ಐಶ್ವರ್ಯಾ ರೈ ಬಚ್ಚನ್ ಚೆಲುವು ಮಾಸದ ಚಿರಯೌವನೆ. ಈಕೆ ಒಂಥರಾ ಬಾಲಿವುಡ್‌ನ ಆಂಜಲಿನಾ ಜೋಲಿ. ಸದ್ಯ ಮಗಳು ಆರಾಧ್ಯಾ ಜೊತೆಗೆ ಕೋವಿಡ್‌ನಿಂದ ಚೇತರಿಸಿಕೊಂಡು ಮನೆ ಸೇರಿರೋ ಐಶ್‌ ಸದ್ಯಕ್ಕೀಗ ರೆಸ್ಟ್‌ನಲ್ಲಿದ್ದಾರೆ. ಈಕೆಗೆ ಕೊರೋನಾ ಬಂದಾಗ ಬಹುದೊಡ್ಡ ಅಭಿಮಾನಿಗಳ ಬಳಗ ಶೀಘ್ರ ಚೇತರಿಕೆಗೆ ಹಾರೈಸಿತ್ತು. ಕೋವಿಡ್ ನೆಗೆಟಿವ್ ಬಂದಿದ್ದೇ ಐಶ್ವರ್ಯಾ ಅವರಿಗೆಲ್ಲ ಮನದುಂಬಿ ವಂದಿಸಿದ್ದಾರೆ. ಸದ್ಯ ಈ ಪರಿಸ್ಥಿತಿಯಲ್ಲಿರೋ ಐಶ್ ಬಗ್ಗೆ ಈ ಹಿಂದೆ ಹರಡಿದ್ದ ಗಾಸಿಪ್ ಗಳು, ರೂಮರ್ ಗಳು ಒಂದೆರಡಲ್ಲ. ಈಕೆಯ ಜನಪ್ರಿಯತೆ ಯಾವ ಮಟ್ಟದ್ದು ಅಂದರೆ ಬಚ್ಚನ್ ಮನೆತನದ ಅಭಿಷೇಕ್‌ ಅವರನ್ನು ಮದುವೆಯಾಗಿ ಒಂಭತ್ತು ವರ್ಷದ ಮಗುವಿನ ತಾಯಾಗಿದ್ದರೂ ಇಂದಿಗೂ ಈಕೆಯ ಹಿಂದಿನ ರಿಲೇಶನ್‌ಶಿಪ್‌ಗಳ ಬಗ್ಗೆ, ಅಫೇರ್‌ಗಳ ಬಗ್ಗೆ ಈಗಲೂ ಸೋಷಲ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತವೆ. ಐಶ್ ಬೇಬಿ ಬಗ್ಗೆ ಏನೊಂದು ಮಾತು ಕೇಳಿ ಬಂದರೂ ಈಕೆಯ ಹಿಂಬಾಲಕರ ಕಿವಿ ನೆಟ್ಟಗಾಗುತ್ತದೆ. 

 ಈ ಹಿಂದೆ ಹೃತಿಕ್ ಐಶ್ ಬಗ್ಗೆ ಆಡಿರೋ ಮಾತೊಂದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಮೂರು ಸಿನಿಮಾಗಳಲ್ಲಿ ಹೀರೋ, ಹೀರೋಯಿನ್ ಗಳಾಗಿ ತೆರೆ ಹಂಚಿಕೊಂಡವರು. ಜೋಧಾ ಅಕ್ಬರ್, ಧೂಮ್ 2ನಂಥಾ ಸಿನಿಮಾಗಳಲ್ಲಿ ಈ ಜೋಡಿ ಹೆಚ್ಚಿನ ಜನರ ಹಾಟ್ ಫೇವರೆಟ್ ಜೋಡಿಯಾಗಿ ಗುರುತಿಸಿಕೊಂಡಿತು. ಅದರಲ್ಲೂ ಧೂಮ್ 2 ನಲ್ಲಿ ಈ ಜೋಡಿ ಚಿಂದಿ ಉಡಾಯಿಸಿತು. ಲಿಪ್‌ಲಾಕ್ ಮಾಡೋ ಮೂಲಕ ಸಖತ್ ರೊಮ್ಯಾಂಟಿಕ್ ಮತ್ತು ಡೇರಿಂಗ್ ಪೇರ್ ಅನಿಸಿಕೊಂಡಿತು. ಇಷ್ಟೆಲ್ಲಾ ಆದ್ರೂ ಐಶ್ ಬೇಬಿಯನ್ನು ಹೃತಿಕ್ "ಬರೀ ಬಿನ್ನಾಣಗಿತ್ತಿ ಈಕೆ, ಇವಳಿಗೆ ಟ್ಯಾಲೆಂಟೇ ಇಲ್ಲ' ಅಂತ ಅಂದ್ಕೊಂಡಿದ್ರು ಅನ್ನುವ ವಿಚಾರ ಈಗ ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸಿದೆ. 

ಅಷ್ಟಕ್ಕೂ ಹೃತಿಕ್ ಅವರು ಆಡಿದ ಈ ಮಾತಿನ ಹಿನ್ನೆಲೆ ಏನು, ನಿಜಕ್ಕೂ ಅವರು ಈ ರೀತಿಯ ಮಾತುಗಳನ್ನು ಆಡಿದ್ರಾ ಅಂದರೆ ನಿಜಕ್ಕೂ ಹೃತಿಕ್ ಈ ಬಗೆಯ ಮಾತುಗಳನ್ನಾಗಿಡ್ರು ಅನ್ನೋದಕ್ಕೆ ಸಾಕ್ಷಿ ಸಿಗುತ್ತೆ. ಆದರೆ ನಾವೆಲ್ಲ ತಿಳ್ಕೊಂಡಿರೋ ಹಾಗೆ ನೆಗೆಟಿವ್ ಆಗಿ ಹೃತಿಕ್ ಈ ರೀತಿಯ ಮಾತುಗಳನ್ನಾಡಿದ್ದಲ್ಲ. ಬದಲಾಗಿ ತನ್ನ ತಪ್ಪು ತಿಳುವಳಿಕೆಯನ್ನು ಈ ಮೂಲಕ ಬಹಿರಂಗ ಪಡಿಸಿದ್ದು. 

ಐಶ್ವರ್ಯಾರಿಂದ ದೂರವಿರಲು ವಾರ್ನ್‌ ಮಾಡಿದ ಸಂಜಯ್‌ ದತ್‌ ಸಹೋದರಿ

ಹೃತಿಕ್ ರೋಷನ್‌ ಅವರನ್ನು ಆಂಗ್ಲ ಪತ್ರಿಕೆಯೊಂದು ಹಿಂದೆ ಸಂದರ್ಶನ ಮಾಡಿತ್ತು. ಈ ವೇಳೆ ಐಶ್ವರ್ಯಾ ರೈ ಬಗ್ಗೆ ಪ್ರಶ್ನೆ ಬಂತು. ಆಗ ಹೃತಿಕ್ ' ಐಶ್ವರ್ಯಾ ರೈ ಜೊತೆಗೆ ಮೊದಲ ಸಿನಿಮಾಕ್ಕೋಸ್ಕರ ತೆರೆ ಹಂಚುವ ಸಂದರ್ಭವದು. ಆಗ ನಾನು ಈಕೆಯ ಬಗ್ಗೆ ತಪ್ಪುಕಲ್ಪನೆ ಹೊಂದಿದ್ದೆ. ಐಶ್ವರ್ಯಾ ತುಂಬ ಚೆಂದಕ್ಕಿರೋ ಹುಡುಗಿಯಷ್ಟೇ, ಆಕೆಗೆ ಪ್ರತಿಭೆ ಇಲ್ಲ ಅಂತ ಜಡ್ಜ್ ಮಾಡಿದ್ದೆ. ಆದರೆ ಮುಂದೆ ನನ್ನ ಈ ಜಡ್ಜ್‌ಮೆಂಟ್ ಎಷ್ಟು ತಪ್ಪು ಅನ್ನೋದು ಗೊತ್ತಾಗ್ತಾ ಹೋಯ್ತು. ಐಶ್ವರ್ಯಾ ರೈ ಅವರ ಜೊತೆಗೆ ಅಭಿನಯಿಸುತ್ತಿದ್ದಂತೆ ಆಕೆಯ ಅಗಾಧ ಪ್ರತಿಭೆಯ ಪರಿಚಯವಾಗ್ತಾ ಹೋಯಿತು. ಈ ಹುಡುಗಿ ನಾನಂದುಕೊಂಡ ಹಾಗಲ್ಲ ಅನ್ನೋದು ತಿಳಿಯಿತು' ಅಂತ ಹೇಳಿದ್ರು. ಧೂಮ್ 2 ನಲ್ಲಂತೂ ಆಕೆ ಕಮಿಟ್ ಮೆಂಟ್, ಅಭಿನಯ, ಜೊತೆಗೆ ಕೆಲಸದಲ್ಲಿರುವ ಮಗ್ನತೆಗೆ ಕಂಡು ದಂಗಾಗಿ ಹೋದೆ ಎಂದೂ ಹೃತಿಕ್ ಹೇಳಿದ್ದಾರೆ. ಹೃತಿಕ್ ಮತ್ತು ಐಶ್ ಜೋಡಿ 'ಜೋಧಾ ಅಕ್ಬರ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾಗಲೇ ಅಭಿಷೇಕ್ ಐಶ್ವರ್ಯಾಗೆ ಪ್ರೊಪೋಸ್ ಮಾಡಿದ್ದು. ಈ ವೇಳೆ ಇವರ ಪ್ರೇಮಕ್ಕೆ ಹೃತಿಕ್ ಸಾಕ್ಷಿಯಾಗಿದ್ದರು. ಅಭಿ ಪ್ರೊಪೋಸ್ ಮಾಡುವಾಗ ಥಂಬ್ಸ್ಅಪ್ ಮಾಡಿ ಜೋಡಿಗೆ ಶುಭ ಹಾರೈಸಿದ್ದರು. 

ಕೊರೋನಾ ಗೆದ್ದ ಐಶ್ವರ್ಯಾ, ಆರಾಧ್ಯ; ಆಸ್ಪತ್ರೆಯಿಂದ ಮನೆಗೆ 

ಸದ್ಯಕ್ಕೆ ಕೋವಿಡ್ ನಿಂದ ಚೇತರಿಸಿಕೊಂಡಿರುವ ಐಶ್ವರ್ಯಾ ಮುಂದೆ ಮಣಿರತ್ನಂ ಅವರ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಹೃತಿಕ್ ರೋಷನ್ ಮುಂದೆಯೂ ಒಂದಿಷ್ಟು ಸಿನಿಮಾಗಳಿವೆ. ಆದರೆ ಈ ಜೋಡಿ ಮತ್ತೊಂದು ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಅಭಿಮಾನಿಗಳದ್ದು.  

ಸಹೋದರ ಸಲ್ಮಾನ್ ಜೀವನ ನಾಶಮಾಡಿದ್ದು ಐಶ್ವರ್ಯಾ ಎಂದು ಅರೋಪಿಸಿದ ಸೊಹೈಲ್ ಖಾನ್