ಮೋಹನ್ ಬಾಬು ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮಕ್ಕಳಾದ ಮನೋಜ್ ಮತ್ತು ವಿಷ್ಣು ನಡುವೆ ಜಗಳ ನಡೆದಿದೆ. ಮನೋಜ್ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ವಿಷ್ಣು, ಕೌಟುಂಬಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸಲು ಇಷ್ಟವಿಲ್ಲ ಎಂದಿದ್ದಾರೆ. ಮಾಧ್ಯಮ ವರದಿಗಾರನೊಬ್ಬರ ಮೊಬೈಲ್ ಕಿತ್ತು ಬಿಸಾಕಿದ ಘಟನೆ ನಡೆದಿದ್ದು, ನಂತರ ಕುಟುಂಬ ಕ್ಷಮೆ ಕೇಳಿದೆ.
ಕೆಲವು ದಿನಗಳ ಹಿಂದೆ ತೆಲುಗು ನಟ ಮೋಹನ್ ಬಾಬು ಕುಟುಂಬದಲ್ಲಿ ದೊಡ್ಡ ಜಗಳವಾಗಿದೆ. ಮೋಹನ್ ಬಾಬುಗೆ ಮೂವರು ಮಕ್ಕಳು- ಮನೋಜ್, ವಿಷ್ಣು ಮತ್ತು ಲಕ್ಷ್ಮಿ. ಹಿರಿಯ ಮಗ ಮನೋಜ್ ಮತ್ತು ವಿಷ್ಣು ನಡುವೆ ಅಸ್ತಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ಸಮಯದಲ್ಲಿ ಕಿರಿಯ ಪುತ್ರ ವಿಷ್ಣು ಪರ ನಿಂತುಕೊಂಡ ಮೋಹನ್ ಬಾಬು ಮಗನನ್ನು ಮನೆಯಿಂದ ಹೊರ ದಬ್ಬಿ ಬೀದಿ ರಂಪಾಟ ಮಾಡಿದ್ದರು. ರಸ್ತೆಯಲ್ಲಿ ಅಪ್ಪ ಮಕ್ಕಳು ಜೋರಾಗಿ ಜಗಳ ಮಾಡಿಕೊಂಡು. ನಾನು ಆಸ್ತಿ ಕೇಳಿಲ್ಲ ಆದರೂ ತಂದೆ ಕಿರಿಮಗನನ್ನು ನಂಬಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮನೋಜ್ ದೂರು ನೀಡಿದ್ದ. ಈಗ ಈ ವಿಚಾರದ ಬಗ್ಗೆ ವಿಷ್ಣು ಸ್ಪಷ್ಟನೆ ಕೊಟ್ಟಿದ್ದಾರೆ.
'ಎಲ್ಲಾ ಕುಟುಮಬಗಳಲ್ಲಿ ಏನಾದರೂ ಸಮಸ್ಯೆಗಳು ಇರುತ್ತದೆ. ನಮ್ಮ ತಂದೆ ಹಾಗೂ ನಮಗಿರುವ ಜನಪ್ರಿಯತೆ ಕಾರಣಕ್ಕೆ ಈ ವಿಚಾರ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮೋಹನ್ ಬಾಬು ಕುಟುಂಬ ಬೀದಿಯಲ್ಲಿ ಜಗಳ ಮಾಡುವಾಗ ಖಾಸಗಿ ಮಾಧ್ಯಮ ವರದಿಗಾರನೊಬ್ಬ ಅಡ್ಡ ಬಂದಿದ್ದ ಎಂಬ ಕಾರಣ ಕೈಯಲ್ಲಿದ್ದ ಮೈ ಕಿತ್ತು ಬಿಸಾಡಿದ್ದಾರೆ. ಅದಾದ ಮೇಲೆ ಇಡೀ ಫ್ಯಾಮಿಲಿ ವಿಡಿಯೋ ಮಾಡಿ ಪ್ರತಿಯೊಬ್ಬರ ಬಳಿ ಕ್ಷಮೆ ಕೇಳಿದ್ದಾರೆ. ಈ ವಿಚಾರದಲ್ಲಿ ಯಾರು ಸರಿ ಯಾರು ತಪ್ಪು ಎಂಬುದು ಹೇಳಲು ಆಗಲ್ಲ. ಅದರೆ ಮೊದಲಿನಿಂದಲೂ ವಿಷ್ಣು ಮಂಚು ಮತ್ತು ಮೋಹನ್ ಬಾಬು ಹಲವು ವ್ಯವಹಾರಗಳನ್ನು ಒಟ್ಟಿಗೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಆಸ್ತಿ ವಿಚಾರವಾಗಿ ಜಗಳ ಮಾಡಿರಬಹುದು.
'ನಾ ನಿನ್ನ ಬಿಡಲಾರೆ' ಅಂತಿದ್ದಾರೆ ನಟಿ ನೀತಾ ಅಶೋಕ್; ನಿಜಕ್ಕೂ ಏನ್ ಅಯ್ತು?
'ನನಗೆ ತಂದೆ, ತಾಯಿ, ಗುರು ಮತ್ತು ದೈವ ಮೊದಲು. ಯಾರೇ ಇದ್ದರೂ ಈ ನಾಲ್ಕು ನನಗೆ ಮುಖ್ಯ. ಇಂತಹ ಘಟನೆಗಳು ಮುಂದೆ ನಡೆಯಲ್ಲ ಅನಿಸುತ್ತದೆ. ದುರಾದೃಷ್ಟವಶಾತ್ ಹೀಗೆಲ್ಲಾ ನಡೆದು ಹೋಗಿದೆ. ಮುಂದೆ ಕೂಡೆ ನಡೆಯಬಹುದು. ಅದರೆ ನಾನು ಈ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಪಡುವುದಿಲ್ಲ. ನಾನು ತುಂಬಾ ಪ್ರೈವೇಟ್ ವ್ಯಕ್ತಿ. ನಾನು ಈ ಬಗ್ಗೆ ಹೇಳಿಕೆ ಕೊಡುವುದಿಲ್ಲ. ಯಾರು ಎಷ್ಟೇ ಪ್ರಚೋದಿಸಿದ್ದರೂ ಅಷ್ಟೆ ನನ್ನ ಉತ್ತರ. ನಮ್ಮ ಕುಟುಂಬದ ವಿಚಾರ ಸಾರ್ವಜನಿಕವಾಗಿ ಮಾತನಾಡಲು ಇಷ್ಟ ಪಡುವುದಿಲ್ಲ'ಎಂದು ಖಾಸಗಿ ಟಿವಿ ಸಂದರ್ಸನದಲ್ಲಿ ವಿಷ್ಣು ಮಂಚು ಹೇಳಿದ್ದಾರೆ.
ಗುರು..ನಾನು ಕಷ್ಟ ಪಟ್ಟು ದುಡಿದು ಖರ್ಚು ಮಾಡ್ತೀನಿ; ತಿರ್ಪೆ ಶೋಕಿ ಎಂದು ಕಾಮೆಂಟ್
