Asianet Suvarna News Asianet Suvarna News

Vijay Deverakonda ಅಂಗಾಂಗ ದಾನ ಮಾಡಲು ವಿಜಯ್ ನಿರ್ಧಾರ; ಜನರಿಂದ ಟೀಕೆ ತಪ್ಪಿದ್ದಲ್ಲ

ಆಗರ್ನ್ ಡೊನೇಟ್‌ ಪತ್ರಗಳಿಗೆ ಸಹಿ ಹಾಕಿದ ವಿಜಯ್ ದೇವರಕೊಂಡ. ಮಹತ್ವದ ಕಾರ್ಯ ಮೆಚ್ಚಿಕೊಂಡ ಅಪ್ಪು ಅಭಿಮಾನಿಗಳು...

Vijay Deverakonda signs Organ donation form netizens laud him vcs
Author
First Published Nov 17, 2022, 5:23 PM IST

ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ  ವಿಜಯ್ ದೇವರಕೊಂಡ  ಕಳೆದ ಎರಡು ಮೂರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೇತ್ರ ದಾನ, ರಕ್ತ ದಾನ ಮತ್ತು ಅಂಗಾಂಗ ದಾನ ಮಹತ್ವವನ್ನು ಸಾರಿದ್ದಾರೆ. ಇತ್ತೀಚಿಗೆ ಆಸ್ಪತ್ರೆ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡುವುದಾಗಿ ವಿಜಯ್ ಮತ್ತು ಅವರ ತಾಯಿ ಮಾತು ಕೊಟ್ಟು ಪತ್ರಕ್ಕೆ ಸಹಿ ಮಾಡಿದ್ದಾರೆ. ಪತ್ರಕ್ಕೆ ಸಹಿ ಹಾಕಿರುವ ಕಾರಣ ತಮ್ಮ ಅಂಗಾಂಗವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ವಿಜಯ್ ನಿರ್ಧಾರವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ ಅದರಲ್ಲೂ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. 

ಪವರ್ ಸ್ಟಾರ್, ಕರ್ನಾಟಕ ರತ್ನ ಡಾ ಪುನೀತ್ ರಾಜ್‌ಕುಮಾರ್ ಅಗಲಿದ ನಂತರ ಎಲ್ಲಾ ಭಾಷೆ ಸ್ಟಾರ್ ನಟ-ನಟಿಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಪ್ಪು ಕಣ್ಣು 8 ಜನಕ್ಕೆ ಉಪಯೋಗವಾದ ಕಾರಣ ಅದೆಷ್ಟೋ ಜನರು ನೇತ್ರದಾನಕ್ಕೆ ಮುಂದಾದರು ಅಪ್ಪು ಸಮಾದಿಗೆ ಭೇಟಿ ನೀಡಿದ ನಂತರ ವಿಜಯ್ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಅಪ್ಪು ಅಭಿಮಾನಿಗಳು ಬೇಷ್ ಎಂದಿದ್ದಾರೆ. 

Vijay Deverakonda signs Organ donation form netizens laud him vcs

'ಅಂಗಾಂಗಗಳನ್ನು ದಾನ ಮಾಡಿದರೆ ಮಾತ್ರ ವೈದ್ಯರು ಅದೆಷ್ಟೋ ಆಪರೇಷನ್‌ಗಳನ್ನು ಮಾಡಿ ಜನರನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು. ನಮ್ಮ ಸೌತ್ ಏಷಿಯನ್‌ ಕಂಟ್ರಿಗಳಲ್ಲಿ ಅಂಗಾಂಗ ದಾನಗಳ ಬಗ್ಗೆ ಹೆಚ್ಚಿನ ಮಹತ್ವ ಸಾರಬೇಕಿದೆ. ನನಗೂ ಅಂಗಾಂಗ ದಾನ ಮಾಡಬೇಕು ಅನ್ನೋ ಆಸೆ ಇದೆ ಹೀಗಾಗಿ ಆದಷ್ಟು ಆರೋಗ್ಯದ ಕಡೆ ಗಮನ ಹರಿಸುವೆ ನನ್ನ ಅಂಗಾಂಗಳನ್ನು ಚೆನ್ನಾಗಿ ನೋಡಿಕೊಳ್ಳುವೆ. ನನ್ನ ಅಂಗಾಂಗಗಳು ಆರೋಗ್ಯವಾಗಿದ್ದರೆ ಅದನ್ನು ಖಂಡಿತ ಬಳಸಿಕೊಳ್ಳಬೇಕು. ಹೀಗಾಗಿ ನನ್ನ ತಾಯಿ ಮತ್ತು ನಾನು ಪತ್ರಕ್ಕೆ ಸಹಿ ಹಾಕಿದ್ದೀವಿ. ಈ ಮೂಲಕ ನಾವು ಒಂದು ಜೀವ ಉಳಿಸುತ್ತೀವಿ ಹಾಗೇ ನಮ್ಮದೊಂದ ಭಾಗದ ಮೂಲಕ ಮತ್ತಷ್ಟು ದಿನ ಉಳಿದುಕೊಳ್ಳುತ್ತೀವಿ. ದಯವಿಟ್ಟು ಎಲ್ಲರು ಅಂಗಾಂಗ ದಾನ ಮಾಡಿ' ಎಂದು ವಿಜಯ್ ಮಾತನಾಡಿದ್ದಾರೆ.

ಯಶ್, ಪ್ರಭಾಸ್, ಹೃತಿಕ್, ರಣ್ವೀರ್ ರಿಜೆಕ್ಟ್ ಮಾಡಿದ ಪಾತ್ರದಲ್ಲಿ ವಿಜಯ್ ದೇವರಕೊಂಡ; ಯಾವ ಸಿನಿಮಾ?

ಎಷ್ಟೇ ಒಳ್ಳೆ ಕೆಲಸ ಮಾಡಿದ್ದರೂ ಕಾಲೆಳೆಯುವವರು ಇರುತ್ತಾರೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. 'ಲಕ್ಷ ಖರ್ಚು ಮಾಡಿ ಟ್ರಿಪ್ ಮಾಡ್ತೀರಾ ನೀವೇ ಒಬ್ಬರಿಗೆ ಆಪರೇಷನ್ ಮಾಡಿಸಿ ಬಿಡಿ' ಎಂದು ಒಂದು ಕಾಮೆಂಟ್ 'ಕುಡಿದು ಕುಡಿದು ಹಾಳಾಗಿರುತ್ತದೆ ದಾನ ಮಾಡಿ ಉಪಯೋಗವಿಲ್ಲ ಹೀಗಾಗಿ ಶೋಕಿಗೆ ಪತ್ರ ಸಹಿ ಮಾಡಬೇಡಿ' ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದಾನೆ. 

6 ಕೋಟಿ ಹಣ ಹಿಂದಿರುಗಿಸಿದ ವಿಜಯ್:

ಪುರಿ ಜಗನ್ನಾಥ್ ಅಕ್ಷನ್ ಕಟ್ ಹೇಳಿರುವ ಸಿನಿಮಾ ಸೂಪರ್ ಹಿಟ್ ಅಗುತ್ತಿತ್ತು ಆದರೆ ಪ್ರಚಾರದ ವೇಳೆ ಬಾಯ್ಕಾಟ್ ಮಾಡಿ ನೋಡೋಣ ಎಂದು ಕೊಟ್ಟ ಒಂದು ಹೇಳಿಕೆ ಇಡೀ ಸಿನಿಮಾ ತಂಡಕ್ಕೆ ಹೊಡೆತ ಬಿದಿದ್ದೆ. ತನ್ನಿಂದ ನಿರ್ದೇಶಕರಿಗೆ ಸಮಸ್ಯೆ ಆಗಬಾರದು ಎಂದು ವಿಜಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.ಹೌದು! ವಿಜಯ್ ದೇವರಕೊಂಡು 20 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಹೀಗಾಗಿ 6 ಕೋಟಿಯನ್ನು ನಿರ್ದೇಶಕರಿಗೆ ವಾಪಸ್ ಮಾಡಿದ್ದಾರೆ. ತೆಲುಗು ಜನಪ್ರಿಯ ಮಾಧ್ಯಮವೊಂದು ಲೈಗರ್ ತಂಡವನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಎನ್‌ವಿ ಪ್ರದಾಸ್‌ ಬಳಿ ಚಿತ್ರದ ನಷ್ಟಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಲ್ಲದೆ ಎಲ್ಲಾ ವಿತರಕರು ಸಭೆ ಸೇರಿ ನಿರ್ದೇಶಕರಿಗೆ ನಷ್ಟ ಆಗದಂತೆ ಇಷ್ಟು ಪರ್ಸೆಂಟ್ ಹಣ ನೀಡಬೇಕು ಎಂದು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios