿ ನಡೆದುಕೊಳ್ಳುವುದು ಈಗಿನ ಯಂಗ್ ಸ್ಟಾರ್ಸ್‌ಗಳಲ್ಲಿ (Young Stars) ಕಾಣಬಹುದು. ಇತ್ತೀಚೆಗೆ ಡ್ರೆಸ್(dress) ವಿಷಯದಲ್ಲಿ ಹೆಚ್ಚು ಟ್ರೋಲ್‌ಗೆ(troll) ಒಳಗಾಗಿರುವ ರಶ್ಮಿಕಾ ಮಂದಣ್ಣ ಮುಂಜುಗರ ಮೂಡಿಸುವ ಬ್ಲಾಕ್ ಡ್ರೆಸ್ (Black Dress) ಹಾಕಿಕೊಂಡು ಮತ್ತೆ ನಟ್ಟಿಗರ ಮಾತಿಗೆ ಆಹಾರವಾಗಿದ್ದಾರೆ.
ಸ್ಯಾಂಡಲ್‌ವುಡ್(sandalwood), ಬಾಲಿವುಡ್(bollywood) ಯಾವುದೇ ಇರಲಿ ಟ್ರೋಲ್‌ಗೆ(troll) ಸಿಕ್ಕರೆ ನಮ್ಮ ಹೈಕ್ಳುಗಳು ಸುಮ್ಮೆ ಬಿಡುವ ಮಂದಿಯೇ ಅಲ್ಲ. ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಹೆಚ್ಚು ಟ್ರೋಲ್ ಆಗ್ತಿರೋದು ನ್ಯಾಷನಲ್ ಕ್ರಶ್(national crush) ರಶ್ಮಿಕಾ ಮಂದಣ್ಣ. ಇದೇನು ಅವರಿಗೆ ಹೊಸದಲ್ಲದಿದ್ದರೂ, ನಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬುಧವಾರ ಮುಂಬೈನಲ್ಲಿ ನಡೆದ ಡೈರೆಕ್ಟರ್(director) ಕರಣ್ ಜೋಹರ್ ಬರ್ಥಡೇ ಪಾರ್ಟಿಯಲ್ಲಿ(birthday party) ರಶ್ಮಿಕಾ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ "ಬ್ಲಾಕ್ & ಬ್ಲಿಂಗ್ ಥೀಮ್'(black & bling) ಇಟ್ಟಿದ್ದರಿಂದ, ಸೆಕ್ಸಿಯಾಗಿರುವ ಕಪ್ಪು ಡ್ರೆಸ್‌ನಲ್ಲಿ ಬಂದಿದ್ದರು. ಆದರೆ ಕ್ಯಾಮೆರಾ(camera) ಕಣ್ಣಿಗೆ ಕಾಣಿಸಿಕೊಂಡಾಗ ಪಾಪ್(pop) ಮುಂದೆ ಡ್ರೆಸ್ ಮುಜುಗರ ಮೂಡಿಸಿತು. ಕ್ಯಾಮೆರಾ ಎದುರು ಡ್ರೆಸ್ ಸರಿಮಾಡಿಕೊಳ್ಳುತ್ತಾ ಮುಜುಗರದಿಂದ(uncomfortable) ವರ್ತಿಸುವಂತೆ ಮಾಡಿತು.
ಸೆಲಬ್ರೆಟಿ(celebrity) ಫೋಟೋಗ್ರಫರ್(photographer) ವಿರಲ್ ಭಯಾನಿ ರಶ್ಮಿಕಾ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ(social media) ಅಪ್ಲೋಡ್ ಮಾಡಿದಾಗ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದಲ್ಲದೆ, ಅವರ ಡ್ರೆಸ್ ಹಾಗೂ ವರ್ತನೆಗೆ ಟ್ರೋಲ್ (Troll) ಕೂಡ ಆಗಿದ್ದಾರೆ.
ಗೆಳತಿಯ ವಿವಾಹ ಸಂಭ್ರಮದಲ್ಲಿ ರಶ್ಮಿಕಾ; ಮದುವೆ ಬಳಿಕ ಮುಂಬೈ ಪಾರ್ಟಿಯಲ್ಲಿ ಕಾಣಿಸಿಕೊಂಡ ನಟಿ
ಸಾಮಾಜಿಕ ಜಾಲತಾಣಗಳಲ್ಲಿ " ಮುಜುಗರ ಮೂಡಿಸುವ ಡ್ರೆಸ್ ಏಕೆ ಹಾಕಬೇಕಿತ್ತು?' ಎಂದು ವೈರಲ್ ವಿಡಿಯೋಗೆ ನೆಟ್ಟಿಗರು ಕಮೆಂಟ್(comment) ಮಾಡಿದ್ದಾರೆ. ಡ್ರೆಸ್ ವಿಚಾರದಲ್ಲಿ ಮತ್ತೆ ಟ್ರೋಲ್ ಆಗಿದ್ದು, ಕನ್ನಡಿಗರಿಗೂ ಹಾಗೂ ಫ್ಯಾನ್ಸ್‌ಗೂ (fans) ಬೇಸರವಾಗಿದೆ. ಈ ಹಿಂದೆ ಏರ್ಪೋರ್ಟ್ನಲ್ಲಿ(airport) ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ತಮ್ಮ ಶಾರ್ಟ್ ಡ್ರೆಸ್‌ನಿಂದ(short dress) ಟ್ರೋಲ್‌ಗೆ ಸಿಕ್ಕಿಬಿದ್ದಿದ್ದರು. ಈಗಾಗಲೇ ನ್ಯಾಷನಲ್ ಲೆವೆಲ್‌ನಲ್ಲಿ ಹೆಸರು ಮಾಡಿರುವ ರಶ್ಮಿಕಾ ಪುಷ್ಪ(pushpa) ಸಿನಿಮಾದಲ್ಲಿ ನಟಿಸಿ ತೆಲುಗಿನಲ್ಲಿ ಸಕ್ಸಸ್ (success) ಕಂಡಿದ್ದಾರೆ. ಸದ್ಯದಲ್ಲೇ ಬಹು ನರೀಕ್ಷಿತ ಪುಪ್ಷ-೨ ಸಿನಿಮಾ ಸೆಟ್ಟೇರಲಿದೆ. ತಮಿಳಿನ ವಿಜಯ್ ದಳಪತಿ ಜೊತೆ ಮೊದಲ ಬಾರಿ ನಟಿಸುತ್ತಿದ್ದಾರೆ. ಈ ಚಿತ್ರದ ಕುರಿತು ಸಾಕಷ್ಟು ಉತ್ಸುಕರಾಗಿದ್ದಾರೆ. ಅಲ್ಲದೆ ಬಾಲಿವುಡ್‌ನಲ್ಲೂ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಮಿಷನ್ ಮಜ್ನು(Mission Majnu) , ಗುಡ್ ಬೈ ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರಕ್ಷಿತ ಶೆಟ್ಟಿ (Rakshith Shetty) ನಿರ್ದೇಶನದ 'ಕಿರಿಕ್ ಪಾರ್ಟಿ' (Kirik Party) ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲ, ತೆಲಗು, ತಮಿಳು, ಮಲಯಾಳಂ ನಂತರ ಇದೀಗ ಬಾಲಿವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. National Crush ಎಂದೇ ಕರೆಯಲ್ಪಡುವ ಈ ಕೊಡಗಿನ ಕುವರಿ ಬೆಳೆದ ಪರಿ ಮಾತ್ರ ಎಂಥವರಿಗೂ ಆಶ್ಚರ್ಯವಾಗುತ್ತದೆ. ಇತ್ತೀಗೆ ತೆಲಗು ಸ್ಟೈಲಿಷ್ ಸ್ಟಾರ್ (Stylish Star) ಅಲ್ಲು ಅರ್ಜುನ್ ಜೊತೆ ಪ್ಯಾನ್ ಇಂಡಿಯಾ ಚಿತ್ರ ಪುಷ್ಫಾದಲ್ಲಿ ನಟಿಸಿದ್ದರು. ಅಲ್ಲದೇ ಡಿಯರ್ ಕಾಮ್ರೇಡ್ ಹಾಗೂ ಗೀತ ಗೋವಿಂದಂ ಚಿತ್ರಗಳಲ್ಲಿ ವಿಜಯ್ ದೇವರಕೊಂಡ ಜೊತೆ ನಟೆಸಿದ್ದಾರೆ. ಈ ಜೋಡಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದು, ರಿಯಲ್ ಲೈಫಿನಲ್ಲಿಯೂ ಇವರಿಬ್ಬರ ನಡುವೆ ಕುಚು ಕುಚು ನಡೆಯುತ್ತಿದೆ ಎಂದೇ ಗಾಸಿಪ್ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಆಗಾಗ ಈ ಜೋಡಿ ಗೋವಾ, ಅಮೆರಿಕದಲ್ಲಿ ಕಾಣಿಸಿಕೊಂಡಿರುವ ವರದಿಗಳೂ ಆಗಿವೆ.
ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಎಂಬ ನಟಿಯ ಫ್ಯಾನ್ ಬೇಸ್ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬೆಲೆದ ಪರಿ ಎಲ್ಲರ ಮೂಗ ಮೇಲೂ ಬೆರಳಿಡುವಂತೆ ಮಾಡಿದೆ. ಅಷ್ಟೇ ಅಲ್ಲ ಅವರು ಕನ್ನಡ ಬಗ್ಗೆ ತೋರುವ ಧೋರಣೆ ಹಾಗೂ ಹಾಕುವ ಡ್ರೆಸ್‌ಗೆ ಹಲವು ಬಾರಿ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.