Asianet Suvarna News Asianet Suvarna News

ಕೊಹ್ಲಿಗೆಷ್ಟು ಜಂಭ ಅನ್ಕೊಂಡಿದ್ದ ಅನುಷ್ಕಾ ಕೊನೆಗೆ ಮನೆಗೇ ಆಹ್ವಾನಿಸಿದ್ರು..!

ಮೊದಲು ವಿರಾಟ್‌ನನ್ನು ನೋಡಿ ಎಂಥಾ ದಾರ್ಷ್ಟ್ಯ ಅನ್ಕೊಂಡಿದ್ರು ಅನುಷ್ಕಾ | ಕೊನೆಗೆ ಅವರನ್ನೇ ಮನೆಗೂ ಆಹ್ವಾನಿಸಿದ್ರು..!

When Anushka Sharma thought Virat Kohli was arrogant but ended up inviting him to her home dpl
Author
Bangalore, First Published May 1, 2021, 9:28 AM IST

ಅನುಷ್ಕಾ ಶರ್ಮಾ ನಟಿಯಾಗಿದ್ದರೂ ಪತಿ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾದ ಸಂದರ್ಭ, ಪ್ರೀತಿ ಬೆಳೆದ ರೀತಿ ನೋಡಿದ್ರೆ ಬಾಲಿವುಡ್‌ನಲ್ಲಿ ಸೂಪರ್ ಸಿನಿಮಾ ಮಾಡಬಹುದು. ನಟಿ 33ನೇ ಹುಟ್ಟು ಹಬ್ಬ ಆಚರಿಸುತ್ತಿರುವ ಸಂದರ್ಭ ಅವರ ಬ್ಯೂಟಿಫುಲ್ ಲವ್‌ಸ್ಟೋರಿ ಹೇಗಿತ್ತು ನೋಡಿ.

2013 ರಲ್ಲಿ, ಅನುಷ್ಕಾ ಮತ್ತು ವಿರಾಟ್ ಮೊದಲ ಬಾರಿಗೆ ಒಟ್ಟಿಗೆ ಶಾಂಪೂ ಕಮರ್ಷಿಯಲ್ ಚಿತ್ರೀಕರಣಕ್ಕಾಗಿ ಭೇಟಿಯಾದರು. ಈ ಜಾಹೀರಾತು ದೇಶಾದ್ಯಂತ ಟೆಲಿವಿಷನ್ ಸೆಟ್‌ಗಳಲ್ಲಿ ಬಂದ ಕೂಡಲೇ, ಕ್ರಿಕೆಟ್ ಮತ್ತು ಬಾಲಿವುಡ್ ಅಭಿಮಾನಿಗಳು ಈ ಜೋಡಿ ಮಧ್ಯೆ ಏನಾದ್ರೂ ಕೆಮೆಸ್ಟ್ರಿ ಇದ್ಯಾ ಎಂದು ಗಾಸಿಪ್ ಶುರು ಹಚ್ಕೊಂಡ್ರು.

ಪತ್ನಿಗಾಗಿ ಕೊಹ್ಲಿಯ ರೊಮ್ಯಾಂಟಿಕ್ ಹಾಡು: ಕಣ್ಣೀರಾದ ಅನುಷ್ಕಾ

ಅನುಷ್ಕಾ ಅವರು ವಿರಾಟ್ ಅವರ ಭೇಟಿಯ ಬಗ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ವಿರಾಟ್‌ನನ್ನು ಮನೆಗೆ ಬಂದಿದ್ದಾರೆ. ಅವರು ನನ್ನ ಸ್ನೇಹಿತ. ನಾವು ಒಟ್ಟಿಗೆ ಜಾಹೀರಾತು ಮಾಡಿದ್ದೇವೆ. ಅವರು ತುಂಬಾ ಸೊಕ್ಕಿನವರು ಎಂದುಕೊಂಡಿದ್ದೆ. ಆದರೆ ನಾನು ಭೇಟಿಯಾದಾಗ ಅವರು ತುಂಬಾ ಸಿಂಪಲ್, ಬುದ್ಧಿವಂತ ಮತ್ತು ಫನ್ ಲವಿಂಗ್ ಎಂದಿದ್ದಾರೆ. ನನ್ನ ಹೊಸ ಮನೆಯ ಖುಷಿ ಆಚರಿಸಲು ನಾನು ನನ್ನ ಸ್ನೇಹಿತರನ್ನು ಊಟಕ್ಕೆ ಕರೆದಿದ್ದೆ, ನಾನು ಆಗ ವಿರಾಟ್‌ನನ್ನು ಕೂಡ ಆಹ್ವಾನಿಸಿದೆ. ಅಲ್ಲಿಂದ ಸ್ನೇಹ ಶುರುವಾಯ್ತು ಅಂತಾರೆ ಅನುಷ್ಕಾ.

ನಾವು ಜೋಕ್ ಮಾಡ್ತಿದ್ದೆವು. ನಾನು ಎಲ್ಲ ಸಮಯದಲ್ಲೂ ಫೂಲ್ ಆಗ್ತಿದ್ದೆ. ಕೆಲವು ಹಾಸ್ಯಗಳು ನಿಜವಾಗಿಯೂ ಸಿಲ್ಲಿ ಆಗಿದ್ದವು. ಆದರೆ ನಾನು ಹೇಗಿದ್ದೇನೆ. ನಾನು ಒಳ್ಳೆಯ ಸಮಯವನ್ನು ಹೊಂದಲು ಮತ್ತು ನಗುವುದನ್ನು ಪ್ರೀತಿಸುತ್ತೇನೆ. ಶಾಂಪೂ ಕಮರ್ಷಿಯಲ್ ಮಾಡಿದ ಬಗ್ಗೆ ನನಗೆ ಖುಷಿ ಇದೆ ಎಂದಿದ್ದರು ಕೊಹ್ಲಿ.

Follow Us:
Download App:
  • android
  • ios