ಲೋಕೇಶ್ ಕನಗರಾಜ್ ಅವರ ಮಾಸ್ಟರ್‌ನಲ್ಲಿ ಹಿಟ್ ಪರ್ಫಾರ್ಮೆನ್ಸ್ ಕೊಟ್ಟ ವಿಜಯ್ ಅವರು ಏಪ್ರಿಲ್ 6 ರಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂದಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಿಂದ ವಿಜಯ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ನಟ ದಳಪತಿ 65 ರ ಶೂಟಿಂಗ್‌ಗಾಗಿ ಜಾರ್ಜಿಯಾಗೆ ತೆರಳಿದ್ದಾರೆ.

ದಳಪತಿ 65: ವಿಜಯ್ ಜೊತೆ ನಟಿಸೋಕೆ ಇಷ್ಟೊಂದು ಸಂಭಾವನೆ ಕೇಳಿದ್ರಾ ಪೂಜಾ ?

ದಳಪತಿ ವಿಜಯ್ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾನ ಕೇಂದ್ರಕ್ಕೆ ಬೈಸಿಕಲ್‌ನಲ್ಲಿ ಬಂದದ್ದು ಸುದ್ದಿಯಾಗಿತ್ತು. ಮತ ಚಲಾಯಿಸಿದ ನಂತರ, ಏಪ್ರಿಲ್ 6 ರಂದು ಸಂಜೆ ಅವರನ್ನು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಪ್ಪು ಮತ್ತು ಬಿಳಿ ಚೆಕ್ಸ್ ಟೀ ಶರ್ಟ್ ಧರಿಸಿದ್ದರು.

ದಳಪತಿ 65 ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿರುವ ಅವರ ಮುಂಬರುವ ಚಿತ್ರದ ಚಿತ್ರೀಕರಣಕ್ಕಾಗಿ ಅವರು ಜಾರ್ಜಿಯಾಕ್ಕೆ ತೆರಳಿದ್ದಾರೆ. ನೆಲ್ಸನ್ ದಿಲಿಪ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್‌ಗೆ ಪೂಜಾ ಹೆಗ್ಡೆ ಜೋಡಿಯಾಗಲಿದ್ದಾರೆ.