ವಾಷಿಂಗ್ಟನ್‌ನ ಖಾಸಗಿ ಕಂಪನಿಯೊಂದು ಹಾರರ್ ಸಿನಿಮಾ ವೀಕ್ಷಿಸಿದರೆ ಭಾರೀ ಮೊತ್ತ ನೀಡುವುದಾಗಿ ಆಫರ್ ಪ್ರಕಟಿಸಿದೆ. 

ಇದ್ಯಾವ ಮಹಾ ಹಾರರ್ ಸಿನಿಮಾ? ನಾನು ನೋಡ್ತೀನಿ, ನನಗೆ ಭಯವಿಲ್ಲ ಎಂದು ಹೇಳುವವರು ಈ ಚಾಲೆಂಜ್‌ನ ಸ್ವೀಕರಿಸಬೇಕು. ಒಂದೆರಡು ಸಿನಿಮಾ ಅಲ್ಲ 10 ದಿನದಲ್ಲಿ 13 ದೆವ್ವದ ಸಿನಿಮಾಗಳನ್ನು ನೋಡಬೇಕು. 

ವಾಷಿಂಗ್ಟನ್‌ನ ಫೈನಾನ್ಸ್ ಬುಝ್ ಹೆಸರಿನ ಕಂಪನಿ ಭಾರೀ ಮೊತ್ತದ ಆಫರ್ ಪ್ರಕಟಿಸಿದೆ. ಅಕ್ಟೋಬರ್‌ ತಿಂಗಳಲ್ಲಿ ನಡೆಯುವ ಈ 10 ದಿನದ ಚಾಲೆಂಜ್‌ನಲ್ಲಿ ಒಟ್ಟು 13 ದೆವ್ವದ ಸಿನಿಮಾಗಳನ್ನು ನೋಡಬೇಕು, ನೋಡಿದವರಿಗೆ 1,300 ಡಾಲರ್ ಅಂದರೆ ಅಂದಾಜು 95 ಸಾವಿರ ರೂ. ನೀಡುವುದಾಗಿ ಹೇಳಿದೆ.

ಹಾರರ್ ಚಿತ್ರದ ಮೂಲಕ ಹಾಲಿವುಡ್‌ ಚಿತ್ರರಂಗಕ್ಕೆ ಹಾರಿದ ನಟ ಪ್ರಭಾಸ್?

ಕಂಪನಿ ಹೀಗೆ ಚಾಲೆಂಜ್ ನೀಡಲು ಕಾರಣವೇನು?
ಕೆಲವೊಂದು ಹಾರರ್ ಸಿನಿಮಾಗಳು ನಿಜಕ್ಕೂ ಭಯ ಹುಟ್ಟಿಸುವಂತಿರುತ್ತದೆ. ಆದರೆ ಇನ್ನೂ ಕೆಲವು ಹಾರರ್ ಹೆಸರಿನಲ್ಲಿ ಹಣ ಸಂಪಾದಿಸಿ ಮೋಸ ಮಾಡುತ್ತಾರೆ. ದುಬಾರಿ ಬಜೆಟ್ ಹಾಗೂ ಕಡಿಮೆ ಬಜೆಟ್ ಸಿನಿಮಾಗಳ ಪೈಕಿ ಯಾವುದು ಜಾಸ್ತಿ ಭಯ ಮೂಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಇಂಥದ್ದೊಂದು ಆಫರ್ ನೀಡಲಾಗಿದೆ. ಹೀಗಾಗಿ ಹಾರರ್ ಸಿನಿಮಾಗಳು ಒಬ್ಬ ವ್ಯಕ್ತಿಯ ಮೇಲೆ ಯಾವ ರೀತಿ ಭಯ ಮೂಡಿಸುತ್ತದೆ ಎಂದು ತಿಳಿದುಕೊಳ್ಳುವುದು ಕಂಪನಿಯ ಉದ್ದೇಶ. 

ಒಟ್ಟು 13 ಹಾರರ್‌ ಸಿನಿಮಾ ನೋಡಿದ ನಂತರ ಆ ವ್ಯಕ್ತಿಯ ಹೃದಯ ಬಡಿತವನ್ನು ಚೆಕ್ ಮಾಡಲಾಗುತ್ತದೆ.