Asianet Suvarna News Asianet Suvarna News

ವಿಜಯಲಕ್ಷ್ಮೀ ದರ್ಶನ್ ಮತ್ತೆ ಬಲಿಪಶು! ಮದುವೆಯಾದಾಗಿನಿಂದ ತನ್ನದಲ್ಲದ ತಪ್ಪಿಗೆ ನೋವುಣ್ಣುತ್ತಲೇ ಬಂದ ನಟನ ಪತ್ನಿ

ದರ್ಶನ್ ವಿಜಯಲಕ್ಷ್ಮೀ ಮದುವೆಯಾದಾಗ ದರ್ಶನ್‌ಗೆ ದುಡಿಮೆ ಇರಲಿಲ್ಲ. ಆಗ ತಾನೇ ಗಂಡನನ್ನು, ಕುಟುಂಬವನ್ನು ಪೊರೆದವರು ವಿಜಯಲಕ್ಷ್ಮೀ. ಆದರೆ ಇದಕ್ಕೆ ಅವರಿಗೆ ಸಿಕ್ಕಿದ ಪ್ರತಿಫಲವಾದರೂ ಏನು ಗೊತ್ತಾ?

Vijayalakshmi Darshan Marriage Life Controversies Struggles
Author
First Published Jun 12, 2024, 11:55 AM IST

ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ ನಟ  ದರ್ಶನ್‌ದೇ ಸುದ್ದಿ. ತನ್ನ ಪ್ರೇಯಸಿಗೆ ಅಶ್ಲೀಲ ಮೆಸೇಜ್ ಕಳಿಸಿದ ಕಾರಣಕ್ಕೆ ಅಭಿಮಾನಿಯನ್ನೇ ಕೊಲೆ ಮಾಡಿದ ಆರೋಪಕ್ಕೆ ತುತ್ತಾದ ದರ್ಶನ್ ಇದೀಗ ಬಂಧನಕ್ಕೊಳಗಾಗಿದ್ದಾರೆ. ಇತ್ತ ಅವರ ಪತ್ನೀ ವಿಜಯಲಕ್ಷ್ಮೀ ಈ ಸೋಷಿಯಲ್ ಮೀಡಿಯಾ ಸಹವಾಸವೇ ಬೇಡ ಅಂತ ಸೋಷಿಯಲ್ ಮೀಡಿಯಾಕ್ಕೆ ಗುಡ್‌ ಬೈ ಹೇಳಿದ್ದಾರೆ. ಇನ್‌ಸ್ಟಾಗ್ರಾಂ ಅಲ್ಲಿ ತನ್ನ ಪ್ರೊಫೈಲ್ ಫೋಟೋವನ್ನ ಡಿಲೀಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ದರ್ಶನ್‌ ಸೇರಿ ಇತರರನ್ನು ಅನ್‌ಫಾಲೋ ಮಾಡಿದ್ದು, ಈಗ ಝೀರೋ ಫಾಲೋವಿಂಗ್‌ ಹೊಂದಿದ್ದಾರೆ. ಉಳಿದಂತೆ ಹಳೆಯ ಇನ್‌ಸ್ಟಾಗ್ರಾಂ ಸ್ಟೋರಿಗಳು ಹಾಗೆಯೇ ಇವೆ. ಆದರೆ, ಇನ್‌ಸ್ಟಾಗ್ರಾಂ ಹೈಲೈಟ್‌ ವಿಭಾಗವನ್ನು ಡಿಲೀಟ್‌ ಮಾಡಿದ್ದಾರೆ. ಯಾಕೋ ಸೋಷಿಯಲ್ ಮೀಡಿಯಾದಿಂದ ಇಷ್ಟೆಲ್ಲ ರಾದ್ಧಾಂತ ಆಗಿರೋದು ನಟನ ಪತ್ನಿಗೆ ರೇಜಿಗೆ ತರಿಸಿದಂತಿದೆ.

ಹಾಗೆ ನೋಡಿದರೆ ವಿಜಯಲಕ್ಷ್ಮೀ ತನ್ನ ವೈವಾಹಿಕ ಜೀವನದಲ್ಲಿ ಬಲಿಪಶು ಎಂದೇ ಹೇಳಬಹುದು. ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರದು ಲವ್‌ ಮ್ಯಾರೇಜ್. ಆಪ್ತರು ಹೇಳುವ ಪ್ರಕಾರ ಇವರಿಬ್ಬರ ಮದುವೆ ಆಗೋ ಹೊತ್ತಿಗೆ ದರ್ಶನ್‌ ಕೆಲಸ, ಸಂಪಾದನೆಯಿಲ್ಲದೇ ಕೂತಿದ್ದರು. ವಿಜಯಲಕ್ಷ್ಮೀ ಕೆಲಸಕ್ಕೆ ಹೋಗಿ ಕಷ್ಟಪಟ್ಟು ದುಡಿದು ಗಂಡನನ್ನು, ಸಂಸಾರವನ್ನು ಸಾಕುತ್ತಿದ್ದರು. ಗಂಡ ಆತನ ಇಷ್ಟದ ನಟನಾ ವೃತ್ತಿಯಲ್ಲಿ ಬಹಳ ಎತ್ತರಕ್ಕೆ ಏರಬೇಕು ಎಂದು ಹಾರೈಸಿದ್ದರು. ಗಂಡನ ಆಸಕ್ತಿಗೆ ತನ್ನಿಂದಾದ ಸಹಕಾರ ನೀಡುತ್ತ ಬಂದಿದ್ದರು. ದರ್ಶನ್ ಲೈಫು (Darshan Life), ವೈವಾಹಿಕ ಬದುಕು (Married Life) ಒಂದು ಹಂತದವರೆಗೆ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಹಣ, ಕೀರ್ತಿ (Money and Fame) ಎಲ್ಲ ಎತ್ತರೆತ್ತರಕ್ಕೆ ಕೊಂಡೊಯ್ಯಿತೋ ಆಗ ಬೇರೆ ಅಭ್ಯಾಸಗಳೂ ಸೇರಿಸಿಕೊಂಡವು. ಒಂದು ಹಂತದಲ್ಲಿ ಪವಿತ್ರಾ ಗೌಡ ಎಂಬ ಹೆಣ್ಣುಮಗಳು ಇವರ ಬದುಕಿನಲ್ಲಿ ಬಂದಳು. ಆಕೆಗೂ ಮದುವೆಯಾಗಿತ್ತು. ದರ್ಶನ್‌ಗೂ ಮದುವೆಯಾಗಿತ್ತು. ಆದರೂ ನಡುವೆ ಸಂಬಂಧ ಏರ್ಪಟ್ಟಿತು.

ದರ್ಶನ್​ ಬಂಧನ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪತಿಯನ್ನು ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ವಿಜಯಲಕ್ಷ್ಮಿ!

ಅಲ್ಲಿಯವರೆಗೆ ಹೆಂಡತಿ ಪಟ್ಟ ಕಷ್ಟ, ಆಕೆ ತನ್ನ ಬೆಳವಣಿಗೆಗೆ ನೀಡಿದ ಸಹಕಾರ ಎಲ್ಲವನ್ನೂ ಕಡೆಗಣಿಸಿ ದರ್ಶನ್ ಪವಿತ್ರಾ ಗೌಡ ಸ್ನೇಹ ಮಾಡಿದರು. ಇದನ್ನು ಪ್ರಶ್ನಿಸಿದ್ದೇ ನೆವವಾಗಿ ಅಷ್ಟೆಲ್ಲ ಒತ್ತಾಸೆಯಾಗಿ ನಿಂತ ಪತ್ನಿಯ ಮೇಲೇ ಮಾರಣಾಂತಿಕವಾಗಿ ಹಲ್ಲೆ ಮಾಡಲೂ ಹೇಸಲಿಲ್ಲ ದರ್ಶನ್. ವಿಜಯಲಕ್ಷ್ಮೀ ಆಸ್ಪತ್ರೆ ಸೇರುವಂತಾಯ್ತು. ಇಲ್ಲೂ ಏನೇನೋ ಬೆಳವಣಿಗೆಗಳು ನಡೆದು ಡಿವೋರ್ಸ್ ನಿಂದ ಹಿಂತೆಗೆಯುವಂತಾಯ್ತು. ಹೀಗೇ ಒಂದಿಷ್ಟು ಕಾಲ ನಡೆದು ಆ ಬಳಿಕ ದರ್ಶನ್ ಪತ್ನಿ ಜೊತೆ ಕೊಂಚ ಉತ್ತಮ ಬಾಂಧವ್ಯಕ್ಕೆ ಮುಂದಾದರು ಎನ್ನಲಾದರೂ ಹೆಂಡತಿ ಮೇಲೆ ಹಲ್ಲೆ, ಕೆಟ್ಟ ಬೈಗುಳ ನಡೆದೇ ಇತ್ತು.

ಇದೀಗ ತನ್ನ ಅಭಿಮಾನಿಯದ್ದೇ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಕಾನೂನು ತಜ್ಞರು ಹೇಳುವ ಪ್ರಕಾರ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇಲ್ಲೂ ಏನೂ ತಪ್ಪು ಮಾಡದ ವಿಜಯಲಕ್ಷ್ಮೀ ವಿನಾಕಾರಣ ಬಲಿಪಶುವಾದಂತಾಗಿದೆ. ಮೃತಪಟ್ಟ ರೇಣುಕಾಸ್ವಾಮಿಗೆ ತಾನು ಅಭಿಮಾನಿಸುವ ದರ್ಶನ್ ಫ್ಯಾಮಿಲಿ ಚೆನ್ನಾಗಿರಬೇಕು, ತನ್ನ ನೆಚ್ಚಿನ ನಟ ಆತನ ಪತ್ನಿಯ ಜೊತೆಗೆ ಚೆನ್ನಾಗಿ ಬದುಕಬೇಕು ಎಂಬ ತೀವ್ರ ಆಸೆ ಇತ್ತು, ಅದಕ್ಕಾಗಿ ಈತ ತನ್ನ ನೆಚ್ಚಿನ ನಟನ ಬದುಕನ್ನು ಹಾಳು ಮಾಡಿದಳು ಎಂದು ಪವಿತ್ರಾ ಗೌಡನಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎನ್ನಲಾಗಿದೆ.

ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ: ದರ್ಶನ್‌ ಸಿಟ್ಟಿಗೇಳಲು ಇದೇ ಕಾರಣವಂತೆ!

ಆದರೆ ಚಿತ್ರದುರ್ಗದ ಯಾವುದೋ ಮೂಲೆಯಲ್ಲಿ ಕೂತು ತಾನು ಮಾಡುವ ಮೆಸೇಜ್ ತನ್ನ ಬದುಕನ್ನೇ ಕೊನೆಗೊಳಿಸುತ್ತದೆ ಎಂಬ ಸಣ್ಣ ಕಲ್ಪನೆಯೂ ಆತನಿಗೆ ಇರಲಿಲ್ಲ ಎನ್ನಲಾಗಿದೆ. ಆದರೆ ಆತನ ಈ ದುಷ್ಕೃತ್ಯವೇ ನೆಪವಾಗಿ ಆತನ ಕೊಲೆಯಾಗಿದೆ. ಇತ್ತ ಕೊಲೆ ಮಾಡಿದವರು ಜೈಲುಪಾಲಾಗಿದ್ದಾರೆ. ತನ್ನ ಲೈಫು ಇಂದಲ್ಲ ನಾಳೆ ಚೆನ್ನಾಗಾಗಬಹುದು ಎಂಬ ಆಸೆಯಲ್ಲಿ ದಿನ ದೂಡುತ್ತಿದ್ದ ವಿಜಯಲಕ್ಷ್ಮೀ ಅಂಥವರಿಗೆ ಮತ್ತೆ ನೋವು ಮುಂದುವರಿಕೆಯಾಗಿದೆ.

Latest Videos
Follow Us:
Download App:
  • android
  • ios