ಅಮ್ಮ ಆಗ್ತಿದ್ದಾರೆ ಅನ್ನೋ ಸುದ್ದಿಯಿಂದಲೇ ಸದ್ಯ ಸುದ್ದಿಯಾಗಿರೋ ಬಾಲಿವುಡ್ ನಟಿ ಕರೀನಾ ಕಪೂರ್‌ ನಟನೆ ಬಗ್ಗೆ ಹಿರಿಯ ನಟ ಟೀಕೆ ಮಾಡಿದ್ದಾರೆ. ಬಾಲಿವುಡ್ ಬೇಬೂ ಎಲ್ಲರಿಗೂ ಇಷ್ಟ. ಬಾಲಿವುಡ್‌ನ ಕ್ಯೂಟ್ ನಟಿಯರಲ್ಲಿ ಕರೀನಾ ಕೂಡಾ ಒಬ್ಬರು.

ಆದರೆ ಎಲ್ಲರಿಗೂ ಕರೀನ ಇಷ್ಟವಾಗಲ್ಲ. ಈ ಹಿಂದೆ ನಟ ಬೋಬಿ ಡಿಯೋಲ್ ಕರೀನಾ ನಟನೆ ಬಗ್ಗೆ ಕಮೆಂಟ್ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಕರೀನಾ ನಟನೆಯನ್ನು ಸಹೋದರಿ ಕರಿಷ್ಮಾ ನಟನೆಗೆ ಹೋಲಿಸಿದ್ದಾರೆ.

ಕರೀನಾ ಮಾತ್ರವಲ್ಲ, ಗರ್ಭಿಣಿಯಾದರೂ ಶೂಟಿಂಗ್ ಮಾಡಿದ ನಟಿಯರಿವರು!

2001ರಲ್ಲಿ ಅಜನಬೀ ಸಿನಿಮಾಗಾಗಿ ಕರೀನಾ ಜೊತೆ ನಟಿಸಿದ್ದ ಡಿಯೋಲ್ ನಟಿಯ ನಟನಾ ಕೌಶಲ್ಯದ ಬಗ್ಗೆ ಮಾತನಾಡಿದ್ದಾರೆ. ಕರೀನಾ ತಮ್ಮ ಅಕ್ಕ ಕರಿಷ್ಮಾಗಿಂತ ಭಿನ್ನ. ಕರಿಷ್ಮಾರನ್ನು ಚೀಸ್ ಎಂದ ನಟ, ಕರೀನಾ ಅವರನ್ನು ಚಾಕ್ ಅಥವಾ ಸುಣ್ಣ ಎಂದಿದ್ದಾರೆ.

ಕರೀನಾ ಚಿಕ್ಕ ಹುಡುಗಿ ಇರುವಾಗಲೇ ನಾನು ನೋಡಿದ್ದೆ. ಕರೀಷ್ಮಾಳನ್ನು ನೋಡಲು ಕರೀನಾ ಅಮ್ಮನ ಜೊತೆ ಬರ್ತಿದ್ರು. ಆಗಲೂ ಆಕೆಗೆ ನಟಿಯಾಗುವ ಆಸೆ ಇತ್ತು ಎಂದಿದ್ದಾರೆ.

ಪತಿ ಸೈಫ್ ಬರ್ತ್‌ಡೇ ಪಾರ್ಟಿಯಲ್ಲಿ ಕರೀನಾ ಧರಿಸಿದ ಕಫ್ತಾನ್ ನೋಡೋಕಷ್ಟೇ ಸಿಂಪಲ್, ಬೆಲೆ ಮಾತ್ರ ದುಬಾರಿ

ಆಕೆ ಪ್ರತಿಭಾವಂತೆ. ಅಜ್‌ನಬೀಯಲ್ಲಿ ಆಕೆಯ ನಟನೆ ನೋಡಿ ಆಶ್ಚರ್ಯವಾಯ್ತು. ಆದರೆ ಕರೀಷ್ಮಾ ನಟನಾ ಕೌಶಲ್ಯದ ಅರ್ಧದಷ್ಟೂ ಕರೀನಾಗಿಲ್ಲ. ನಾನಿದನ್ನು ಆಕೆಗೆ ಹೇಳಿದ್ದೇನೆ ಕೂಡಾ. ಆದರೆ ಕರೀನಾ ಕಪೂರ್ ಬಂದರು ಎಂದಿದ್ದಾರೆ.