ಸೈಫ್‌ ಅಲಿ ಖಾನ್‌, ಕರೀನಾ ಕಪೂರ್‌ಳ ಬೆನ್ನು ಬಿದ್ದದ್ದು ಅವರಿಬ್ಬರೂ ತಶಾನ್ ಫಿಲಂನಲ್ಲಿ ಆಕ್ಟಿಂಗ್ ಮಾಡುತ್ತಿದ್ದಾಗ. ಅಷ್ಟರಲ್ಲಾಗಲೇ ಸೈಫ್ ಹಲವಾರು ವಿವಾದಗಳಲ್ಲಿ ಬಿದ್ದು ಎದ್ದು ಮೈ ಮಣ್ಣು ಮಾಡಿಕೊಂಡಿದ್ದ. ತನಗಿಂತ ಹನ್ನೆರಡು ವರ್ಷ ದೊಡ್ಡವಳಾದ ಅಮೃತಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಆಗ ಸೈಫ್‌ಗೆ ಇಪ್ಪತ್ತೊಂದು ವರ್ಷ. ಅಮೃತಾಗೆ ಮೂವತ್ತಮೂರು ವರ್ಷ. ಒಂದು ಫೋಟೋಶೂಟ್‌ನಲ್ಲಿ ಭೇಟಿಯಾದ ಅವರಿಬ್ಬರೂ ಪ್ರೀತಿಸಿದ್ದರು. ಪಾರ್ಟಿಗಳಿಗೆ ಜೊತೆಯಾಗಿ ಹೋದರು. 1991ರಲ್ಲಿ ಇಬ್ಬರೂ ಮದುವೆಯಾದರು. ಇಬ್ಬರು ಮಕ್ಕಳಾದರು- ಸಾರಾ ಅಲಿ ಖಾನ್‌ ಮತ್ತು ಇಬ್ರಾಹಿಂ ಅಲಿ ಖಾನ್‌. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು. 2004ರಲ್ಲಿ ಇಬ್ಬರಿಗೂ ಡೈವೋರ್ಸ್ ಆಯ್ತು.

ಇದಾದ ನಂತರ, ರೋಸಾ ಎಂಬ ಇಟಾಲಿಯನ್ ಡ್ಯಾನ್ಸರ್, ಮಾಡೆಲ್‌ ಜೊತೆಗೆ ಸೈಫ್‌ ಓಡಾಡಿದ. ಇಬ್ಬರೂ ಲಿವಿಂಗ್‌ ಟುಗೆದರ್‌ ಆರಂಭಿಸಿದರು. ಆದರೆ ಇದು ತುಂಬ ಕಾಲ ನಡೆಯಲಿಲ್ಲ.

2008ರಲ್ಲಿ ತಶಾನ್ ಫಿಲಂನಲ್ಲಿ ಆಕ್ಟಿಂಗ್ ಮಾಡುತ್ತಿದ್ದಾಗ ಸೈಫ್ ಮತ್ತು ಕರೀನಾ ಕಪೂರ್ ನಡುವೆ ಲವಿ ಡವಿ ಶುರುವಾಯಿತು. ಮೊದಲು ಕರೀನಾ ಬೆನ್ನು ಹಿಂದೆ ಬಿದ್ದವನು ಸೈಫ್. ಆಗ ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್‌ ಬಾಂಬೇ ಪುಟದಲ್ಲಿ ಕರೀನಾ ಸ್ವತಃ ಬರೆದುಕೊಂಡಳು- ನಾನು ವಿಫಲ ಆಗುತ್ತಿದ್ದೇನೆ ಅನಿಸಿದಾಗಲೆಲ್ಲ ಸೈಫ್ ನನಗೆ ಭದ್ರತೆ ಒದಗಿಸುತ್ತಾನೆ. ನಾನು ಇದಕ್ಕೂ ಮೊದಲು ಆತನನ್ನು ಭೆಟ್ಟಿಯಾಗಿದ್ದೆ. ಆದರೆ ತಶಾನ್ ಫಿಲಂ ಶೂಟ್‌ ಮಾಡುತ್ತಿದ್ದಾಗ ಏನೋ ಬದಲಾಯಿತು. ಆತ ತುಂಬ ಆಕರ್ಷಕನಾಗಿದ್ದ. ನಾವು ಲೇಹ್- ಲಡಾಕ್‌ನಲ್ಲಿ ಬೈಕ್‌ನಲ್ಲಿ ಓಡಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಏನೋ ಭದ್ರವಾದ ಬಾಂಡಿಂಗ್ ಇದೆ ಅನಿಸುತ್ತಿದೆ- ಹೀಗೆ ಬರೆದುಕೊಂಡಿದ್ದಳು ಕರೀನಾ.

ಕರೀನಾ ಧರಿಸಿರೋ ಶಿಬುಯಾ ಸಿಲ್ಕ್‌ ಜಾಕೆಟ್‌ ಭಾರೀ ದುಬಾರಿ..! 

ಕರೀನಾ, ಸೈಫ್‌ನ ಪ್ರಪೋಸಲ್ ಒಂದೇ ಸಲಕ್ಕೆ ಒಪ್ಪಿಕೊಳ್ಳಲಿಲ್ಲ. ಒಂದಲ್ಲ, ಎರಡಲ್ಲ, ಮೂರು ಬಾರಿ ಸೈಫ್‌ ಪ್ರಪೋಸಲ್ ನೀಡಿದ. ಮೊದಲು ಗ್ರೀಸ್‌ನಲ್ಲಿ, ಎರಡನೇ ಬಾರಿಗೆ ಲಡಾಕ್‌ನಲ್ಲಿ ಕೇಳಿದ್ದ. ಆಗ ಕರೀನಾ, ನಂಗೆ ನಿನ್ನ ಪೂರ್ಣ ವಿವರಗಳೇ ಗೊತ್ತಿಲ್ಲ. ನಾನು ನಿನ್ನ ಹ್ಯಾಗೆ ಮದುವೆಯಾಗಲಿ? ಎಂಬ ಪ್ರಶ್ನೆ ಕೇಳಿದ್ದಳು. ಮೂರನೇ ಬಾರಿಗೆ ಸೈಫ್‌ ಮದುವೆ ಪ್ರಸ್ತಾಪ ಮುಂದಿಟ್ಟಾಗ ಕರೀನಾ ಒಪ್ಪಿಕೊಂಡಳು. ಕರೀನಾ, ಸೈಫ್‌ನನ್ನು ಮದುವೆಯಾಗಲು ಮುಂದಾದಾಗ, ಆಕೆಯನ್ನು ಅನೇಕ ಮಂದಿ ಆಕೆಯ ಬಂಧುಗಳು, ಎಚ್ಚರಿಸಿದರು. ಆಕೆಯ ಅಕ್ಕ ಕರಿಷ್ಮಾ ಕಪೂರ್ ಕೂಡ ಎಚ್ಚರಿಕೆ ನೀಡಿದಳು. ಸೈಫ್ ಇಬ್ಬಿಬ್ಬರು ಮಹಿಳೆಯರೊಡನೆ ಸಂಸಾರ ನಡೆಸಿ, ಅದನ್ನು ಉಳಿಸಿಕೊಳ್ಳಲಾಗದೆ ಡೈವೋರ್ಸ್ ಪಡೆದವನು. ನಿನ್ನ ಜೊತೆಗೂ ಸುಖ ಸಂಸಾರ ನಡೆಸುತ್ತಾನೆ ಎಂಬ ಆಸೆ ಬೇಡ, ಹೀಗಾಗಿ ನಿನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡು ಎಂದು ಆಕೆಯನ್ನು ಎಚ್ಚರಿಸಿದರು.

 'ಕರೀನಾ ಸುಣ್ಣ, ಕರಿಷ್ಮಾ ಚೀಸ್'..! ಬೇಬೂ ಆ್ಯಕ್ಟಿಂಗ್ ಟೀಕಿಸಿದ ಹಿರಿಯ ನಟ 

ಈ ಕುರಿತು ಕರೀನಾ, ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲೂ ಹೇಳಿಕೊಂಡಿದ್ದರು. ತಾನು ಸೈಫ್‌ನನ್ನು ಮದುವೆಯಾಗಲು ಬಯಸಿದಾಗ, ಜನ, ಅವನನ್ನು ಹೇಗೆ ಮದುವೆಯಾಗುತ್ತೀ, ಅವನಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ, ಡೈವೋರ್ಸಿ ಎಂದೆಲ್ಲ ಹೆದರಿಸಿದ್ದರು. ಈಗ ಜನ ಮುಕ್ತವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಆದರೆ ಆಗ ಅಂಥ ಪರಿಸ್ಥಿತಿ ಇರಲಿಲ್ಲ- ಎಂದು ಕರೀನಾ ಹೇಳಿಕೊಂಡಿದ್ದರು.

ಕಡೆಗೂ ಕರೀನಾ ಸೈಫ್‌ನನ್ನು ಮದುವೆಯಾದರು. ಅವರಿಗೆ ಈಗ ತೈಮೂರ್‌ ಎಂಬ ಮುದ್ದಾದ ಮಗನೂ ಇದ್ದಾನೆ. ತೈಮೂರ್‌ ಈಗ ಇಂಟರ್ನೆಟ್‌ ಸೆನ್ಸೇಷನ್‌. ಇಬ್ಬರ ದಾಂಪತ್ಯದ ಬದುಕು ಸುಖವಾಗಿದೆ. ಸೈಫ್‌ನ ಈ ಮೊದಲಿನ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ, ಇಬ್ಬರೂ ಕರೀನಾಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಕರೀನಾ ಈಗ ಗರ್ಭಿಣಿ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. 

ಸೈಫ್ ಮತ್ತೊಂದು ಮುಖ ರಿವೀಲ್ ಮಾಡಿದ ಕರೀನಾ