Asianet Suvarna News Asianet Suvarna News

5 ವರ್ಷ ಅಪ್ಪ-ಅಮ್ಮ ನೋಡಲು ಬರ್ಲೇ ಇಲ್ಲ: ಬಾಲ್ಯದ ಕಹಿ ನೆನಪು ಹೇಳಿದ ಪ್ರಿಯಾಂಕಾ

ಬಾಲ್ಯದಲ್ಲಿ ನಡೆದ ಕೆಲವೊಂದು ಕಹಿ ಘಟನೆಗಳನ್ನು ನೆನಪಿಸಿಕೊಂಡ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು? 
 

When Priyanka Chopra recalled being sent to hostel as punishment in third grade
Author
First Published May 27, 2023, 7:37 PM IST | Last Updated May 27, 2023, 7:37 PM IST

ಬಾಲಿವುಡ್​ನ ದೇಸಿ ಹುಡುಗಿಯಿಂದ ಹಾಲಿವುಡ್ ತಾರೆ ಎನಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ನಟನೆ ಮತ್ತು ಶೈಲಿಯನ್ನು ಹೊಗಳುವುದು ಕಡಿಮೆಯೇ. ಈ ನಟಿ ಅತ್ಯಂತ ಕಡಿಮೆ ಅವಧಿಯಲ್ಲಿ ಹಾಲಿವುಡ್‌ನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಇದರ ಪರಿಣಾಮವೇನೆಂದರೆ ಅವರು ನಿರಂತರವಾಗಿ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿದ್ದಾರೆ. ವೃತ್ತಿಪರ ಜೀವನದಲ್ಲಿ ವೇಗವಾಗಿ ಸಾಗುತ್ತಿರುವ ಪ್ರಿಯಾಂಕಾ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನಿರಂತರವಾಗಿ ಬಹಿರಂಗಪಡಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ  ನಟಿಯ ಹಳೆಯ ವಿಡಿಯೋ ಒಂದು  ಹೊರಬಿದ್ದಿದೆ, ಅದರಲ್ಲಿ ಪ್ರಿಯಾಂಕಾ  ಶಿಕ್ಷೆಯ ರೂಪವಾಗಿ  ಹಾಸ್ಟೆಲ್‌ಗೆ ಕಳುಹಿಸಿದ ಸಮಯವನ್ನು ನೆನಪಿಸಿಕೊಂಡಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಹದಿಹರೆಯದ ವರ್ಷಗಳನ್ನು ತಮ್ಮ ಅಜ್ಜಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಅಮೆರಿಕದಲ್ಲಿ ಕಳೆದಿದ್ದರು. ಈ ಬಗ್ಗೆ ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ಮೂರು ವರ್ಷಗಳ ಕಾಲ ಹಾಸ್ಟೆಲ್‌ಗೆ ಕಳುಹಿಸಲಾಗಿತ್ತು. ಈ ಕುರಿತು ಅವರು  ದಿ ಅನುಪಮ್ ಖೇರ್ ಶೋನಲ್ಲಿ (The Anupam Kher show) ನೀಡಿದ ಹಳೆಯ ಸಂದರ್ಶನದಲ್ಲಿ ಹೇಳಿದ್ದರು. ತಾನು ತುಂಬಾ ಹಠಮಾರಿಯಾಗಿದ್ದೆ ಎಂಬ ಕಾರಣಕ್ಕೆ  ಶಿಕ್ಷೆಯ ರೂಪವಾಗಿ  ಪೋಷಕರು ಹಾಸ್ಟೆಲ್​ಗೆ ಕಳುಹಿಸಿದ್ದರು ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.  ಅಸಲಿಗೆ ಆಗಿದ್ದೇನೆಂದರೆ, ಪ್ರಿಯಾಂಕಾ ಮಗುವಾಗಿದ್ದಾಗ ಪಾಲಕರು  ತಮ್ಮ ಪಿಎಚ್‌ಡಿ ಕೆಲಸದಲ್ಲಿ ನಿರತರಾಗಿದ್ದರಿಂದ ಅಜ್ಜಿಯ ಮನೆಗೆ ಪ್ರಿಯಾಂಕರನ್ನು ಬಿಟ್ಟಿದ್ದರು. ಆಕೆ ಐದು ವರ್ಷವಾಗುವವರೆಗೂ ಮಗುವನ್ನು ಪಾಲಕರು ಭೇಟಿಯಾಗಿರಲಿಲ್ಲ. ಪ್ರಿಯಾಂಕಾ ಆ ಎಳವೆಯಲ್ಲಿ  ಅಪ್ಪ-ಅಮ್ಮನ ಪ್ರೀತಿಯಿಲ್ಲದೇ ಅಜ್ಜಿ, ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಜೊತೆ ಬೆಳೆದರು.

Priyanka Chopra: ಅಂಡರ್​ವೇರ್​ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ

ನಂತರ ಅಪ್ಪ-ಅಮ್ಮನ ಬಳಿ ಬಂದಾಗ ಎಳೆ ವಯಸ್ಸಿನಲ್ಲಿನ ಪ್ರೀತಿಯ ಕೊರತೆ ನೋವುಂಟು ಮಾಡಿತ್ತು. ಆದ್ದರಿಂದ ಅಮ್ಮ ಏನೇ ಕೊಟ್ಟರೂ ಬೇಡ ಎನ್ನುತ್ತಿದ್ದರಂತೆ. ಇದನ್ನೇ ಹಠ ಎಂದುಕೊಂಡ ಅಪ್ಪ-ಅಮ್ಮ ತಮಗೆ ಬೈಯುತ್ತಿದ್ದರು ಎಂದಿದ್ದಾರೆ ಪ್ರಿಯಾಂಕಾ. ನನ್ನ ಅಮ್ಮ ತಿನ್ನಲು ಕೊಟ್ಟರೆ ನಾನು ಬೇಡ ಎನ್ನುತ್ತಿದೆ, ಏನೇ ಕೊಟ್ಟರೂ ಬೇಡೆನ್ನುತ್ತಿದ್ದೆ. ಇಲ್ಲ, ಬೇಡ ಎನ್ನುವುದೇ ನನಗೆ ಇಷ್ಟವಾಗಿತ್ತು. ಅವರು ಏನು ಮಾಡಿದರೂ ನಾನು ಬೇಡ ಎನ್ನುತ್ತಿದ್ದೆ. ಒಂದು ರೀತಿಯಲ್ಲಿ ಅಪ್ಪ-ಅಮ್ಮನ ವಿರುದ್ಧ ಬಂಡಾಯ ಎದ್ದಿದ್ದೆ ಎಂದಿದ್ದಾರೆ ಪ್ರಿಯಾಂಕಾ.  'ಹಾಗಾಗಿ ಶಿಕ್ಷೆಯಾಗಿ ನನ್ನನ್ನು ಮೂರನೇ ತರಗತಿ ಹಾಸ್ಟೆಲ್‌ಗೆ ಕಳುಹಿಸಿದರು. ನಾನು 3, 4 ಮತ್ತು 5 ನೇ ತರಗತಿಯವರೆಗೆ ಲಖನೌದ ಲಾ ಮಾರ್ಟಿನಿಯರ್‌ನಲ್ಲಿದ್ದೆ. ಅಲ್ಲಿ ನಾನು ಸುಧಾರಿಸಿಕೊಂಡು ಹಿಂದುರಿಗೆ.  ನಾನು ತುಂಬಾ ಹಾಳಾಗಿದ್ದೆ ಮತ್ತು ನಾನು ಈಗಲೂ ಇದ್ದೇನೆ' ಎಂದು ಪ್ರಿಯಾಂಕಾ ತಮಾಷೆ ಮಾಡಿದ್ದಾರೆ. 

ಅಮೆರಿಕದಲ್ಲಿ (America) ಕೆಲವು ವರ್ಷಗಳ ಕಾಲ ಕಳೆದ ನಂತರ ಭಾರತಕ್ಕೆ ಮರಳಲು ನಿರ್ಧರಿಸಿದ ಬಗ್ಗೆಯೂ ಪ್ರಿಯಾಂಕಾ ಬಹಿರಂಗಪಡಿಸಿದ್ದಾರೆ. ಅಮೆರಿಕದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ, ಪ್ರಿಯಾಂಕಾ ಮಿಸ್ ಇಂಡಿಯಾ ಸ್ಪರ್ಧೆಗೆ ಅರ್ಜಿ ಸಲ್ಲಿಸಿದರು. ಅಲ್ಲಿ ಅವರು  ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು ಮತ್ತು ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರದ್ದು ಕಪ್ಪು ವರ್ಣವಾಗಿದ್ದರಿಂದ ಕರಿ ಬೆಕ್ಕು (Black cat) ಎಂದು ಹೀಯಾಳಿಕೆ ಕೂಡ ಮಾಡಲಾಗಿತ್ತು. ಇದೆಲ್ಲವುಗಳ ಹೊರತಾಗಿಯೂ ಪ್ರಿಯಾಂಕಾ ಈಗ ಸೂಪರ್​ಸ್ಟಾರ್​ ಆಗಿದ್ದಾರೆ. ಬಾಲಿವುಡ್​ನಿಂದ  ಹಾಲಿವುಡ್‌ಗೆ ಹಾರಿದ್ದಾರೆ. 

ಸೆಕ್ಸ್​ನಲ್ಲಿ ನಿರಾಸಕ್ತಿ: ಪ್ರಿಯಾಂಕಾ ತಂಗಿ ಮೀರಾ ಚೋಪ್ರಾ ಈಗ 'ಸೂಪರ್​ ವುಮೆನ್​'

ಇತ್ತೀಚೆಗೆ ಪ್ರಿಯಾಂಕಾ, ಕಾಸ್ಟಿಂಗ್​ ಕೌಚ್​ (Casting Couch) ಕುರಿತೂ ಮಾತನಾಡಿದ್ದಾರೆ. ‘ಆಗಷ್ಟೇ ನಾನು ಬಾಲಿವುಡ್​ಗೆ ಕಾಲಿಟ್ಟಿದ್ದೆ. ನಾನೊಂದು ಸಿನಿಮಾ ಒಪ್ಪಿಕೊಂಡಿದ್ದೆ. ಅದರಲ್ಲಿ ಡ್ಯಾನ್ಸ್ ಮಾಡಬೇಕಿತ್ತು. ಆಗ ನಿರ್ದೇಶಕರು ನನ್ನ ಬಳಿ ಬಂದು ನೀವು ನೃತ್ಯ ಮಾಡುತ್ತ ನಿಮ್ಮ ಉಳ ಉಡುಪುಗಳನ್ನೆಲ್ಲ ಕಳಚಬೇಕು, ನಾನು ನಿಮ್ಮ ಅಂಡರ್​ವೇರ್​ ನೋಡಬೇಕು ಎಂದು ಹೇಳಿದರು. ನನಗೆ ತುಂಬ ಕೋಪ ಬಂತು. ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಆದರೆ ಒಪ್ಪಲಿಲ್ಲ. ಮರುದಿನವೇ ಆ ಪ್ರಾಜೆಕ್ಟ್​ನಿಂದ ನಾನು ಹೊರನಡೆದೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ’ ಎಂಬುದಾಗಿ ಪ್ರಿಯಾಂಕಾ ಚೋಪ್ರಾ ಹಳೆ ಘಟನೆ ನೆನಪಿಸಿಕೊಂಡಿದ್ದರು. 

Latest Videos
Follow Us:
Download App:
  • android
  • ios