Sushmita Sen ಫೋಟೋ ನೋಡಿದ ಧರ್ಮೇಂದ್ರ ಫುಲ್ ಫಿದಾ!
ಸುಶ್ಮಿತಾ ಸೇನ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ತಮ್ಮ ಪೋಟೋ ಗ್ರೇಸ್‌ಫುಲ್ ಆಗಿದೆ. ಅದಕ್ಕೆ ಧರ್ಮೇಂದ್ರ ಹೇಳಿದ್ದೇನು?
ಸುಶ್ಮಿತಾ ಸೇನ್ (Sushmita Sen) ಟ್ವಿಟ್ಟರ್ (Twitter) ನಲ್ಲಿ ತಮ್ಮದೊಂದು ಚಂದದ ಫೋಟೋ ಹಾಕಿಕೊಂಡಿದ್ದಾರೆ. ಅದರಲ್ಲಿ ಆಕೆ ಕೊಂಚ ನೇರಳೆ ಕಲರ್‌ನ ಕೂಲಿಂಗ್ ಗ್ಲಾಸ್ ಏರಿಸಿಕೊಂಡು, ತಲೆ ಮೇಲೆ ಪಿಂಕ್ ಶಾಲ್ ಎಳೆದುಕೊಂಡು, ಡಾರ್ಕ್ ಬ್ಲೂ ಟಾಪ್ ಹಾಗೂ ತುಟಿಗೆ ಲೈಟಾಗಿ ಬಣ್ಣ ತೀಡಿಕೊಂಡು ಜಾರ್ಜಿಯಸ್ (Gorgeus) ಆಗಿ ಕಾಣಿಸುತ್ತಿದ್ದಾರೆ. ಆಕೆಯ ಗ್ಲಾಸ್‌ನಲ್ಲಿ ಪರ್ವತಗಳು ಪ್ರತಿಫಲಿಸುತ್ತಿವೆ. ಈ ಫೋಟೋ ನೋಡಿದರೆ ಯಾರೂ ಸುಶ್ಮಿತಾಗೆ 47 ವರ್ಷವಾಯ್ತು ಎಂದು ಹೇಳಲು ಸಾಧ್ಯವಿಲ್ಲ.
ಈ ಫೋಟೋದ ಜೊತೆಗೆ ಆಕೆ ಹಾಕಿರೋ ಕ್ಯಾಪ್ಷನ್- ''ಕುಣಿದಾಡೋ ಲೈಟ್‌ಗಳು, ನೇರಳೆ ಬಣ್ಣ ಮತ್ತು ಪ್ರತಿಬಿಂಬಿಸುವ ಪರ್ವತಗಳು! ಒಂದು ಸುಂದರ ಪ್ರಯಾಣ (Travel), ಚಂದದ ಸೆಲ್ಫಿ (Selfie) ಜೊತೆಗೆ..'' ಅಂತ. ಇದನ್ನು ನೋಡಿದ ನಟ ಧರ್ಮೇಂದ್ರ (Dharmendra) ಪ್ರತಿಕ್ರಿಯೆ ನೀಡಿರೋದು ಹೀಗೆ- ''ಗ್ರೇಟ್. ಇಂಥ ಪ್ರೀತಿಪೂರ್ವಕ, ಮಮತೆಯ ಸಂಗತಿಗಳನ್ನು ನೋಡೋದು ನನಗೆ ಅತ್ಯಂತ ಸಂತೋಷ ನೀಡುತ್ತೆ. ಜೀತೇ ರಹೋ..'' ಇದಕ್ಕೆ ಸುಶ್ಮಿತಾ ರಿಟ್ವೀಟ್ ಮಾಡಿ ನೀಡಿರುವ ಉತ್ತರ- ''ನಿಮಗೆ ಕುಣಿಯುವ ಹೃದಯದ ಮೂಲಕ ತುಂಬಾ ಪ್ರೀತಿ ಮತ್ತು ಗೌರವ ಸಲ್ಲಿಸುತ್ತೇನೆ. ಆಪ್ ಜೈಸಾ ದಿಲ್ ಸಬ್ ಕಾ ನಸೀಬ್ ಹೋ. ಈ ಆಶೀರ್ವಾದ ಸದಾ ಇರಲಿ..'' ಮತ್ತೊಂದು ಟ್ವೀಟ್‌ನಲ್ಲಿ ಸುಶ್ಮಿತಾಳನ್ನು ಧರ್ಮೇಂದ್ರ ಹೊಗಳಿರುವುದು ಹೀಗೆ- ''ಸುಶ್ಮಿತಾ- ತುಂಬಾ ಉದಾತ್ತ ಆತ್ಮವಿರುವವಳು.. ಧೈರ್ಯವಂತೆ ಹಾಗೂ ಸಾಮರ್ಥ್ಯವಂತೆ.''
Social Media ಯೂಸರ್ ಕೇಳಿದ ಪ್ರಶ್ನೆಗೆ ಕೋಪಗೊಂಡ ಸಮಂತಾ ರುತ್ ಪ್ರಭು!
ಧರ್ಮೇಂದ್ರ ಮತ್ತು ಸುಶ್ಮಿತಾ ಸೇನ್ ನಡುವಣ ಈ ಪ್ರೀತಿಯುತ ಸಂಭಾಷಣೆಗೆ ಹಿನ್ನೆಲೆಯಾಗಿ, ಅವರಿಬ್ಬರ ನಡುವೆ ಯಾವ ಬಗೆಯ ಆತ್ಮೀಯತೆಯಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೇಮಾಮಾಲಿನಿಯಂತೂ ಈ ಬಗ್ಗೆ ತಪ್ಪು ತಿಳಿದುಕೊಳ್ಳಲಾರರು. ಹಾಗೆಲ್ಲಾ ಇದ್ದರೆ ಧರ್ಮೇಂದ್ರ ಇಷ್ಟು ನೇರವಾಗಿ ಹೃದಯದ ಇಮೋಜಿ ಹಾಕಿ ಸಾರ್ವಜನಿಕವಾಗಿ ಟ್ವೀಟ್ ಮಾಡುತ್ತಲೇ ಇರಲಿಲ್ಲ. ಎರಡೂ ಫ್ಯಾಮಿಲಿಗಳ ನಡುವೆ ಆತ್ಮೀಯ ಭಾವವಿದೆ.
ಇತ್ತೀಚೆಗೆ ಸುಶ್ಮಿತಾ ಸೇನ, ತಮ್ಮ ಬಾಯ್‌ಫ್ರೆಂಡ್ ರೋಹ್ಮನ್ ಶಾಲ್ (Rohman Shawl) ಅವರಿಂದ ಬೇರ್ಪಟ್ಟಿದ್ದರು. ಇದನ್ನು ಘೋಷಿಸಿಕೊಂಡಿದ್ದರು ಕೂಡ. ನಾವಿನ್ನು ಮುಂದೆಯೂ ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಕೂಡ ಘೋಷಿಸಿಕೊಂಡಿದ್ದರು. ರೋಹ್ಮನ್ ಶಾಲ್, ಸುಶ್ಮಿತಾಗಿಂತ ವಯಸ್ಸಿನಲ್ಲಿ ಸಣ್ಣವನು. ಆದರೆ ಬೇರ್ಪಟ್ಟ ಬಳಿಕವೂ ಇವರಿಬ್ಬರೂ ಅಲ್ಲಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಮತ್ತೆ ಜೊತೆಯಾಗುತ್ತಾರೇನೋ ಎಂದು ಪಾಪರಾಜಿಗಳು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ ಕೂಡ. ಇದರ ನಡುವೆ ಆಗಿರುವ ಹೊಸ ಬೆಳವಣಿಗೆ ಎಂದರೆ, ತನ್ನ ಇಬ್ಬರು ಮಕ್ಕಳ ಜೊತೆಗೆ ಇನ್ನೊಂದು ಮಗುವನ್ನು ಸುಶ್ಮಿತಾ ಎತ್ತಿಕೊಂಡಿರುವುದು. ರೆನಿ ಹಾಗೂ ಅಲಿಶಾ ಎಂಬ ಇಬ್ಬರು ಸುಂದರ ಹೆಣ್ಣು ಮಕ್ಕಳನ್ನು ಪಾಲಿಸುತ್ತಿರುವ ಸುಶ್ಮಿತಾ, ಇನ್ನೊಂದು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
Gangubai Kathiawadi ಮೇರಿ ಜಾನ್ ಹಾಡು ರೀಲಿಸ್ ನಟನೊಂದಿಗೆ ಆಲಿಯಾ ಭಟ್ ರೊಮ್ಯಾನ್ಸ್!
ಮಾಜಿ ವಿಶ್ವ ಸುಂದರಿ ಸುಶ್ಮಿತಾ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಬೆಳೆಸುತ್ತಿದ್ದವರು. ಹಿರಿಯ ಮಗಳು ರೆನೀಗೆ 19 ವರ್ಷ, ಕಿರಿಯ ಅಲಿಸಾಗೆ ಹತ್ತು ವರ್ಷ. ಸುಶ್ಮಿತಾ ಕೇವಲ 24 ವರ್ಷದವರಿದ್ದಾಗ ರೆನೀಯನ್ನು ದತ್ತು ಪಡೆದರು. ಚಿಕ್ಕ ವಯಸ್ಸಿನಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳುವ ತನ್ನ ನಿರ್ಧಾರದ ಬಗ್ಗೆ ಮಾತನಾಡಿದ ಸೇನ್ ಹೇಳಿದ್ದು ಹೀಗೆ- “ನಾನು 24ನೇ ವಯಸ್ಸಿನಲ್ಲಿ ಮಾಡಿದ ಬುದ್ಧಿವಂತ ನಿರ್ಧಾರವೆಂದರೆ ತಾಯಿಯಾಗುವುದು. ಇದು ನನ್ನ ಜೀವನವನ್ನು ಸ್ಥಿರಗೊಳಿಸಿತು. ಇದು ಒಂದು ದೊಡ್ಡ ಯೋಗದಾನ ಮತ್ತು ಅದ್ಭುತ ಕ್ರಿಯೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ವರಕ್ಷಣೆಯಾಗಿತ್ತು. ಆ ಮೂಲಕ ನಾನು ನನ್ನನ್ನು ರಕ್ಷಿಸಿಕೊಂಡೆ."
ಸುಶ್ಮಿತಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ರಾಮ್ ಮಾಧವನ್ ಅವರ 'ಆರ್ಯ-2' ಚಿತ್ರದಲ್ಲಿ. ಇದರಲ್ಲಿ ಸುಶ್ಮಿತಾ ಅವರ ಪರ್‌ಫಾರ್ಮೆನ್ಸ್ ಬಗ್ಗೆ ಶ್ಲಾಘನೆ ಎಲ್ಲ ಕಡೆಯಿಂದ ವ್ಯಕ್ತವಾಗಿದೆಯಾದರೂ, ಹೊಸ ಪ್ರಾಜೆಕ್ಟುಗಳೇನೂ ಆಕೆಯ ಬಳಿ ಇದ್ದಂತಿಲ್ಲ.
Kareena Home: ಬಾಲಿವುಡ್ ಬೇಬೋ ಹೊಸ ಮನೆ ವಿನ್ಯಾಸ ನೋಡಿ!