ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾಸ್ಟರ್ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಪೊಂಗಾಲ್ ಸಂಭ್ರಮದ ನಡುವೆಯೇ ಜನರು ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾ ನೋಡಿ ಆನಂದಿಸಲಿದ್ದಾರೆ. ಹೊಸ ವರ್ಷದ ಮೊದಲ ತಿಂಗಳಲ್ಲಿ 13ರಂದು ಸಿನಿಮಾ ರಿಲೀಸ್ ಆಗಲಿದೆ.

ಹೊಸ ಪೋಸ್ಟರ್ ಜೊತೆ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಲೇಟೆಸ್ಟ್ ಪೋಸ್ಟ್‌ನಲ್ಲಿ ವಿಜಯ್ ಹಾಗೂ ವಿಜಯ್ ಸೇತುಪತಿ ಮುಖಾಮುಖಿಯಾಗಿದ್ದಾರೆ. ಮುಖದಲ್ಲಿ ಗಾಯಗಳಾಗಿರುವ ಇಬ್ಬರು ವಿಜಯ್ ಕೂಡಾ ಪರಸ್ಪರ ನೋಡುತ್ತಿರುವ ಪೋಸ್ಟರ್ ವೈರಲ್ ಆಗಿದೆ.

ಮತ್ತೊಮ್ಮೆ ಹಿಂದಿ ಚಿತ್ರದಲ್ಲಿ ವಿಜಯ್ ಸೇತುಪತಿಗೆ ಅವಕಾಶ; ಇದು ತಮಿಳಿನದ್ದೇ ರೀಮೇಕ್?

ಚಿತ್ರಮಂದಿರಗಳಲ್ಲಿ ಮಾಸ್ಟರ್ ಅನ್ನು ಬಿಡುಗಡೆ ಮಾಡಲು ಸರ್ಕಾರದ ಬೆಂಬಲವನ್ನು ಪಡೆಯಲು ವಿಜಯ್ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿದ್ದರು.

ಈ ಭೇಟಿಯ ಕೆಲವೇ ದಿನಗಳ ನಂತರ ಬಿಡುಗಡೆ ದಿನಾಂಕ ರಿವೀಲ್ ಮಾಡಿದ ಚಿತ್ರತಂಡ. ರಾಜ್ಯದ ಚಿತ್ರಮಂದಿರಗಳು ತಮ್ಮ ಗರಿಷ್ಠ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ವಿಜಯ್ ಸಿಎಂಗೆ ಮನವಿ ಮಾಡಿದರು. ಪ್ರಸ್ತುತ, ಚಿತ್ರಮಂದಿರಗಳು COVID-19 ಸುರಕ್ಷತಾ ಪ್ರೋಟೋಕಾಲ್ ಅನ್ನು ಅನುಸರಿಸಿ ಅವುಗಳ ನೈಜ ಸಾಮರ್ಥ್ಯದ ಶೇಕಡಾ 50 ರೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ.