ನಮಲ್ಲಿ ಕೆಲವರು ಮಂಗಗಳಾಗೋಣ, ಕೆಲವರು ಅಳಿಲುಗಳಾಗೋಣ ಎಂದ ಬಾಲಿವುಡ್ ನಟ | ಅಯೋಧ್ಯೆಯ ಭವ್ಯ ರಾಮ ಮಂದಿರದ ಬಗ್ಗೆ ಅಕ್ಷಯ್ ಕುಮಾರ್ ಹೇಳಿದ್ದಿಷ್ಟು

ನಮ್ಮಲ್ಲಿ ಕೆಲವರು ಮಂಗಗಳಾಗೋಣ, ಕೆಲವರು ಅಳಿಲುಗಳಾಗೋಣ ಎಂದಿದ್ದಾರೆ ಬಾಲಿವುಡ್ ನಟ ಅಕ್ಷಯ್ ಕುಮಾರ್. ನಟ ಹೀಗಂದಿದ್ದಾಕೆ..? ಇಂಟ್ರೆಸ್ಟಿಂಗ್ ಕಥೆಯನ್ನೂ ಹೇಳಿದ್ದಾರೆ ಅಕ್ಕಿ. ಏನದು..?

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಈ ಸಂಬಂಧ ನಟ ಅಕ್ಷಯ್ ಕುಮಾರ್ ಮಹತ್ವದ ಸಂದೇಶವೊಂದನ್ನು ನೀಡಿದ್ದಾರೆ. ಪುಟ್ಟದೊಂದು ಕಥೆಯ ಮೂಲಕ ದೊಡ್ಡ ಮೆಸೇಜ್ ಕೊಟ್ಟಿದ್ದಾರೆ.

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದಲ್ಲೇ ತಮ್ಮನ್ನು ಪರಿಚಯಿಸಿಕೊಂಡ ಕಿಚ್ಚ ಸುದೀಪ್‌!

ಲಂಕೆಗೆ ಸೇತುವೆ ಕಟ್ಟುವ ಸಂದರ್ಭ ನೀರಲ್ಲಿ ನೆನೆದು ಮರಳಿನ ಮೇಲೆ ಹೊರಳಿ ಕಲ್ಲಿನ ಮೇಲೆ ಬಂದು ಬೀಳುತ್ತಿದ್ದ ಅಳಿಲಿನ ಸೇವೆಯ ಕಥೆಯನ್ನು ಹೆಳಿದ್ದಾರೆ ಅಕ್ಷಯ್. ಅಳಿಲಿನ ಸೇವೆ ನೋಡಿ ರಾಮ ಆಶ್ಚರ್ಯಚಕಿತನಾಗಿದ್ದರ ಬಗ್ಗೆಯೂ ವಿವರಿಸಿದ್ದಾರೆ.

Scroll to load tweet…

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈಗ ನಾವೂ ಕೆಲವರು ವಾನರಗಳಾಗಬೇಕು, ಅಳಿಲುಗಳಾಗಬೇಕು, ನಮ್ಮಿಂದಾದಷ್ಟು ನೆರವನ್ನು ನೀಡಬೇಕು ಎಂದಿದ್ದಾರೆ ಅಕ್ಷಯ್.