ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್, ಮಾಸ್ ಹೀರೋ ವಿಜಯ್ ಸೇತುಪತಿ ಬಾಲಿವುಡ್‌ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಸಾಮಾನ್ಯವಾಗಿ ಸೌತ್ ಝೋನ್ ನಟ-ನಟಿಯರು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಅಲ್ಲೇ ನೆಲೆ ಉಳುವುದು ಕಡಿಮೆ ಆದರೆ ಅದೇ ಪದೇ ಪದೇ ಅವಕಾಶ ಪಡೆದುಕೊಳ್ಳುತ್ತಿರುವ ವಿಜಯ್‌ಗೆ ಅಭಿಮಾನಿಗಳು ಜೈಕಾರ ಕೂಗಿದ್ದಾರೆ.

ಸ್ಪಿನ್ ಮಾಂತ್ರಿಕ ಮುರಳೀಧರನ್ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್, ಅಧೀಕೃತ ಘೋಷಣೆ! 

ತಮಿಳಿನ ಸೂಪರ್ ಹಿಟ್ ಸಿನಿಮಾ 'ಮಾನಗರಂ' ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದೆ. ತಮಿಳಿನಲ್ಲಿ ಇದನ್ನು ಲೋಕೇಶ್ ಕನಕರಾಜ್‌ ನಿರ್ದೇಶಿಸಿದ್ದರು. ಹಿಂದಿಯಲ್ಲಿ ಸಂತೋಶ್ ಶಿವನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಅತ್ಯಂತ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಅಭಿನಯಿಸುವುದಕ್ಕೆ ಅವಕಾಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. 

ವಿಜಯ್ ಸೇತುಪತಿ ಸಕತ್ ಹವಾ; ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ..! 

ವಿಜಯ್ ಸೇತುಪತಿ  ಸಹಿ ಮಾಡಿದ ಮೊದಲ ಬಾಲಿವುಡ್ ಚಿತ್ರದಲ್ಲಿ ಅಮೀರ್‌ ಖಾನ್‌ ಜೊತೆಯಾಗಿದ್ದರು.  ಇಂಗ್ಲೀಷ್‌ನ ಫಾರೆಸ್ಟ್‌ ಗಂಫ್‌ ಸಿನಿಮಾವನ್ನು ಲಾಲ್‌ ಸಿಂಗ್ ಛಡ್ಡಾ ಎಂದು ರೀಮೇಕ್ ಮಾಡಲಾಗುತ್ತಿದೆ.  ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಇನ್ನು ವಿಜಯ್ ದಳಪತಿ ಜೊತೆ ಅಭಿನಯಿಸಿರುವ ಮಾಸ್ಟರ್ ಸಿನಿಮಾ ರಿಲೀಸ್‌ಗೆ ಕಾಯುತ್ತಿದೆ. ಸೌತ್‌ ಇಂಡಿಯಾ ಬ್ಯುಸಿ ಸ್ಟಾರ್ ಆಗಿರುವ ವಿಜಯ್ ಸೇತುಪತಿ ಕೈಯಲ್ಲಿ ಈಗಾಗಲೆ  ಮತ್ತಯ್ಯ ಮುರಳಿಧರನ್ ಬಯೋಗ್ರಾಫಿ,  ಕಡೈಸಿ ವ್ಯವಸಾಯಿ ಸೇರಿದಂತೆ 10 ಸಿನಿಮಾಗಳಿದೆ ಎನ್ನಲಾಗಿದೆ.