ಬಾಲಿವುಡ್‌ನಲ್ಲಿ ಗಾಡ್‌ಫಾದರ್ ಇಲ್ಲದೆ ಟಾಪ್ ಸ್ಟಾರ್ ಆಗಿ ಬೆಳೆದು ನಿಂತಿರೋ ನಟ ಅಕ್ಷಯ್ ಕುಮಾರ್ ಮೊದಲ ಪ್ರೀತಿಯನ್ನು ಕಳೆದುಕೊಂಡಿದ್ದು ಹೇಗೆ ಗೊತ್ತಾ..? ಯಬ್ಬಾ ಹೀಗೂ ಬ್ರೇಕ್‌ಅಪ್ ಆಗುತ್ತಾ ಎಂದು ಕೇಳ್ಬೇಡಿ, ಇದು ನಟ ಹೇಳಿದ ಪ್ರೀತಿಯ ಕಥೆ.

ತನ್ನ ಮೊದಲ ಪ್ರೀತಿನ ನೆನಪಿಸಿಕೊಂಡ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಹುಡುಗಿ ತಮ್ಮನ್ನು ರಿಜೆಕ್ಟ್ ಮಾಡಿ ಹೋಗಿದ್ದರ ಅಸಲಿ ಕಾರಣವನ್ನು ರಿವೀಲ್ ಮಾಡಿದ್ದಾರೆ. ಇದು ಸ್ವಲ್ಪ ಫನ್ನಿ ಅನಿಸಿದರೂ ಪ್ರೀತಿ ವಿಷಯದಲ್ಲಿ ಎಲ್ಲಾನೂ ಸೀರಿಯಸ್ ಅನಿಸೋದು ಸುಳ್ಳಲ್ಲ.

ನಾವು ಮಂಗಗಳಾಗೋಣ ಎಂದ ನಟ: ರಾಮ ಮಂದಿರ ಬಗ್ಗೆ ಅಕ್ಷಯ್ ಮಾತು

ತೆರೆಯ ಮೇಲೆ ರೊಮ್ಯಾಂಟಿಕ್ ಆಗಿ ಕಿಸ್ ಮಾಡೋ ಈ ನಟ ಕಿಸ್ ಕೊಡೋಕಾಗದೆ ಹುಡುಗಿಯಿಂದ ರಿಜೆಕ್ಟ್ ಆಗಿದ್ದರು ಎಂದರೆ ನಂಬ್ತೀರಾ..? ನಂಬಲೇಬೇಕು. ಇದನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ರಿವೀಲ್ ಮಾಡಿದ್ದಾರೆ.

ಹೌಸ್‌ಫುಲ್ 4 ತಂಡದ ಜೊತೆ ಕಪಿಲ್ ಶರ್ಮಾ ಶೋಗೆ ಬಂದಿದ್ದ ಅಕ್ಷಯ್ ಕುಮಾರ್ ತಮ್ಮ ಮೊದಲ ಪ್ರೀತಿ ಬಗ್ಗೆ ಹೇಳಿದ್ದಾರೆ. ಒಂದು ಯುವತಿ ಜೊತೆ ಡೇಟ್ ಮಾಡ್ತಿದ್ರು ಅಕ್ಷಯ್. ಜೊತೆಗೇ ಸಿನಿಮಾ ನೋಡ್ತಾ, ಉಡುಪಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡ್ತಾ ಸುತ್ತಾಡಿ ಎಲ್ಲಾ ಆದ ಮೇಲೆ ಬ್ರೇಕ್ ಅಪ್ ಆಗಿತ್ತು.

ನಟ ಅಕ್ಷಯ್‌ ಕುಮಾರ್‌ ಸಂಭಾವನೆ 135 ಕೋಟಿ ರೂ!

ನನಗೆ ಆಗ ನಾಚಿಗೆ ಸ್ವಭಾವವಿತ್ತು. ನಾನು ಆಕೆಯ ಭುಜದ ಮೇಲೆ ಕೈ ಇಡಲಿಲ್ಲ, ಕೈ ಹಿಡಿದುಕೊಳ್ಳಲಿಲ್ಲ. ಆಕೆ ನಾನು ಆಕೆಯನ್ನು ಕಿಸ್ ಮಾಡಲಿ, ಮತ್ತೇನೋ ಮಾಡಲಿ ಎಂದು ಬಯಸುತ್ತಿದ್ದಳು. ನಾನು ಮಾಡಲಿಲ್ಲ, ಆಕೆ ನನ್ನನ್ನು ಬಿಟ್ಟು ಹೋದಳು ಎಂದಿದ್ದಾರೆ ಅಕ್ಷಯ್.

ಈ ಘಟನೆ ನಂತರ ಯೂಟರ್ನ್ ತಗೊಂಡು ಬದಲಾದರಂತೆ ಅಕ್ಷಯ್ ಕುಮಾರ್. ಇತ್ತೀಚೆಗಷ್ಟೇ ನಟ ಪತ್ನಿ ಟ್ವಿಂಕಲ್ ಜೊತೆ 20ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.