Asianet Suvarna News Asianet Suvarna News

ಪೋರ್ನೋಗ್ರಫಿ ಕೇಸಲ್ಲಿ ಸಿಕ್ಕಿಬಿದ್ದಿದ್ದ ಪೂನಂ ಪಾಂಡೆ! ಆಗಿದ್ದಾದ್ರೂ ಏನು?

ತೀರಿಕೊಂಡ ಮಾದಕ ಚೆಲುವೆ ಪೂನಂ ಪಾಂಡೆ ಕಂಗನಾ ನಡೆಸಿಕೊಡುತ್ತಿದ್ದ ಲಾಕಪ್‌ ಶೋನಲ್ಲಿ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಳು.

what happened when poonam pandey got caught in pornography case
Author
First Published Feb 3, 2024, 10:38 AM IST

ವಿವಾದಿತ ಇಂಡಿಯನ್ ಸಿನಿಮಾ ನಟಿಯರ ಹೆಸರು ಪಟ್ಟಿ ಮಾಡಿದರೆ ಮೊದಲ ಸಾಲಲ್ಲಿ ಕಾಣಿಸಿಕೊಳ್ಳುವ ಹೆಸರು ಪೂನಂ ಪಾಂಡೆಯದ್ದು. ಬಾಲಿವುಡ್‌ನಲ್ಲಿ ಕಾಂಟ್ರವರ್ಸಿಯಲ್ ಕ್ವೀನ್ ಅಂತಲೇ ಈಕೆಗೆ ಬಿರುದು. ಈಕೆ ಕಂಗನಾ ರಾನಾವತ್‌ ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋ 'ಲಾಕ್‌ಅಪ್‌'ನಲ್ಲಿ ಕಾಣಿಸಿಕೊಂಡಿದ್ದಳು. ಈ ಶೋಗೆ ಎಂಟರ್ ಆಗುವ ಸಂದರ್ಭದಲ್ಲಿ ಶೋದ ಆಂಕರ್ ಸಿದ್ಧಾರ್ಥ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಪೂನಂ ಪಾಂಡೆ ನೀಡಿದ ಉತ್ತರಗಳು ಹುಬ್ಬೇರಿಸುವಂತಿದ್ದವು.

ವರ್ಷಗಳ ಹಿಂದೆ ನಟಿ ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್ ಕುಂದ್ರಾ ಅವರು ಪೋರ್ನೋಗ್ರಫಿ ಕೇಸಿನಲ್ಲಿ ಸಿಕ್ಕಿಬಿದ್ದರಷ್ಟೆ. ರಾಜ್ ಕುಂದ್ರಾ ಸೃಷ್ಟಿ ಮಾಡುತ್ತಿದ್ದ ಪೋರ್ನೋ ಕಂಟೆಂಟ್‌ನಲ್ಲಿ ಪೂನಂ ಪಾಂಡೆ ಕೂಡ ಒಬ್ಬಳಾಗಿದ್ದಳು. ಕೆಲವು ವರ್ಷಗಳಿಂದ ಮೇನ್‌ಸ್ಟ್ರೀನ್ ಹಿಂದಿ ಫಿಲಂಗಳಲ್ಲಿ ಕೆಲಸ ಇಲ್ಲದಿದ್ದರಿಂದ, ರಾಜ್ ಕುಂದ್ರಾ ನಡೆಸುತ್ತಿದ್ದ ಪೋರ್ನೋ ಇಂಡಸ್ಟ್ರಿಗೆ ಪೂನಂ ಸೇರಿಕೊಂಡಿದ್ದಳು. ಯಾರೋ ಹೇಳಿದ ಮಾತು ಕೇಳಿ, ಕೈತುಂಬ ಕಾಸು ಸಿಗುವುದು ಎಂದು ಭಾವಿಸಿ ಏನೇನೋ ಮಾಡಿಕೊಂಡೆ. ಕೈಯಲ್ಲಿ ಕೆಲಸ ಇಲ್ಲದಿದ್ದಾಗ ಯಾರೋ ಏನೋ ಹೇಳಿದರೆ ಅದನ್ನು ಪಾಲಿಸಿಬಿಡಲು ಮುಂದಾಗುತ್ತೇವೆ. ನಾಲ್ಕು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದೆ ಎಂದು ಶೋದಲ್ಲಿ ಹೇಳಿದಳು ಆಕೆ. ನಮ್ಮನ್ನು ಯಾರೂ ಇಂಥ ಸಂದರ್ಭದಲ್ಲಿ ಕಾಪಾಡಲು ಬರುವುದಿಲ್ಲ. ಹದಿನೈದು ನಿಮಿಷಗಳ ಜನಪ್ರಿಯತೆಯಿಂದ ಬದುಕಿನಲ್ಲಿ ನಮಗೆ ಏನೇನೂ ಸಿಗೋಲ್ಲ. ಆದರೆ ಪರಿಶ್ರಮಪಟ್ಟು ಕೆಲಸ ಮಾಡುವುದರಿಂದ ಮಾತ್ರವೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದು ಈಗ ಅರ್ಥವಾಗಿದೆ ಎಂದಿದ್ದಳು.

ಈ ಕೇಸಿನಲ್ಲಿ ಪೂನಂ ಪಾಂಡೆಯ ಹೆಸರೂ ತೇಲಿಬಂದು, ಆಕೆಯನ್ನೂ ತನಿಖಾಧಿಕಾರಿಗಳು ವಿಚಾರಿಸಿಕೊಂಡಿದ್ದರು. ಆಗ, ರಾಜ್ ಕುಂದ್ರಾ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾಗಿ ಪೂನಂ ಹೇಳಿಕೊಂಡಿದ್ದಳು. ಹೇಗೆ ಬ್ಲ್ಯಾಕ್‌ಮೇಲ್ ಮಾಡಿದ? ಆಕೆಯ ನಗ್ನ ಚಿತ್ರಗಳು ಅವನ ಬಳಿ ಇದ್ದವೇ ಅಥವಾ ಆಕೆಯ ರಾಜ್ ಅಥವಾ ಇನ್ಯಾರದೋ ಜೊತೆ ಆಕ್ಷೇಪಾರ್ಹ ಭಂಗಿಯಲ್ಲಿ ಇದ್ದುದನ್ನು ರಾಜ್ ಚಿತ್ರೀಕರಿಸಿಕೊಂಡಿದ್ದನೇ? ಇಲ್ಲವಾದರೆ  ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಹೇಗೆ ಸಾಧ್ಯ?  ಈ ಪ್ರಶ್ನೆಗೆ ಆಕೆ ಉತ್ತರಿಸಿರಲಿಲ್ಲ. ಆದರೆ ರಾಜ್ ಮೇಲೆ ಆರೋಪವನ್ನಂತೂ ಹೊರಿಸಿದ್ದಳು. ಜೊತೆಗೆ, ಈ ಪ್ರಕರಣದಲ್ಲಿ ಪೂನಂಗೆ ರಾಜ್‌ನಿಂದ ತೊಂದರೆಯಾಗಿದೆ ಎಂದು ಗೊತ್ತಾದ ಬಳಿಕ ಶಿಲ್ಪಾ ಶೆಟ್ಟಿ ಬಂದು ಆಕೆಯನ್ನು ಭೇಟಿ ಮಾಡಿದ್ದಳೇ ಎಂದು ಕೇಳಲಾದ ಪ್ರಶ್ನೆಗೆ ಪೂನಂ, ಇಲ್ಲ ಎಂದು ಉತ್ತರಿಸಿದ್ದಳು. 

'ನಿನ್ನ ಬಿಕಿನಿ ಚಿತ್ರ ತೆಗೆದ್ನಲ್ಲ ಅವನಿಗೆ ಚಪ್ಪಲಿಯಲ್ಲಿ ಹೊಡೀಬೇಕು..' ಪೂನಂ ಪಾಂಡೆಗೆ ಹೇಳಿದ್ರಂತೆ ಆಕೆಯ ತಾಯಿ!
 

ಆದರೆ ಒಬ್ಬಾಕೆ ಗೃಹಿಣಿಯಾಗಿ, ಎರಡು ಮಕ್ಕಳ ತಾಯಿಯಾಗಿ, ಇಂಥ ಪ್ರಕರಣದಲ್ಲಿ ಗಂಡ ಸಿಕ್ಕಿಬಿದ್ದಾಗ ಆಕೆ ಯಾವ ಪರಿ ಮುಜುಗರ ಅನುಭವಿಸಿರಬಹುದು ಎಂಬುದು ನನಗೆ ಅಂದಾಜಾಗುತ್ತದೆ. ಯಾಕೆಂದರೆ ನಾನೂ ಒಬ್ಬ ಗೃಹಿಣಿ ಎಂದು ಪೂನಂ ಉತ್ತರ ಕೊಟ್ಟಿದ್ದಳು. ಕೆಲವು ಸಂದರ್ಭಗಳಲ್ಲಿ ನಾವು ನಮ್ಮ ಹೃದಯದಲ್ಲಿ ಇರುವುದನ್ನು ಹಾಗೇ ಹೇಳಿಬಿಡಲು ಸಾಧ್ಯವಾಗುವುದಿಲ್ಲ. ಸೆಲೆಬ್ರಿಟಿಗಳಿಗೆ ಈ ಬಿಕ್ಕಟ್ಟು ಇನ್ನೂ ಹೆಚ್ಚಿರುತ್ತದೆ. ಹೀಗಾಗಿ ಜನಸಾಮಾನ್ಯರು ನಮ್ಮಂಥವರನ್ನು ಜಡ್ಜ್ ಮಾಡುವ ಮುನ್ನ ಇದನ್ನೆಲ್ಲ ಗಮನಿಸಬೇಕು ಎಂದು ಆಕೆ ಹೇಳಿದ್ದಳು.

ಸಿನಿಮಾ, ಮಾಡೆಲಿಂಗ್‌ ಹೊರತಾಗಿ ಈ ಮೂಲಕ ಹಣ ಸಂಪಾದಿಸುತ್ತಿದ್ದ ಪೂನಂ ಪಾಂಡೆ ನೆಟ್‌ ವರ್ತ್‌ ಎಷ್ಷು ಗೊತ್ತಾ?
     
ಕೊನೇ ಪಕ್ಷ, ಇದರಿಂದ ನಾನು ಪಾಠ ಕಲಿತೆ. ಕೆಲವು ದಿನ ಕೆಲಸವಿಲ್ಲದೇ ಮನೆಯಲ್ಲಿ ಕೂತಿದ್ದೆ. ಆದರೆ ಈಗ ಕೆಲಸಗಳು ಸಿಗುತ್ತಿವೆ. ನಾನು ಅದೃಷ್ಟವಂತೆ ಎಂದಿದ್ದಳು. ಈ ರಿಯಾಲಿಟಿ ಶೋದಲ್ಲಿ ಕೈಕೋಳ ಹಾಕಿಸಿಕೊಂಡಿದ್ದ ಕಾಂಟ್ರವರ್ಷಿಯಲ್ ಸೆಲೆಬ್ರಿಟಿಗಳಲ್ಲಿ ಪೂನಂ ಕೂಡ ಒಬ್ಬಳು, ಆದರೆ ಅದರ ನಂತರವೂ ಪೂನಂಗೆ ಐಟಂ ಸಾಂಗ್‌ಗಳು ಹೊರತುಪಡಿಸಿದರೆ ಇನ್ನೇನೂ ಸಿಗಲಿಲ್ಲ ಎಂಬುದು ಚೋದ್ಯ.. 

Follow Us:
Download App:
  • android
  • ios