ಮುಂಬೈ(ಜು. 27)  ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಐಶ್ವರ್ಯಾ ರೈ ಬಚ್ಚನ್ ಮತ್ತು  ಆರಾಧ್ಯ ಕೊರೋನಾದಿಂದ ಗುಣಮುಖರಾಗಿದ್ದಾರೆ.  ಜಯಾ ಬಚ್ಚನ್ ಹೊರತು ಪಡಿಸಿ ಕುಟುಂಬದ ಎಲ್ಲರಿಗೂ ಕೊರೋನಾ ಪಾಸಿಟಿವ್ ಆಗಿತ್ತು. 

ನಟ ಅಭಿಷೇಕ್ ಬಚ್ಚನ್ ಕೊರೋನಾದಿಂದ  ಐಶ್ವರ್ಯಾ ಗುಣಮುಖವಾದ ವಿಚಾರ ಹಂಚಿಕೊಂಡಿದ್ದಾರೆ. ನಟಿ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಗೆ ಜುಲೈ 12ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. 

ಬಿಗ್ ಬಿ ಕುಟುಂಬಕ್ಕೆ ಕೊರೋನಾ ಕಾಟ, ಕಾರಣ ಏನು?

ನಿಮ್ಮ ಪ್ರೀತಿ ಮತ್ತು ಹಾರೈಕೆಗೆ ಧನ್ಯವಾದಗಳು. ಐಶ್ವರ್ಯಾ ಮತ್ತು ಆರಾಧ್ಯ ಗುಣಮುಖರಾಗಿದ್ದಾರೆ. ಅವರಿಬ್ಬರ ಕೊರೊನಾ ವರದಿ ನೆಗೆಟಿವ್ ಆಗಿದ್ದುಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿದ್ದಾರೆ. ನಾನು ಮತ್ತು ತಂದೆ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದ್ದೇವೆ ಎಂದು ಅಭಿಷೇಕ್ ಅಭಿಮಾನಿಗಳಿಗೆ   ತಿಳಿಸಿದ್ದಾರೆ.

ಜುಲೈ 11ರಂದು ಅಮಿತಾಭ್ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ಗೆ ಕೊರೊನಾ ವೈರಸ್ ಇರುವುದು ಖಚಿತವಾಗಿತ್ತು. ತಕ್ಷಣವೇ ಅವರಿಬ್ಬರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನವೇ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಗೂ ಕೊರೊನಾ ಇರುವುದು ದೃಢಪಟ್ಟಿತ್ತು. ಆದರೆ, ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲ ದಿನಗಳ ನಂತರ ಐಶ್ವರ್ಯಾ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.