ರಾಮ್ ಗೋಪಾಲ್ ವರ್ಮಾಗೆ ಜನರ ಕೈಲಿ ಉಗಿಸಿಕೊಳ್ಳೋದ್ರಲ್ಲಿ ಅದೇನ್ ಖುಷಿ ಸಿಗುತ್ತೋ ಗೊತ್ತಿಲ್ಲ. ಎಷ್ಟೋ ಸಲ ಜನರನ್ನು ರೊಚ್ಚಿಗೆಬ್ಬಿಸುವ ಹೇಳಿ ಕೊಟ್ಟು ಮಜಾ ನೋಡುವ ಬುದ್ಧಿ ತೋರಿಸಿದ್ದಾರೆ. ಸದ್ಯಕ್ಕೆ ಅವರಿಗೆ ವಿವಾದ ಸೃಷ್ಟಿಸಲು ಸಿಕ್ಕಿರೋದು ಕೊರೋನಾ ವೈರಸ್ ವಿಚಾರ. ದೇಶ ಏನ್ ಬಂತು, ಇಡೀ ವಿಶ್ವದ ಜನ ಕೊರೋನಾ ಅಂದ್ರೆ ಬೆಚ್ಚಿ ಬೀಳ್ತಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಮ್ ಬೆಂಗಳೂರಿನಲ್ಲೂ ಕೊರೋನಾ ಭೀತಿ ಇದೆ. ಈಗಾಗಲೇ ಮುನ್ನಚ್ಚರಿಕೆಯ ಕ್ರಮಗಳನ್ನು ಆದೇಶಿಸಿದ್ದಾರೆ. ಮೊದಲೇ ಭಯ ಪಡ್ತಿರೋ ಜನರನ್ನು ಮತ್ತೆ ಮತ್ತೆ ಹೆದರಿಸಲು ಒಂದಿಲ್ಲೊಂದು ಸುದ್ದಿಗಳು ಬರುತ್ತಲೇ ಇವೆ. ಭಾರತದ ಶೇಕಡಾ ಎಪ್ಪತ್ತರಷ್ಟು ಜನರಿಗೆ ಕೊರೋನಾ ಬರುವ ಸಾಧ್ಯತೆ ಇದೆ ಅಂದಾಗ ದೊಡ್ಡ ಆತಂಕ ಆವರಿಸಿತ್ತು. ಜೊತೆಗೆ ಬೆಂಗಳೂರಿನಲ್ಲೂ ಕೊರೋನಾ ಕೇಸ್ ಪತ್ತೆಯಾಗುತ್ತಿವೆ. ಏರ್ ಫೋರ್ಟ್ ನಲ್ಲಿ ಬಂದಿಳಿಯುವ ಪ್ರವಾಸಿಗರಲ್ಲಿ ಕೊರೋನಾ ಲಕ್ಷಣ ಕಂಡು ಬಂದಿದೆ. ಜೊತೆಗೆ ಇದೀಗ ತಾನೇ ಭಾರತಕ್ಕೆ ಬಂದಿಳಿದ ಇಪ್ಪತ್ತೊಂದು ಇಟಾಲಿಯನ್ ಪ್ರವಾಸಿಗರ ಪೈಕಿ ಹದಿನೈದು ಜನಕ್ಕೆ ಕೊರೋನಾ ಇದೆ ಅನ್ನೋದನ್ನು ದೆಹಲಿಯ ಏಮ್ಸ್ ಆಸ್ಪತ್ರೆಯೇ ದೃಢಪಡಿಸಿದೆ. ಇದಕ್ಕಿಂತ ಆತಂಕಕಾರಿ ಎಂದರೆ ಈ ಹದಿನೈದು ಜನರ ಜೊತೆಗೆ ಆ ವಿಮಾನದಲ್ಲಿ ಪ್ರಯಾಣಿಸಿರುವ ಇತರರಿಗೂ ಇದು ತಗುಲಿರುವ ಸಾಧ್ಯತೆ ಇರುತ್ತದೆ. ಆ ಕ್ಷಣದಲ್ಲಿ ಅವರಲ್ಲಿ ಕೊರೋನಾ ಲಕ್ಷಣ ಕಾಣಿಸದಿದ್ದರೂ ಕ್ರಮೇಣ ಕಾಣಿಸು ಅಪಾಯ ಇಲ್ಲದಿಲ್ಲ.

ಕೊರೋನಾ ನಿಗ್ರಹದ ರಾಸಾಯನಿಕ ಪತ್ತೆ? ...

ಇಂಥದ್ದೊಂದು ಪರಿಸ್ಥಿತಿಯನ್ನು ನಾವು ಎದುರಿಸುತ್ತಿರುವಾಗ ರಾಮ್ ಗೋಪಾಲ್ ವರ್ಮಾ ಎಂಬ ವಿಲಕ್ಷಣ ವ್ಯಕ್ತಿ ಒಂದು ಟ್ವೀಟ್ ಮಾಡಿದ್ದಾರೆ. I never thought our death would also be: MADE IN CHINA ಅಂತ ಹೇಳಿಕೊಂಡಿದ್ದಾರೆ. ಅಂದರೆ ನಮ್ಮ ಸಾವೂ ಸಹ ಮೇಡ್‌ ಇನ್ ಚೈನಾ ಆಗುತ್ತೆ ಅಂತ ಊಹಿಸಿರಲಿಲ್ಲ ಅಂತಾಗುತ್ತೆ. ಮೇಲ್ನೋಟಕ್ಕೆ ಇದೊಂದು ಹಿಲೇರಿಯಸ್ ಜೋಕ್ ನಂತೆ ಕಾಣಿಸಬಹುದು. ಆದರೆ ಜೋಕ್ ಮಾಡೋದಕ್ಕೂ ಒಂದು ಹೊತ್ತು ಗೊತ್ತು ಬೇಕಲ್ಲಾ! ಎಲ್ಲರೂ ಸಾವಿನ ಭೀತಿಯಲ್ಲಿರುವಾಗ ಇಂಥ ಹಾಸ್ಯ ಜನರನ್ನು ಸಿಟ್ಟಿಗೇಳಿಸದೇ ಇರುತ್ತಾ. ಒಬ್ಬ ಜವಾಬ್ದಾರಿಯುತ ನಿರ್ದೇಶಕನಾಗಿದ್ದು ನೀವು ಹೀಗೆಲ್ಲ ಮಾಡಬಹುದಾ ಅಂತ ಜನ ಆರ್ ಜಿವಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಇದೇ ದುರಹಂಕಾರದಲ್ಲಿ ಕೊರೋನಾ ಸಂತ್ರಸ್ತರ ಮೇಲೆ ಸಿನಿಮಾ ಮಾಡ್ತೀನಿ ಅಂತ ಹೋಗ್ಬೇಡಿ, ಹಾಗೇನಾದ್ರೂ ಮಾಡಿದ್ರೆ ನಿಮ್ ಸಿನಿಮಾ ಜೊತೆಗೆ ನಿಮ್ಮದೂ ಕೊನೆಯಾಗುತ್ತೆ' ಅಂತೊಬ್ಬರು ರೀ ಟ್ವೀಟ್ ಮಾಡಿದ್ದಾರೆ. 'ಹಾಸ್ಯ ಮಾಡೋದಕ್ಕೂ ಒಂದು ರೀತಿ ನೀತಿ ಅಂತಿಲ್ವಾ' ಅಂತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. 'ಟ್ವಿಟ್ಟರ್ ಗೆ ಆರ್ ಜಿವಿ, ವಿಶ್ವಕ್ಕೆ ಕೊರೋನಾ' ಅಂತ ಮತ್ತೊಬ್ಬರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

 

 

ಇಷ್ಟೆಲ್ಲ ಟೀಕೆಗಳು ಹರಿದು ಬಂದಿದ್ದರೂ ರಾಮ್ ಗೋಪಾಲ್ ವರ್ಮಾ ತಲೆ ಕೆಡಿಸಿಕೊಂಡಿಲ್ಲ. ಎಂದಿನಂತೆ ತಮ್ಮ ಉಡಾಫೆಯನ್ನು ಮುಂದುವರಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಗೆ ವಿವಾದ ಸೃಷ್ಟಿ ಮಾಡೋದು ನೀರು ಕುಡಿದಷ್ಟೇ ಸಲೀಸು ಅಂತ ಒಂದು ಮಾತಿದೆ. ಕಳೆದ ಕೆಲವು ದಿನಗಳ ಹಿಂದೆ ಅವರು ಪವನ್ ಕಲ್ಯಾಣ್ ಬಗ್ಗೆ ಅಪಹಾಸ್ಯ ಮಾಡಿ ಟ್ವೀಟ್ ಮಾಡಿದ್ರು. ಶ್ರೀದೇವಿ ಮರಣದ ವೇಳೆ ಬೋನಿ ಕಪೂರ್ ಅವರನ್ನು ಬೈದು ಟ್ವೀಟ್ ಮಾಡಿದ್ದು ವಿವಾದವಾಗಿತ್ತು. ಹೆಣ್ಣುಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಿ ಬೈಸಿಕೊಂಡಿದ್ದರು. ಇದೀಗ ಕೊರೋನಾ ಸರದಿ.

ಮದುವೆಯಾದ ಗಂಡಸರಿಂದಾದ 'ಅನುಭವ' ಬಹಿರಂಗ ಪಡಿಸಿದ ನಟಿ 

ಹಾಗಂತ ರಾಮ್ ಗೋಪಾಲ್ ವರ್ಮಾ ಮಾತಲ್ಲಿ ಹುರುಳಿಲ್ಲ ಅನ್ನಲಾಗದು. ನಮ್ಮ ಇಂದಿನ ಲೈಫ್ ಸ್ಟೈಲ್ ಗಮನಿಸಿದರೆ ನಾವು ಬಳಸೋ ಫೋನ್‌ ನಿಂದ ಹಿಡಿದು ಟೀ ಕುಡಿಯೋ ಕಪ್ನ ವರೆಗೆ ಮನೆಯಲ್ಲಿ ಯಥೇಚ್ಛವಾಗಿ ಮೇಡ್ ಇನ್ ಚೀನಾ ವಸ್ತುಗಳ ಬಳಕೆ ಮಾಡುತ್ತೇವೆ. ಮಕ್ಕಳಿಗಾಗಿ ಚೀನಾದಲ್ಲಿ ತಯಾರಾದ ಆಟಿಕೆ ಕೊಡುತ್ತೇವೆ. ನಾವು ಬಳಸೋ ಗ್ಯಾಜೆಟ್ಸ್, ಸ್ಪೋರ್ಟ್ಸ್ ಸಾಮಗ್ರಿಗಳು, ಎಲೆಕ್ಟ್ರಾನಿಕ್ ಐಟಂಗಳು, ಕೆಲವೊಂದು ಮೆಡಿಸಿನ್ ಗಳು ಹೀಗೆ.. ನಮ್ಮ ದಿನಚರಿಯಲ್ಲಿ ಚೀನಾದ ಐಟಂಗಳ ಬಳಕೆ ವಿಪರೀತ ಅನಿಸುಷ್ಟಿದೆ ಇದೀಗ ಚೀನಾದ ಮಾರಿ ಕೊರೋನಾ ವಿಶ್ವಾದ್ಯಂತ ಅನೇಕರನ್ನು ಬಲಿ ತೆಗೆದುಕೊಂಡಿದೆ ಎಂಬಲ್ಲಿ ಸಾವೂ ಮೇಡ್ ಇನ್ ಚೈನಾವೇ ಆಗ್ತಿದೆ. ಆದರೆ ಇದು ಅಹಿತವಾದ ಸತ್ಯ. ಸಮಯ ಸಂದರ್ಭ ನೋಡಿ ಇಂಥ ಮಾತು ಹೇಳಿದರೆ ಆರ್ ಜಿವಿ ಮಾತಿಗೊಂದು ಗೌರವ ಸಿಗುತ್ತಿತ್ತೋ ಏನೋ, ಆದರೆ ಹೊತ್ತಲ್ಲದ ಹೊತ್ತಲ್ಲಿ ಇಂಥ ಸ್ಟೇಟ್ ಮೆಂಟ್ ಕೊಟ್ಟು ಹಿಗ್ಗಾಮುಗ್ಗಾ ಉಗಿಸಿಕೊಳ್ತಿದ್ದಾರೆ.