Asianet Suvarna News Asianet Suvarna News

ಲೈಗರ್ ಸೋತಿದ್ದಕ್ಕೆ ನಿರ್ಮಾಪಕರಿಗೆ 6 ಕೋಟಿ ಹಣ ಹಿಂದಿರುಗಿಸಿದ Vijay Deverakonda!

ಬಾಕ್ಸ್‌ ಆಫೀಸ್‌ನಲ್ಲಿ ಸೋತ ಲೈಗರ್ ಸಿನಿಮಾ. ನಿರ್ದೇಶಕ ಪುರಿ ಜಗನ್ನಾಥ್‌ಗೆ 6 ಕೋಟಿ ಹಿಂತಿರುಗಿಸಿದ ಸ್ಟಾರ್ ನಟ..... 

Vijay Deverakonda return 6 crore to liger film team vcs
Author
First Published Sep 4, 2022, 5:44 PM IST

ಟಾಲಿವುಡ್ ಲವರ್ ಬಾಯ್ ವಿಜಯ್ ದೇವರಕೊಂಡ ಮತ್ತು ಬಾರ್ಬಿ ಡಾಲ್ ಅನನ್ಯಾ ಪಾಂಡೆ ನಟಿಸಿರುವ ಲೈಗರ್ ಸಿನಿಮಾ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿತ್ತು. ಪುರಿ ಜಗನ್ನಾಥ್ ಅಕ್ಷನ್ ಕಟ್ ಹೇಳಿರುವ ಸಿನಿಮಾ ಸೂಪರ್ ಹಿಟ್ ಅಗುತ್ತಿತ್ತು ಆದರೆ ಪ್ರಚಾರದ ವೇಳೆ ಬಾಯ್ಕಾಟ್ ಮಾಡಿ ನೋಡೋಣ ಎಂದು ಕೊಟ್ಟ ಒಂದು ಹೇಳಿಕೆ ಇಡೀ ಸಿನಿಮಾ ತಂಡಕ್ಕೆ ಹೊಡೆತ ಬಿದಿದ್ದೆ. ತನ್ನಿಂದ ನಿರ್ದೇಶಕರಿಗೆ ಸಮಸ್ಯೆ ಆಗಬಾರದು ಎಂದು ವಿಜಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಬಾಲಿವುಡ್‌ ಚಿತ್ರರಂಗ ಪ್ರವೇಶಿಸಲು ಲೈಗರ್ ಸಹಾಯ ಮಾಡುತ್ತದೆ ಎಂದು ವಿಜಯ್ ಅಂದುಕೊಂಡಿದ್ದರು ಆದರೆ boycott bollywood ಇಡೀ ಪ್ಲ್ಯಾನ್ ಫ್ಲಾಪ್ ಮಾಡಿದೆ. ಅಲ್ಲದೆ ಡಿಜಿಟಲ್ ರೈಟ್ಸ್‌ ಬಗ್ಗೆನೂ ಚರ್ಚೆ ಶುರುವಾಗಿದೆ. ಸ್ಟಾರ್ ನಿರ್ದೇಶಕರಿಗೆ ಅವಮಾನ ಆಗುತ್ತಿದೆ ಎಂದು ವಿಜಯ್ ಪಡೆದುಕೊಂಡಿರುವ ಸಂಭಾವನೆಯಲ್ಲಿ ದೊಡ್ಡ ಪಾಲನ್ನು ತಂಡಕ್ಕೆ ಹಿಂತಿರುಗಿಸಿದ್ದಾರೆ ಎನ್ನಲಾಗಿದೆ.

ನಡು ರಸ್ತೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡ ವಿಜಯ್ ದೇವರಕೊಂಡ; ವಿಡಿಯೋ ವೈರಲ್!

ಹೌದು! ವಿಜಯ್ ದೇವರಕೊಂಡು 20 ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಹೀಗಾಗಿ 6 ಕೋಟಿಯನ್ನು ನಿರ್ದೇಶಕರಿಗೆ ವಾಪಸ್ ಮಾಡಿದ್ದಾರೆ. ತೆಲುಗು ಜನಪ್ರಿಯ ಮಾಧ್ಯಮವೊಂದು ಲೈಗರ್ ತಂಡವನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಎನ್‌ವಿ ಪ್ರದಾಸ್‌ ಬಳಿ ಚಿತ್ರದ ನಷ್ಟಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಲ್ಲದೆ ಎಲ್ಲಾ ವಿತರಕರು ಸಭೆ ಸೇರಿ ನಿರ್ದೇಶಕರಿಗೆ ನಷ್ಟ ಆಗದಂತೆ ಇಷ್ಟು ಪರ್ಸೆಂಟ್ ಹಣ ನೀಡಬೇಕು ಎಂದು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. 

ಲೈಗರ್ ಬಗ್ಗೆ ವಿಜಯ್ ಮಾತು:

'ಪ್ಯಾನ್‌ ಇಂಡಿಯಾ ಸಿನಿಮಾ ಎನ್ನುವ ಕಾರಣಕ್ಕೆ ಎಲ್ಲಾ ಭಾಷೆಗಳಲ್ಲಿ ನಾನೇ ಡಬ್‌ ಮಾಡಿ ಆ ಭಾಷೆಯನ್ನು ತಪ್ಪಾಗಿ ಮಾತನಾಡುವುದು ಬೇಡ. ‘ಆರ್‌ಆರ್‌ಆರ್‌’ ಚಿತ್ರದಲ್ಲಿ ಜೂ.ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ತೇಜ ತಮ್ಮ ಪಾತ್ರಗಳಿಗೇ ತಾವೇ ಕನ್ನಡದಲ್ಲೇ ಡಬ್‌ ಮಾಡಿದ್ದಾರೆ. ಅವರಂತೆ ನಾನು ಭಾಷೆ ಕಲಿತಿಲ್ಲ. ಮುಂದಿನ ದಿನಗಳಲ್ಲಿ ಭಾಷೆಯನ್ನು ಕಲಿತು ನಾನೇ ಡಬ್‌ ಮಾಡುತ್ತೇನೆ.ಚಿತ್ರದ ಸಬ್‌ ಟೈಟಲ್‌ನಲ್ಲೇ ಒಂದು ಸಾಲು ಇದೆ. ನನ್ನ ಪಾತ್ರ ಬೀಸ್ಟ್‌ ಇದ್ದಂತೆ. ಅಂದರೆ ಲಯನ್‌ ಹಾಗೂ ಟೈಗರ್‌ ಸೇರಿದಾಗ ಹುಟ್ಟುವುದೇ ಲೈಗರ್‌. ನನ್ನ ತಾಯಿ ಪಾತ್ರ ಟೈಗರ್‌ನಂತೆ. ತಂದೆ ಲಯನ್‌. ಪೂರ್ತಿ ಹೆಸರು ಲಯನ್‌ ಬಲರಾಮ್‌. ಇವರ ಮಗನ ಕ್ಯಾರೆಕ್ಟರ್‌ ಲೈಗರ್‌. ತುಂಬಾ ಕುತೂಹಲಕಾರಿಯಾಗಿರುವ ಹೆಸರು ಇದು. ಕತೆಗೆ ಈ ಹೆಸರು ಸಂಬಂಧ ಇದೆ.' ಎಂದು ವಿಜಯ್ ಹೇಳಿದ್ದಾರೆ.

ಲೈಗರ್‌ಗೂ ತಟ್ಟಿತಾ Boycott ಬಿಸಿ: ಕರ್ನಾಟಕದಲ್ಲಿ ಸಿನಿಮಾಗೆ No ಎಂದ ಪ್ರೇಕ್ಷಕರು

ಲೈಗರ್ ವಿಮರ್ಶೆ:

ಲಯನ್‌ ಹಾಗೂ ಟೈಗರ್‌ ಸೇರಿದರೆ ಹುಟ್ಟುವ ಜೀವಿ ಹೇಗಿರುತ್ತದೆ ಎನ್ನುವ ರೋಮಾಂಚಕಾರಿ ಕಲ್ಪನೆಗೆ ತಕ್ಕಂತೆ ವಿಜಯ್‌ ದೇವರಕೊಂಡ ಪಾತ್ರವನ್ನು ರೂಪಿಸಿ ‘ಲೈಗರ್‌’ ಚಿತ್ರವನ್ನು ಕಟ್ಟಿದ್ದಾರೆ ನಿರ್ದೇಶಕ ಪುರಿ ಜಗನ್ನಾಥ್‌. ಫೈಟರ್‌ ಆಗಿ ಹೆಸರು ಮಾಡಬೇಕು ಎಂದುಕೊಂಡಿದ್ದ ನಾಯಕನ ತಂದೆ ತೀರಿಕೊಂಡಿದ್ದಾನೆ. ಆತನ ಮಗ ಈಗ ಬಾಕ್ಸಿಂಗ್‌ ರಿಂಗ್‌ನಲ್ಲಿದ್ದಾನೆ. ನಾಯಕನ ತಾಯಿಗೆ ಮಗ, ತನ್ನ ಗಂಡನ ಆಸೆ ಈಡೇರಿಸಲಿ ಎನ್ನುವ ಕನಸು. ಆ ಕನಸಿಗೆ ಸಾಥ್‌ ಕೊಡುವ ಕೋಚ್‌. ಅಮ್ಮ-ಮಗನ ಭಾವನೆಗಳ ಮೇಲೆ ನಿಂತಿರುವ ಈ ಸಿನಿಮಾ ಮುಂದೆ ಹೇಗೆ ಸಾಗುತ್ತದೆ ಎನ್ನುವುದು ತೆರೆ ಮೇಲೆ ನೋಡಬೇಕು. ಜತೆಗೆ ಗ್ಲಾಮರ್‌ ಶೋನಂತಿರುವ ನಾಯಕಿ ಪಾತ್ರ ನಾಯಕನ ಜೀವನದಲ್ಲಿ ಎಂಥ ತಿರುವು ಕೊಡುತ್ತದೆ ಎಂಬುದು ಕುತೂಹಲದ ಅಂಶ.ಆದರೆ, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಬಂದಿಲ್ಲ. ಚಿತ್ರದ ಆರಂಭದಲ್ಲೇ ಬರುವ ‘ನನಗೆ ಸ್ಟೋರಿ ಹೇಳಕ್ಕೆ ಬರಲ್ಲ’ ಎನ್ನುವ ನಾಯಕನ ಡೈಲಾಗ್‌ನಂತೆ ನಿರ್ದೇಶಕರಿಗೆ ಸ್ಟೋರಿ ಹೇಳುವುದಕ್ಕಿಂತ ದೃಶ್ಯಗಳನ್ನು ತೋರಿಸುವುದೇ ಮುಖ್ಯ ಆಗಿತ್ತೋ ಏನೋ. ಹೀಗಾಗಿ ಅವರು ಕತೆ ಕತೆಯನ್ನು ಮೂಲೆಗುಂಪು ಮಾಡಿ, ಮೇಕಿಂಗ್‌ ಮತ್ತು ದೃಶ್ಯಗಳನ್ನೇ ನಂಬಿಕೊಂಡಿದ್ದಾರೆ.

Follow Us:
Download App:
  • android
  • ios